37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿಯ ವಕೀಲರ ಸಂಘದ ಚುನಾವಣೆ: ಬಿರುಸಿನ ಮತದಾನ

ಬೆಳ್ತಂಗಡಿ: ಬೆಳ್ತಂಗಡಿಯ ವಕೀಲರ ಸಂಘದ ಚುನಾವಣೆಯಲ್ಲಿ ಬಿರುಸಿನ ಮತದಾನ ನಡೆಯುತ್ತಿದ್ದು ಘಟಾನುಘಟಿಗಳು ಸ್ಪರ್ಧೆಗೆ ಇಳಿದಿರುವುದರಿಂದ ಚುನಾವಣಾ ಕಣ ಜಿದ್ದಾಜಿದ್ದಿನಿಂದ ಕೂಡಿದೆ.

ಬೆಳಿಗ್ಗೆ ಗಂಟೆ 10.30 ರಿಂದ ಮತದಾನ ಪ್ರಕ್ರಿಯೆಗಳು ಪ್ರಾರಂಭಗೊಂಡಿದ್ದು, ಮತದಾನವು ಸಂಜೆ 4 ಗಂಟೆಯ ತನಕ ನಡೆಯಲಿದೆ. ಬಳಿಕ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ.

ಅಧ್ಯಕ್ಷ ಸ್ಥಾನಕ್ಕೆ ಹಿರಿಯ ವಕೀಲರಾದ ಅಲೋಶಿಯಸ್ ಎಸ್. ಲೋಬೊ ಮತ್ತು ಕೇಶವ ಪಿ. ಬೆಳಾಲು ನಡುವೆ ನೇರ ಹಣಾಹಣಿ ಉಂಟಾಗಿದ್ದು ತೀವ್ರ ಪೈಪೋಟಿ ಏರ್ಪಟ್ಟಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಏಕೈಕ ಅಭ್ಯರ್ಥಿಯಾಗಿದ್ದ ಶ್ರೀನಿವಾಸ ಗೌಡ ಬೆಳಾಲು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಹರಿಪ್ರಕಾಶ್ ಪಿ.ಎನ್. ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವರು ಅವಿರೋಧ ಆಯ್ಕೆ ಆಗುತ್ತಾರೆ ಎಂದು ಅಂದಾಜಿಸಲಾಗಿತ್ತು. ಆದರೆ, ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಹರಿಪ್ರಕಾಶ್ ಪಿ.ಎನ್. ನಾಮಪತ್ರ ಹಿಂಪಡೆದಿದ್ದು ಆ ಸ್ಥಾನಕ್ಕೆ ಯಾರೂ ಅಭ್ಯರ್ಥಿಗಳೇ ಇಲ್ಲದಂತಾಗಿದೆ. ಹೊಸ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆದ ಬಳಿಕ ಪ್ರಧಾನ ಕಾರ್ಯದರ್ಶಿಯನ್ನು ಆಯ್ಕೆ ಮಾಡಲಾಗುತ್ತದೆ.

Related posts

ಜೆಸಿಐ ಬೆಳ್ತಂಗಡಿ ಮಂಜುಶ್ರೀ ಮತ್ತು ಮಹಿಳಾ ಮಂಡಳಿಯಿಂದ ಮಹಿಳಾ ದಿನಾಚರಣೆ

Suddi Udaya

ಫೆ.1-5: ಶ್ರೀ ಉಮಾಮಹೇಶ್ವರ ದೇವಸ್ಥಾನ ಆಲಡೆ ಕ್ಷೇತ್ರ ಮರೋಡಿಯಲ್ಲಿ ವರ್ಷಾವಧಿ ಆಯನ ಮತ್ತು ಸಿರಿಗಳ ಜಾತ್ರೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹಿರಿಯ ನಟಿ ಶೃತಿ ಹಾಗೂ ನಿರ್ದೆಶಕ ತರುಣ್ ಸುಧೀರ್ ದಂಪತಿ ಭೇಟಿ

Suddi Udaya

ಆ.1 ರಿಂದ 15ರ ವರೆಗೆ ಶ್ರೀ ದುರ್ಗಾ ಟೆಕ್ಸ್ ಟೈಲ್ಸ್ ನಲ್ಲಿ ಸಾರಿಮೇಳ: ಗ್ರಾಹಕರಿಗೆಂದೇ ಆಯ್ದು ತಂದ ವಿವಿಧ ಉಡುಪುಗಳ ಮೇಲೆ ಡಿಸ್ಕೌಂಟ್ ಸೇಲ್

Suddi Udaya

ಧರ್ಮಸ್ಥಳ: ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಬೆಳ್ಳಿಹಬ್ಬ ಸಂಭ್ರಮ: ರಜತ ಸಂಚಿಕೆ ಲೋಕಾರ್ಪಣೆ – ಸಾಧಕರಿಗೆ ಸನ್ಮಾನ

Suddi Udaya

ಬೆಳ್ತಂಗಡಿ ಶ್ರೀ ಗುರುದೇವ ಪ್ರ.ದ. ಕಾಲೇಜಿನಲ್ಲಿ ಯೋಗ ದಿನಾಚರಣೆ

Suddi Udaya
error: Content is protected !!