37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಲಾಯಿಲ ಗ್ರಾಮ ಪಂಚಾಯತ್ ನಲ್ಲಿ ವಿಶೇಷ ಚೇತನರ ಸಮನ್ವಯ ಗ್ರಾಮ ಸಭೆ

ಲಾಯಿಲ ಗ್ರಾಮ ಪಂಚಾಯತ್ ನಲ್ಲಿ 2025-26 ನೇ ಸಾಲಿನ ವಿಶೇಷ ಚೇತನರ ಸಮನ್ವಯ ಗ್ರಾಮ ಸಭೆಯನ್ನು ಹಮ್ಮಿಕೊಳ್ಳಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷೆ ಜಯಂತಿ ಎಂ ಕೆ ವಹಿಸಿದರು. ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷರು, ಸದಸ್ಯರಾದ ಜಯಂತಿ ಆಶಾಸಾಲ್ದಾನ, ರಜನಿ ಎಂ ಆರ್, ಅರವಿಂದ ಕುಮಾರ್, ಲೆಕ್ಕಸಹಾಯಕರಾದ ಸುಪ್ರಿತಾ ಶೆಟ್ಟಿ ಮತ್ತು ಅರೋಗ್ಯ ಕಾರ್ಯಕರ್ತೆ ಸರಸ್ವತಿ ಆಶಾಕಾರ್ಯಕರ್ತರು ಹಾಗೂ ಇಂದಬೆಟ್ಟು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರದ ಜೋಸೆಫ್ ರವರು ಹಾಜರಿದ್ದು ವಿಶೇಷ ವಿಕಲಚೇತನ ರಿಗೆ ಸಿಗುವ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು.

ಸೌಭಾಗ್ಯ ವಿಕಲಚೇತನರ ಪತ್ತಿನ ಸಹಕಾರಿ ಸಂಘದ ವ್ಯವಸ್ಥಾಪಕರು ಉಪಸ್ಥಿತರಿದ್ದರು. ವಿಕಲಚೇತನರಿಗೆ ಬ್ಯಾಂಕಿನಿಂದ ಸಿಗುವ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು. ಆಯ್ದ ಫಲಾನುಭವಿಗಳಿಗೆ ಪಂಚಾಯತ್ ವತಿಯಿಂದ ವೀಲ್ ಚೇರ್, ವಾಕರ್ ವಿತರಿಸಲಾಯಿತು. ಗ್ರಾಮ ಸಭೆಗೆ ಆಗಮಿಸಿದ ಎಲ್ಲಾರಿಗೂ ಅರೋಗ್ಯ ತಪಾಸಣೆಯನ್ನು ಏರ್ಪಡಿಸಲಾಗಿತ್ತು.

ವಿಶೇಷವಾಗಿ ಪಂಚಾಯತ್ ನಲ್ಲಿ ಸೇವೆ ಸಲಿಸುತ್ತಿರುವ ವಿ ಆರ್ ಡಬ್ಲ್ಯೂ ಸೋಮನಾಥ ಹಾಗೂ ಸ್ವಚ್ಛತಾ ಸಿಬ್ಬಂದಿ ಯೋಗೀಶ್ ಇವರಿಗೆ ಉತ್ತಮ ಸೇವಾ ಮನೋಭಾವಕ್ಕೆ ಗೌರವ ಸನ್ಮಾನ ಹಮ್ಮಿಕೊಳ್ಳಲಾಯಿತು. ಪಂಚಾಯತ್ ಲೆಕ್ಕ ಸಹಾಯಕಿ ಸುಪ್ರೀತಾ ಶೆಟ್ಟಿ ನಿರೂಪಿಸಿ, ಧನ್ಯವಾದವಿತ್ತರು.

ಗ್ರಾಮ ಪಂಚಾಯತ್ ಬಿಲ್ ಕಲೆಕ್ಟರ್ ಮೋಹನ್ ಜಮಾ ಖರ್ಚು ಮಂಡನೆ ಮಾಡಿದರು. ಸಿಬ್ಬಂದಿಗಳು ಸಹಕರಿಸಿದರು.

Related posts

 ನಕ್ಸಲ್ ಚಳವಳಿಯ ಕೊನೆಯ ವ್ಯಕ್ತಿ ನಕ್ಸಲ್ ರವೀಂದ್ರ ಶರಣಾಗತಿ

Suddi Udaya

ಉಜಿರೆ ಅನುಗ್ರಹ ಶಾಲೆಯಲ್ಲಿ “ಸ್ವಭಾವವನ್ನು ಬೆಳೆಸಿ, ಭವಿಷ್ಯವನ್ನು ರೂಪಿಸೋಣ” ವಿಶೇಷ ಕಾರ್ಯಕ್ರಮ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ರೂ. 25 ಸಾವಿರ ಸಹಾಯಧನ ವಿತರಣೆ

Suddi Udaya

ಮೇ 22: ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೃಢಕಲಶ

Suddi Udaya

ಬೆಳ್ತಂಗಡಿ ಗ್ರಾಹಕರಿಗೆ ಸುವರ್ಣಾವಕಾಶ, ಯಾವುದೇ ಬಟ್ಟೆ ಖರೀದಿಸಿದರೂ ರೂ. 200 ಮಾತ್ರ

Suddi Udaya

ಉಜಿರೆ: ಪಾದಚಾರಿಗಳ ಮೇಲೆ ಹರಿದ ಲಾರಿ: ಇಬ್ಬರು ಸಾವು

Suddi Udaya
error: Content is protected !!