38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

8ನೇ ರಾಷ್ಟ್ರೀಯ ಪ್ರಾಕೃತಿಕ ಚಿಕಿತ್ಸೆ ದಿನದ ಪ್ರಯುಕ್ತ ಎಸ್.ಡಿ.ಎಂ. ನ್ಯಾಚುರೋಪತಿ ಕಾಲೇಜಿನಿಂದ ಪ್ರಾಕೃತಿಕ ಚಿಕಿತ್ಸೆ ಜಾಗೃತಿ ಮತ್ತು ಆರೋಗ್ಯ ಶಿಬಿರ

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ನೈಸರ್ಗಿಕ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ 8ನೇ ರಾಷ್ಟ್ರೀಯ ಪ್ರಾಕೃತಿಕ ಚಿಕಿತ್ಸೆ ದಿನದ ಪ್ರಯುಕ್ತ ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಪ್ರಾಕೃತಿಕ ಚಿಕಿತ್ಸೆ ಜಾಗೃತಿ ಮತ್ತು ಆರೋಗ್ಯ ಶಿಬಿರ ಕಾರ್ಯ ಕ್ರಮವನ್ನು ಹಮ್ಮಿಕೊಂಡಿತು.

ಸವಣಾಲು ಅಂಗನವಾಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜನರಿಗೆ ನೈಸರ್ಗಿಕ ಚಿಕಿತ್ಸೆಯ ಮಹತ್ವವನ್ನು ವಿವರಿಸಿ, ಅದರ ವಿವಿಧ ವಿಧಗಳು ಹಾಗೂ ಅದರ ಪ್ರಯೋಜನಗಳ ಬಗ್ಗೆ ತಿಳಿಸಲಾಯಿತು. ಶಿಬಿರದ ಪ್ರಯುಕ್ತ ರಕ್ತದೊತ್ತಡವನ್ನು ಪರೀಕ್ಷಿಸಲಾಯಿತು.

ವೇಣೂರು ಪೊಲೀಸ್ ಠಾಣೆಯಲ್ಲಿ ನೈಸರ್ಗಿಕ ಚಿಕಿತ್ಸಾ ಜಾಗೃತಿ ಮತ್ತು ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ನೈಸರ್ಗಿಕ ಚಿಕಿತ್ಸೆ ದೇಹದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಕುರಿತು ತಿಳಿಸಲಾಯಿತು.

ಮನೆಯಲ್ಲಿ ಅನುಸರಿಸಬಹುದಾದ ಸರಳ ಮನೆಮದ್ದುಗಳು ಹಾಗೂ ಸಾಮಾನ್ಯ ಕಾಯಿಲೆಗಳಿಗೆ ನೈಸರ್ಗಿಕ ಚಿಕಿತ್ಸೆ ವಿಧಾನಗಳು ಹೇಗೆ ಅಗತ್ಯ ಬೀಳುವುದು ಎಂಬುದರ ಕುರಿತು ಪ್ರದರ್ಶನ ಹಾಗೂ ಚರ್ಚೆ ನಡೆಯಿತು. ಜತೆಗೆ ಹೈಡ್ರೋಥೆರಪಿ, ಮಡ್ ಥೆರಪಿ, ಡಯಟ್ ಥೆರಪಿ ಮತ್ತು ಯೋಗ ಕ್ರಮಗಳು ಸೇರಿದಂತೆ ನೈಸರ್ಗಿಕ ಚಿಕಿತ್ಸೆಯ ವಿವಿಧ ಅಂಶಗಳನ್ನು ಪರಿಚಯಿಸಲಾಯಿತು. ಪೊಲೀಸ್ ಅಧಿಕಾರಿಗಳು ಮತ್ತು ಸಿಬಂದಿ ಸೇರಿ ಹೆಚ್ಚಿನ ಮಂದಿ ಭಾಗವಹಿಸಿದ್ದರು.

ಉಳಿದಂತೆ ಬೆಳ್ತಂಗಡಿ ಕುತ್ಯಾರು ದೇವಸ್ಥಾನ, ಲಾಯಿಲ ಪುತ್ರಬೈಲು ಸಮಾಜಮಂದಿರದಲ್ಲಿ, ಗುರುವಾಯನಕೆರೆ ಶಕ್ತಿನಗರ, ಗೇರುಕಟ್ಟೆ, ಮುಗುಳಿ ವಸತಿ ಶಾಲೆಗಳಲ್ಲಿ ಶಿಬಿರ ನಡೆಸಲಾಯಿತು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ನೈಸರ್ಗಿಕ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯದ ಡಾ.ಭಾಷಿಣಿ ನೇತೃತ್ವದಲಿ ವೈಷ್ಣವಿ, ನಿಶಿತಾ ಮತ್ತು ಮೇಘಶ್ರೀ ಶಿಬಿರ ನಡೆಸಿಕೊಟ್ಟರು.

ಕಾಲೇಜಿನಿಂದ ನ.18 ರವರೆಗೆ ರಾಜ್ಯದ 234 ತಾಲೂಕಗಳಲ್ಲಿ ಶಿಬಿರವನ್ನು ಆಯೋಜಿಸಿದೆ.

Related posts

ನಾಪತ್ತೆಯಾಗಿದ್ದ ಮಾಚಾರು ನಿವಾಸಿ ಆಟೋ ಚಾಲಕ ಸುಧಾಕರ್ ಮೃತದೇಹ ನೆಲ್ಲಿಕಾರ್ ಕಾಡಿನಲ್ಲಿ ನೇಣು ಹಾಕಿಕೊಂಡ ರೀತಿಯಲ್ಲಿ ಪತ್ತೆ

Suddi Udaya

ಉಜಿರೆ: ಪಾಂಡುರಂಗ ಕಾಕತ್ಕರ್ ನಿಧನ

Suddi Udaya

ತುಳುವೆರೆ ಪಕ್ಷದ ಅಭ್ಯರ್ಥಿ ಶೈಲೇಶ್ ಆರ್. ಜೆ. ಮತದಾನ

Suddi Udaya

ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಯಲ್ಲಿ ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಹಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ

Suddi Udaya

ಪುಂಜಾಲಕಟ್ಟೆ: ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ ಶೈಕ್ಷಣಿಕ ಪ್ರಗತಿ- ಮಿಂಚಿನ ಸಂಚಾರ ಇಲಾಖಾ ತಂಡ ಭೇಟಿ

Suddi Udaya

ಪಾರೆಂಕಿ: ರಸ್ತೆಗೆ ಬಿದ್ದ ಬೃಹತ್ ಗಾತ್ರದ ಮರ: ರಸ್ತೆ ಸಂಚಾರ ಅಸ್ತವ್ಯಸ್ತ: ಸ್ಥಳೀಯರಿಂದ ತೆರವು ಕಾರ್ಯ

Suddi Udaya
error: Content is protected !!