September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿವರದಿ

ಸಿಯೋನ್ ಆಶ್ರಮದ ನಿವಾಸಿಗಳಿಗಾಗಿ ಮೂಗ್ ಇಂಡಿಯಾದ ಸಿ ಎಸ್ ಆರ್ ಯೋಜನೆಯಡಿ ಮೌಲ್ಯಮಯ ಕೊಡುಗೆ

ಬೆಳ್ತಂಗಡಿ : ಮೂಗ್ ಇಂಡಿಯಾ ಟೆಕ್ನಾಲಜಿ ಸೆಂಟರ್, ಬೆಂಗಳೂರು ಇವರಿಂದ 2025–26ನೇ ಸಾಲಿನ ಸಿ.ಎಸ್.ಆರ್. ಯೋಜನೆಯಡಿ ಸಿಯೋನ್ ಆಶ್ರಮದ ನಿವಾಸಿಗಳಿಗಾಗಿ ಇಡ್ಲಿ ಸ್ಟೀಮರ್ ನ್ನು ಕೊಡುಗೆಯಾಗಿ ನೀಡಲಾಯಿತು.

ಇದರ ಉದ್ಘಾಟನಾ ಕಾರ್ಯಕ್ರಮವು ನ. 21 ರಂದು ಸಿಯೋನ್ ಆಶ್ರಮದಲ್ಲಿ ಜರುಗಿತು. ಕಾರ್ಯಕ್ರಮವನ್ನು ಮೂಗ್ ಇಂಡಿಯಾ ಟೆಕ್ನಾಲಜಿ ಸೆಂಟರ್‌ನ ಪ್ರಮುಖರಾದ ಶ್ರೀಮತಿ ಆಗ್ನೇಸ್ ನೋಯೆಲ್ ಮಿರಾಂದರವರು ಉದ್ಘಾಟಿಸಿ, ಆಶ್ರಮದ ಅಭಿವೃದ್ಧಿಗೆ ಹಾರೈಸಿದರು. ಈ ಸಂದರ್ಭದಲ್ಲಿ ಸಿಯೋನ್ ಆಶ್ರಮದ ಮ್ಯಾನೇಜಿಂಗ್ ಟ್ರಸ್ಟಿ ಡಾ. ಯು.ಸಿ. ಪೌಲೋಸ್ ರವರು ಮಾತನಾಡಿ, ಮೂಗ್ ಇಂಡಿಯಾ ಸಂಸ್ಥೆಯ ಮಹತ್ಕಾರ್ಯ ಹಾಗೂ ಸೇವಾಭಾವಕ್ಕೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಸಿಯೋನ್ ಸಂಸ್ಥೆಯ ಟ್ರಸ್ಟಿ ಸದಸ್ಯೆ ಶ್ರೀಮತಿ ಮೇರಿ ಯು.ಪಿ., ಆಡಳಿತಾಧಿಕಾರಿ ಶೋಭಾ ಯು.ಪಿ., ಲೆಕ್ಕಾಧಿಕಾರಿ ಸೌಮ್ಯ ಯು.ಪಿ., ಸಂಸ್ಥೆಯ ಆಡಳಿತ ವರ್ಗದವರು, ಸಿಬ್ಬಂದಿವರ್ಗ ಮತ್ತು ಆಶ್ರಮದ ನಿವಾಸಿಗಳೆಲ್ಲರೂ ಉಪಸ್ಥಿತರಿದ್ದರು.

Related posts

ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 80 ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಐದನೇ ವರ್ಷದ ದೀಪಾವಳಿ ದೋಸೆ ಹಬ್ಬ

Suddi Udaya

ಅಗ್ರಿಲೀಫ್ ಸಂಸ್ಥೆಯಲ್ಲಿ ಅಪರಾಧ ತಡೆ ಮತ್ತು ಮಾದಕ ದ್ರವ್ಯಗಳ ವ್ಯಸನದ ಕುರಿತು ಮಾಹಿತಿ ಕಾರ್ಯಕ್ರಮ

Suddi Udaya

ಪುಂಜಾಲಕಟ್ಟೆ: ಹಟ್ಟತ್ತೋಡಿ ನಿವಾಸಿ ಕೃಷಿಕ ಗೋವಿಂದ ಗೌಡ ನಿಧನ

Suddi Udaya

ತಾಲೂಕು ಮಟ್ಟದ ದಸರಾ ಕ್ರೀಡಾಕೂಟ: ತ್ರೋಬಾಲ್ ಪಂದ್ಯಾಟದಲ್ಲಿ ಜೈ ಶ್ರೀ ರಾಮ್ ಫ್ರೆಂಡ್ಸ್ ಮುರ ತಂಡ ದ್ವಿತೀಯ ಸ್ಥಾನ

Suddi Udaya

ಕೊಕ್ಕಡ: ಕಾಡಾನೆ ಪ್ರತ್ಯಕ್ಷ

Suddi Udaya
error: Content is protected !!