ಪುಂಜಾಲಕಟ್ಟೆ: ಬಂಟ್ವಾಳ ತಾಲೂಕು ಪೆರ್ವಾರು ಮನೆಯ ದಿ.ಬಾಬು ಶೆಟ್ಟಿಯವರ ಧರ್ಮಪತ್ನಿ ಗುರುವಾಯನಕೆರೆ ವೈಭವ್ ಹಾರ್ಡ್‌ವೇರ್ ಮಾಲೀಕ ಸೀತರಾಮ ಶೆಟ್ಟಿಯವರ ಮಾತೃಶ್ರೀ ಸೋಮಕ್ಕ (ಲೀಲಾ ಶೆಟ್ಟಿ) (85ವ) ಅವರು ಅಲ್ಪಕಾಲದ ಅಸೌಖ್ಯದಿಂದ ನ.23 ರಂದು ಸ್ವ ಗೃಹದಲ್ಲಿ ನಿಧನರಾದರು.
ಮೃತರು ನಾಲ್ಕು ಪುತ್ರರಾದ ಸೀತರಾಮ ಶೆಟ್ಟಿ, ಶೇಖರ್ ಶೆಟ್ಟಿ, ಪ್ರಶಾಂತ್ ಶೆಟ್ಟಿ,ಹರೀಶ್ ಶೆಟ್ಟಿ, ಒರ್ವೆ ಪುತ್ರಿ ರೂಪಾ ಶೆಟ್ಟಿ ಹಾಗೂ ಅಪಾರ ಪ್ರಮಾಣದ ಬಂಧು ಬಳಗದವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ನ 24 ರ ಬೆಳಿಗ್ಗೆ 8.30ಕ್ಕೆ ಪುಂಜಾಲಕಟ್ಟೆ ಪೆರ್ವಾರುವಿನಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.











