ಧರ್ಮಸ್ಥಳ: ಸುಮಾರು 55-60 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹವು ಕೊಳೆತ ಸ್ಥಿತಿಯಲ್ಲಿ ನ.23ರಂದು ಧರ್ಮಸ್ಥಳ ನೇತ್ರಾವತಿ ನದಿ ನೀರಿನಲ್ಲಿ ಪತ್ತೆಯಾಗಿರುತ್ತದೆ.
ಮೃತದೇಹದ ಮೈಮೇಲೆ ನಸು ಹಸಿರು ಬಣ್ಣದ ಉದ್ದ ತೋಳಿನ ಶರ್ಟ್, ಅರ್ದ ತೋಳಿನ ಬಿಳಿ ಬಣ್ಣದ ಬನಿಯನ್, ಕಾಫಿ ಬಣ್ಣದ ಒಳಚಡ್ಡಿ, ನಸು ಹಸಿರು ಬಣ್ಣದ ಪಟ್ಟಿ ಇರುವ ಬಿಳಿ ಪಂಚೆ,ಕೆಂಪು ಉಡಿದಾರ ಧರಿಸಿಕೊಂಡಿದ್ದು, ಮೃತರ ವಾರೀಸುದಾರರು ಪತ್ತೆಯಾದಲ್ಲಿ ಧರ್ಮಸ್ಥಳ ಠಾಣೆಯ ಪಿಎಸ್ಐ 8277986449 ಮತ್ತು ಬೆಳ್ತಂಗಡಿ ಗ್ರಾಮಾಂತರ ವೃತ್ತ ನಿರೀಕ್ಷಕರು: 9480805336 ನಂಬರಿಗೆ ಮಾಹಿತಿ ನೀಡುವುದು.











