ಬಳಂಜ ವಲಯದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ದಲ್ಲಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬದ ಪ್ರಯುಕ್ತ ವಿಷ್ಣು ಮೂರ್ತಿ ದೇವರಿಗೆ ವಿಶೇಷ ಪೂಜೆ ಸಲ್ಲಿಸುವುದರ ಜೊತೆಗೆ ವಿಷ್ಣು ಸಹಸ್ರ ನಾಮ, ಹಾಲು ಪಾಯಸ ಸೇವೆ, ಸಿಯಾಳ ಅಭಿಷೇಕ ಸೇವೆ ಮಾಡಲಾಯಿತು.
ಕಾರ್ಯಕ್ರಮ ದಲ್ಲಿ ಜನಜಾಗೃತಿ ವೇದಿಕೆ ಯ ಸ್ಥಾಪನಾಧ್ಯಕ್ಷ ಕೆ ವಸಂತ ಸಾಲ್ಯಾನ್ , ಗಣ್ಯರಾದ ಅರ್ಕಕೀರ್ತಿ ಹೆಗ್ಗಡೆ, ವಲಯದ ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು, ಭಜನಾ ಪರಿಷತ್ ಕಾರ್ಯದರ್ಶಿಗಳು, ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಜ್ಞಾನವಿಕಾಸ ಕೇಂದ್ರದ ಸದಸ್ಯರು, ಸಂಘದ ಸದಸ್ಯರು ಉಪಸ್ಥಿತರಿದ್ದರು.











