September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಜೆಸಿಐ ಬೆಳ್ತಂಗಡಿಯಿಂದ ಪ್ರವರ್ತಿತಗೊಂಡು ಜೆಸಿಐ ಉಜಿರೆ ಸಿಟಿ ಘಟಕದ ಮರು ಸ್ಥಾಪನೆ: ಯುವ ಉದ್ಯಮಿ ಮಹಮ್ಮದ್ ಮಿರ್ಷಾದ್ ಅಧ್ಯಕ್ಷರಾಗಿ ಪದ ಸ್ವೀಕಾರ.

ಬೆಳ್ತಂಗಡಿ: ಸುಮಾರು 35 ವರ್ಷ ಇತಿಹಾಸ ಹೊಂದಿದ್ದ ಜೆಸಿಐ ಉಜಿರೆ ಘಟಕವು ಜೆಸಿಐ ಬೆಳ್ತಂಗಡಿಯಿಂದ ಪ್ರವರ್ತಿತಗೊಂಡು ಜೆಸಿಐ ಉಜಿರೆ ಸಿಟಿ ಎಂಬ ನಾಮಕರಣದೊಂದಿಗೆ ಸೆ.26 ರಂದು ಉಜಿರೆಯಲ್ಲಿ ಮರುಸ್ಥಾಪನೆಯಾಯಿತು. ಉಜಿರೆಯ ಪ್ರಗತಿ ಮಹಿಳಾ ಮಂಡಲ ಸಭಾಂಗಣದಲ್ಲಿ ನಡೆದ ಸರಳ ಪದಪ್ರಧಾನ ಸಮಾರಂಭದಲ್ಲಿ ಜೆಸಿಐ ಬೆಳ್ತಂಗಡಿಯ ಘಟಕಾಧ್ಯಕ್ಷೆ ಜೇಸಿ ಆಶಾಲತಾ ಪ್ರಶಾಂತ್ ರವರು ಸಭಾಧ್ಯಕ್ಷತೆ ವಹಿಸಿ, ಸ್ವಾಗತಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಜೆಸಿಐ ಭಾರತದ ರಾಷ್ಟೀಯ ತರಬೇತುದಾರರಾದ, ಉಜಿರೆ ಎಸ್.ಡಿ.ಎಮ್ ಪದವಿಪೂರ್ವ ವಸತಿ ಕಾಲೇಜು ಉಜಿರೆ ಇದರ ನಿವೃತ್ತ ಪ್ರಾಂಶುಪಾಲರು ಡಾ. ಟಿ. ಕೃಷ್ಣಮೂರ್ತಿಯವರು ಜೆಸಿಐ ಉಜಿರೆ ಸಿಟಿ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ತರಬೇತಿಯೇ ಜೆಸಿ ಸಂಸ್ಥೆಯ ಜೀವಾಳ, ತರಬೇತಿಯಿಂದ ಸಾಮಾನ್ಯನು ಅಸಾಮಾನ್ಯ ನಾಗಬಲ್ಲನು ಎಂದು ಉದಾಹರಣೆಗಳೊಂದಿಗೆ ಸಭೆಯಲ್ಲಿದ್ದವರನ್ನು ಪ್ರೇರೇಪಿಸಿದರು. ಜೆಸಿಐ ಉಜಿರೆ ಸಿಟಿ ಉಜಿರೆ ಪರಿಸರದಾದ್ಯಂತ ವ್ಯಾಪಕವಾಗಿ ಹರಡಲಿ ಹೆಚ್ಚಿನ ಯುವಕರು ಈ ಸಂಸ್ಥೆ ಸೇರುವಂತಾಗಲಿ ಎಂದು ಶುಭ ಹಾರೈಸಿದರು.

ಪದ ಪ್ರಧಾನ ಅಧಿಕಾರಿಯಾಗಿ ಸಭೆಯಲ್ಲಿ ಉಪಸ್ಥಿತರಿದ್ದ ಜೆಸಿಐ ವಲಯ 15ರ ಪ್ರಾಂತ್ಯ ‘ಡಿ’ ಇದರ ಉಪಾಧ್ಯಕ್ಷರು, ಉಪನ್ಯಾಸಕರಾದ ಜೆಸಿ ರಂಜಿತ್ ಹೆಚ್.ಡಿ ಇವರು ಹೊಸ ಜೆಸಿಗಳಿಗೆ ಪ್ರಮಾಣವಚನ ಬೋಧಿಸಿ ಅಭಿನಂದಿಸಿದರು.
ತಮ್ಮ ಜೀವನದ ಮೌಲ್ಯಗಳನ್ನು ವೃದ್ಧಿಸಿಕೊಳ್ಳಲು ಹಾಗೂ ವ್ಯಕ್ತಿತ್ವ ವಿಕಸನವನ್ನು ರೂಪಿಸಲು ಅಂತರಾಷ್ಟ್ರೀಯ ಸಂಸ್ಥೆಯಾದ ಜೆಸಿಯಲ್ಲಿ ತೊಡಗಿಸಿಕೊಳ್ಳಲು ಕರೆ ನೀಡಿದರು. ಉಜಿರೆ ಜೆಸಿಯ ಹೊಸ ಹೆಸರಿನ ಅನಿವಾರ್ಯತೆಯ ಬಗ್ಗೆ ವಿವರಿಸಿದರು.

ಜೆಸಿಐ ಬೆಳ್ತಂಗಡಿಯ ಅಧ್ಯಕ್ಷೆ ಆಶಾಲತಾ ಪ್ರಶಾಂತ್ ಇವರು ಮಹಮ್ಮದ್ ಮಿರ್ಷಾದ್ ಇವರಿಗೆ ಪ್ರಮಾಣವಚನ ಬೋಧಿಸಿ ಕಾಲರ್ ಮತ್ತು ಗ್ಯಾವಲ್ ಹಸ್ತಾಂತರಿಸುವ ಮೂಲಕ ಅಧ್ಯಕ್ಷ ಸ್ಥಾನದ ಅಧಿಕಾರ ಹಸ್ತಾಂತರಿಸಿದರು.

ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮಹಮ್ಮದ್ ಮಿರ್ಷಾದ್ ಇವರು ಸಭೆಯನ್ನು ಉದ್ದೇಶಿಸಿ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು. ಈ ಘಟಕದ ಶ್ರೇಯೋಭಿವೃದ್ಧಿಗಾಗಿ ಜೇಸಿ ಸದಸ್ಯರ, ಜೆಸಿಐ ಉಜಿರೆಯ ಪೂರ್ವ ಅಧ್ಯಕ್ಷರ ಹಾಗೂ ಊರವರ ಸಹಕಾರ ಕೋರಿ ಪದ ಸ್ವೀಕಾರ ಭಾಷಣ ಮಾಡಿದರು.

ನೂತನ ತಂಡದ ಕಾರ್ಯದರ್ಶಿಯಾಗಿ ಭವ್ಯಶ್ರೀ ಕೀರ್ತಿರಾಜ್, ಉಪಾಧ್ಯಕ್ಷರುಗಳಾಗಿ ಪ್ರವೀಣ್ ಎನ್ ‘ಶಿವಗಿರಿ’, ರಾಜೇಶ್ ಕೆ ‘ತ್ರಿಶೂಲ್’, , ಜನಾರ್ಧನ ಕಾನರ್ಪ, ನಜೀರ್ ಚಾರ್ಮಡಿ, ಜಿತೇಶ್ ಜೈನ್, ಮೊಹಮ್ಮದ್ ಅಝರುದ್ಧಿನ್, ರಂಜನ್ ಎಸ್, ಕೋಶಾಧಿಕಾರಿಯಾಗಿ ಥಲ್ಹತ್ ಎಂ ಜಿ, ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್, ನಿರ್ದೇಶಕರುಗಳಾಗಿ ದೀಕ್ಷಿತ್ ರೈ, ಅಹ್ಮದ್ ಬಶೀರ್, ಗಿರೀಶ್, ಕಿರಣ್ ಶೆಟ್ಟಿ ಧರ್ಮಸ್ಥಳ,ಮೊಹಮ್ಮದ್ ಅರ್ಷಾದ್, ಮಹಿಳಾ ಸಂಯೋಜಕಿಯಾಗಿ ಹೇಮಾವತಿ ಕೆ ಆಯ್ಕೆಯಾಗಿದ್ದಾರೆ.

ಜೆಸಿಐ ಉಜಿರೆ ಘಟಕದ ಪೂರ್ವ ಅಧ್ಯಕ್ಷರಾದ ಡಾ. ಕುಮಾರ್ ಹೆಗ್ಡೆ ಹಾಗೂ ಶ್ರೀನಾಥ್ ಎಂಪಿ ಉಪಸ್ಥಿತರಿದ್ದು ನಮ್ಮ ಸಂಪೂರ್ಣ ಸಹಕಾರ ಈ ಘಟಕದ ಮೇಲೆ ಸದಾ ಇರುತ್ತದೆ ಎಂದು ಶುಭ ಹಾರೈಸಿದರು.

ಜೆಸಿಐ ಬೆಳ್ತಂಗಡಿಯ ಪೂರ್ವಾಧ್ಯಕ್ಷ ಜೇಸಿ ಪ್ರಶಾಂತ್ ಲಾೖಲ ಇವರು ಹೊಸ ಸದಸ್ಯರನ್ನು ಸಭೆಗೆ ಪರಿಚಯಿಸಿದರು. ಜೆಸಿಐ ಉಜಿರೆ ಸಿಟಿಯ ನೂತನ ಅಧ್ಯಕ್ಷರಾಗಿ ಮಹಮ್ಮದ್ ಮಿರ್ಷಾದ್ ಇವರನ್ನು ಜೆಸಿ ಅಬ್ದುಲ್ ಖಾದರ್ ಸಭೆಗೆ ಪರಿಚಯಿಸಿದರು.
ಜೆಸಿ ಅನುದೀಪ್ ಜೈನ್ ಇವರು ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು, ಚಿತ್ರಪ್ರಭ ಜೇಸಿ ವಾಣಿ ಉದ್ಘೋಷಿಸಿದರು, ರಂಜನ್ ಗುಡಿಗಾರ್ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು, ಜೆಸಿಐ ಬೆಳ್ತಂಗಡಿಯ ಕಾರ್ಯದರ್ಶಿ ಪ್ರಮೋದ್ ಕೆ ಧನ್ಯವಾದವಿತ್ತರು.

Related posts

ಕೊಕ್ಕಡ: ಉಪ್ಪಾರಪಳಿಕೆ ವಿ.ಹಿಂ.ಪ. ಭಜರಂಗದಳ ಮತ್ತು ಶ್ರದ್ಧಾ ಗೆಳೆಯರ ಬಳಗದ ವತಿಯಿಂದ ಗೋಪೂಜೆ ಹಾಗೂ ದೋಸೆ ಹಬ್ಬ

Suddi Udaya

ಅರಸಿನಮಕ್ಕಿ ಜನಸ್ಪಂದನ ಸಭೆ: ಕೊಕ್ಕಡದಲ್ಲಿ ಗರ್ಭಿಣಿಯರಿಗೆ ಸ್ಕ್ಯಾನಿಂಗ್ ಕೇಂದ್ರ ನಿರ್ಮಾಣಕ್ಕೆ ಬೇಡಿಕೆ

Suddi Udaya

ಕಾಶಿಪಟ್ಣ ಗ್ರಾ.ಪಂ. ನಲ್ಲಿ ಮಹಿಳಾ ಗ್ರಾಮ ಸಭೆ ಮತ್ತು ಉದ್ಯೋಗ ಖಾತರಿ ಯೋಜನೆಯ ಕ್ರಿಯಾ ಯೋಜನೆ ವಿಶೇಷ ಗ್ರಾಮ ಸಭೆ

Suddi Udaya

ಆ. 10 : ಧರ್ಮಸ್ಥಳದಲ್ಲಿ ರಾಜ್ಯ ಮಟ್ಟದ ಅಂಚೆ-ಕುಂಚ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ:

Suddi Udaya

ಗುತ್ತಿನಬೈಲು ಸ.ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ

Suddi Udaya

ಮುಂಡಾಜೆ ಕ್ರೈಸ್ಟ್ ಅಕಾಡೆಮಿ ಶಾಲೆಯಲ್ಲಿ ಅಜ್ಜಿ ಅಜ್ಜಂದಿರ ದಿನಾಚರಣೆ

Suddi Udaya
error: Content is protected !!