25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ರಾಜ್ಯಮಟ್ಟದ ಭಾಷಣ ಸ್ಪರ್ಧೆ: ಪಿಲ್ಯದ ಧನುಶ್ರೀ ಎಸ್. ಕುಲಾಲ್ ಪ್ರಥಮ

ಬೆಳ್ತಂಗಡಿ: ಕರ್ನಾಟಕ ಸರಕಾರದ ರಾಜ್ಯ ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯಿಂದ ನಡೆದ ಪ್ರೌಢಶಾಲಾ ವಿಭಾಗದ ದ.ಕ. ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದ ಸರಕಾರಿ ಪ.ಪೂ. ಕಾಲೇಜು (ಪ್ರೌಢಶಾಲಾ ವಿಭಾಗ) ವೇಣೂರಿನ 9ನೇ ತರಗತಿಯ ವಿದ್ಯಾರ್ಥಿನಿ ಧನುಶ್ರೀ ಎಸ್. ಕುಲಾಲ್ ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಡೆದ ರಾಜ್ಯಮಟ್ಟದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ರಾಜ್ಯಮಟ್ಟದಲ್ಲಿ ಎರಡು ಹಂತಗಳಲ್ಲಿ ಈ ಸ್ಪರ್ಧೆ ನಡೆಯಿತು. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಜಿಲ್ಲಾ ಹಂತಗಳಿಂದ ಆಯ್ಕೆಯಾದ ಒಟ್ಟು 106 ಸ್ಪರ್ಧಾಳುಗಳಲ್ಲಿ ಮೊದಲ ಹಂತದಲ್ಲಿ ರಾಜ್ಯದ ನಾಲ್ಕು ವಿಭಾಗಗಳಲ್ಲಿ ಪ್ರತಿ ವಿಭಾಗದಿಂದ ಮೂರು ಸ್ಪರ್ಧಿಗಳನ್ನು ಆಯ್ಕೆ ಮಾಡಿ ನಂತರ ಅವರಿಗೆ ಎರಡನೇ ಹಂತದಲ್ಲಿ 12 ತೀರ್ಪುಗಾರರ ಸಮ್ಮುಖದಲ್ಲಿ ಅಂತಿಮ ಸ್ಪರ್ಧೆ ನಡೆದು ಧನುಶ್ರೀ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ.

ಕರ್ನಾಟಕ ರಾಜ್ಯ ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರಿಂದ ಪ್ರಶಸ್ತಿ ಸ್ವೀಕರಿಸುತ್ತಾರೆ. ಇವರು ಬೆಳ್ತಂಗಡಿ ತಾಲೂಕಿನ ಪಿಲ್ಯದ ಶೈಲಜಾ ಮತ್ತು ಸತೀಶ್ ಬಂಗೇರ ದಂಪತಿಯ ಪುತ್ರಿ.

Related posts

ಇಂದಬೆಟ್ಟು: ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಕೆಸರುಗದ್ದೆ ಕ್ರೀಡಾಕೂಟ

Suddi Udaya

ಬೆಳ್ತಂಗಡಿ ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಸಹಕಾರದೊಂದಿಗೆ ಮುಂಗಾರು ಮತ್ತು ಹಿಂಗಾರಿನಲ್ಲಿ ತಾಲೂಕಿನಲ್ಲಿ 500 ಎಕ್ರೆಯಲ್ಲಿ ಯಾಂತ್ರಿಕೃತ ಭತ್ತದ ನಾಟಿ

Suddi Udaya

ಕಲ್ಮಂಜ ನಿಡಿಗಲ್ ಮಜಲಿನಲ್ಲಿ ನಾಗದೇವರು ಹಾಗೂ ದೈವಗಳ ಪುನರ್ ಪ್ರತಿಷ್ಠೆ

Suddi Udaya

ಧರ್ಮಸ್ಥಳ ಠಾಣೆಯಲ್ಲಿ ದಾಖಲಾದ ಎರಡು ಪ್ರಕರಣ : ಎಸ್.ಐ.ಟಿಗೆ ಹಸ್ತಾಂತರಿಸುವಂತೆ ಆದೇಶ

Suddi Udaya

ಕೊಕ್ಕಡ: ದಿ| ಸುಹಾಸ್ ಶೆಟ್ಟಿ ಹುಟ್ಟು ಹಬ್ಬದ ಪ್ರಯುಕ್ತ ಕಳೆಂಜ ನಂದಗೋಕುಲ ಗೋಶಾಲೆಗೆ ಮೇವು ಸಮರ್ಪಣೆ

Suddi Udaya

ಗರ್ಡಾಡಿ ಭಗವಾನ್ ಶ್ರೀ ಶಾಂತಿನಾಥ ಸ್ವಾಮಿ ಬಸದಿಯ ಪುನರ್ ನಿರ್ಮಾಣಕ್ಕೆ ಹಾಗೂ ಬಂಗಾಡಿ ಭಗವಾನ್ ಶ್ರೀ ಶಾಂತಿನಾಥ ಸ್ವಾಮಿ ಬಸದಿಯ ಜೀರ್ಣೋದ್ಧಾರಕ್ಕೆ ರೂ. 95.58 ಲಕ್ಷ ಸರಕಾರದಿಂದ ಅನುದಾನ ಬಿಡುಗಡೆ

Suddi Udaya
error: Content is protected !!