ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ : ಚೆಕ್ ಅಮಾನ್ಯ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ ಪ್ರಕಟ

ಬೆಳ್ತಂಗಡಿ : ಕಡಿಮೆ ದರಕ್ಕೆ ಕಾರು ಕೋಡಿಸುವುದಾಗಿ ಹಣ ಪಡೆದು ವಂಚನೆ ಮಾಡಿದ ಬಳಿಕ ಚೆಕ್ ನೀಡಿ ಮೋಸ ಮಾಡಿದ ಪ್ರಕರಣದಲ್ಲಿ ಆರೋಪಿಗೆ ಬೆಳ್ತಂಗಡಿ ನ್ಯಾಯಾಲಯ ಶಿಕ್ಷೆ ಪ್ರಕಟ ಮಾಡಿದೆ.

ಬೆಳ್ತಂಗಡಿಯ ಲಾಯಿಲ ಓ.ಸಿ.ಡಿ ಚರ್ಚ್ ನ ಪಾದ್ರಿ ಒಬ್ಬರ ಮೂಲಕ 2020 ರಲ್ಲಿ ಖಾಸಗಿ ಸಂಸ್ಥೆಯ ಸಿಬ್ಬಂದಿ ಎಂದು ಕೇರಳ ರಾಜ್ಯದ ಕಣ್ಣೂರು ನಿವಾಸಿ ಜಿಜೇಶ್.ಕೆ.ಜೆ(42) ಎಂಬಾತ ಹಲವು ಮಂದಿಯನ್ನು ಸಂಪರ್ಕ ಮಾಡಿಕೊಂಡು ಕಡಿಮೆ ದರದಲ್ಲಿ ಹೊಸ ಅಲ್ಟೋ ಕಾರು ಕೊಡಿಸುವುದಾಗಿ ನಂಬಿಸಿದ್ದರು. ಇದರಲ್ಲಿ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ನಿವಾಸಿ ಸೆಬಾಸ್ಟಿಯನ್ ಎ.ಎಮ್ (60) ಎಂಬವರ ಕೈಯಿಂದ 1,95,000 ರೂಪಾಯಿ ಹಣ ಪಡೆದು ವಂಚನೆ ಮಾಡಿದ್ದ. ಬಳಿಕ 2022 ರಲ್ಲಿ ಹಣ ಕೊಡುವುದಾಗಿ ಚೆಕ್ ನೀಡಿದಾಗ ಅದರ ಖಾತೆಯಲ್ಲಿ ಹಣ ಇಲ್ಲದೆ ಇರುವುದು ಬೆಳಕಿಗೆ ಬಂದಿತ್ತು.

2023 ರಲ್ಲಿ ಸೆಬಾಸ್ಟಿಯನ್ ಬೆಳ್ತಂಗಡಿ ವಕೀಲರಾದ ಅಬಿನ್.ಪಿ.ಫ್ರಾಸಿಸ್ ಮೂಲಕ ಬೆಳ್ತಂಗಡಿ ಪ್ರಧಾನ ಹಿರಿಯ ಶ್ರೇಣೆ ನ್ಯಾಯಾಲಯದಲ್ಲಿ ಖಾಸಗಿ ಪ್ರಕರಣ ದಾಖಲಿಸಿದ್ದರು.ಪ್ರಕರಣದ ಬಗ್ಗೆ ಹಲವು ದಾಖಲೆ ಪತ್ರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ ವಾದ- ಪ್ರತಿವಾದ ನಡೆಸಲಾಯಿತು. ಈ ವೇಳೆ ಆರೋಪಿ ತಪ್ಪಿತಸ್ಥನೆಂದು ವಿಚಾರಣೆಯಲ್ಲಿ ಸಾಬಿತುಗೊಂಡಿದ್ದರಿಂದ ನ್ಯಾಯಾಧೀಶರಾದ ಮನು.ಬಿ.ಕೆ ನ.27 ರಂದು ಶಿಕ್ಷೆ ಪ್ರಕಟ ಮಾಡಿದ್ದಾರೆ.

ಆರೋಪಿ ಜಿಜೇಶ್.ಕೆ.ಜೆ 1,95,000 ಹಣ ಮತ್ತು ವಾಷಿಕ 9% ಬಡ್ಡಿ ಸಮೇತ ದೂರುದಾರ ಸೆಬಾಸ್ಟಿಯನ್ ಅವರಿಗೆ ಪಾವತಿಸಬೇಕು, ತಪ್ಪಿದ್ದಲ್ಲಿ ಆರೋಪಿ ಜಿಜೇಶ್.ಕೆ.ಜೆ ಗೆ ಆರು ತಿಂಗಳ ಜೈಲು ವಾಸ ಅನುಭವಿಸತಕ್ಕದ್ದು ಎಂದು ನ್ಯಾಯಾಧೀಶರು ನ.27 ರಂದು ಆದೇಶ ಮಾಡಿದ್ದಾರೆ. ದೂರುದಾರ ಸೆಬಾಸ್ಟಿಯನ್ ಪರ ಬೆಳ್ತಂಗಡಿಯ ವಕೀಲರಾದ ಅಬಿನ್.ಪಿ.ಫ್ರಾಸಿಸ್ ವಾದಿಸಿದರು‌.

Related posts

ಸ್ಕೂಟರ್-ಟಿಪ್ಪರ್ ನಡುವೆ ಅಪಘಾತ: ಕೂಟದಕಲ್ಲು ನಿವಾಸಿ ಸುಧಾಕರ್ ರವರಿಗೆ ಗಾಯ

Suddi Udaya

ಮಂತ್ರದೇವತಾ ದೈವಸ್ಥಾನದ ಧರ್ಮದರ್ಶಿ ಮನೋಜ್ ಕಟ್ಟೆಮಾರ್ ಅವರ ಹುಟ್ಟುಹಬ್ಬ

Suddi Udaya

ಬೆಳ್ತಂಗಡಿ ಮುಳಿಯ ಜುವೆಲ್ಸ್ ನಲ್ಲಿ ‘ಮುಳಿಯಾ’ಸ್ ಟೈಮ್ ಝೋನ್’ ವಾಚ್ ಶೋರೂಂ ಶುಭಾರಂಭ

Suddi Udaya

ನ.24: ಎಂ.ಸಿ.ಸಿ. ಬ್ಯಾಂಕಿನ 18ನೇ ಶಾಖೆ ಬೆಳ್ತಂಗಡಿಯಲ್ಲಿ ಉದ್ಘಾಟನೆ

Suddi Udaya

ಸೇಕ್ರೆಡ್ ಹಾರ್ಟ್ ಪ.ಪೂ.ಕಾಲೇಜು-ಪೋಕ್ಸೋ ಕಾಯಿದೆ ಮಾಹಿತಿ ಕಾರ್ಯಕ್ರಮ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಿಂದೂ ರುದ್ರಭೂಮಿಗೆ ಸಿಲಿಕಾನ್ ಚೇಂಬರ್ಅಳವಡಿಸಲು ಸಹಾಯಧನದ ಮಂಜೂರಾತಿ ಪತ್ರ ವಿತರಣೆ

Suddi Udaya
error: Content is protected !!