37.9 C
ಪುತ್ತೂರು, ಬೆಳ್ತಂಗಡಿ
March 6, 2026
ತಾಲೂಕು ಸುದ್ದಿವರದಿ

ಮುಂಡಾಜೆ: ಬಂಟರ ಸಂಘದ ಸಹಯೋಗದಲ್ಲಿ ಮನೆ ನಿರ್ಮಾಣಕ್ಕೆ ಸಹಕಾರ

ಮುಂಡಾಜೆ: ಬಂಟರ ಗ್ರಾಮ ಸಮಿತಿ ಮುಂಡಾಜೆ, ಬಂಟರ ವಲಯ ಸಮಿತಿ ಉಜಿರೆ , ಬಂಟರ ಯಾನೆ ನಾಡವರ ಸಂಘ, ಬೆಳ್ತಂಗಡಿ ಮತ್ತು ಸ್ಪಂದನ ಸೇವಾ ತಂಡ ಬೆಳ್ತಂಗಡಿ ಇವರುಗಳ ಸಹಾಯ ಹಸ್ತದೊಂದಿಗೆ ಮುಂಡಾಜೆ ಗ್ರಾಮ ಸಮಿತಿಗೆ ಒಳಪಟ್ಟ ಶೇಷಪ್ಪ ಗುಣವತಿ ಶೆಟ್ಟಿ ಇವರಿಗೆ ಮನೆ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಿ , ನ.27 ರಂದು ಮನೆಯ ಗ್ರಹಪ್ರವೇಶ ನಡೆಯಿತು.

ಮನೆ ನಿರ್ಮಾಣದಲ್ಲಿ ಕೈಜೋಡಿಸಿದ ಗಣ್ಯರಾದ ಸ್ಪಂದನ ಸೇವಾ ತಂಡದ ಅಧ್ಯಕ್ಷ ಹಾಗೂ ಬೆಳ್ತಂಗಡಿ ಬಂಟರ ಸಂಘದ ಕಾರ್ಯದರ್ಶಿ ಸುರೇಶ್ ಶೆಟ್ಟಿ ಲಾಯಿಲ, ಉಜಿರೆ ವಲಯದ ಅಧ್ಯಕ್ಷರಾದ ವನಿತಾ ಶೆಟ್ಟಿ, ಉಪಾಧ್ಯಕ್ಷರಾದ ರವೀಂದ್ರ ಶೆಟ್ಟಿ ಬಳಂಜ, ಗಂಗಾಧರ ರೈ ಉಜಿರೆ, ಕೊಡುಗೈದಾನಿ ಕಂಟ್ರಾಕ್ಟ್ ದಾರರಾದ ಶರತ್ ಮಂಗಳೂರು ಇವರನ್ನು ನ.26 ರಂದು ಮುಂಡಾಜೆ ಬಂಟರ ಗ್ರಾಮ ಸಮಿತಿ ವತಿಯಿಂದ ಅತಿಥೇಯ ಮನೆಯಲ್ಲಿ ನಡೆಸಿದ ಸರಳ ಸಮಾರಂಭದಲ್ಲಿ ಗೌರವಿಸಲಾಯಿತು.

ಮುಖ್ಯ ಆರ್ಥಿಕ ಸಹಕಾರ ನೀಡಿದ ಪ್ರಶಾಂತ್ ಶೆಟ್ಟಿ ಮೂಡಯೂರು, ಉಮೇಶ್ ಶೆಟ್ಟಿ ದುರ್ಗಾ ನಿಲಯ ಉಜಿರೆ, ಸದಾನಂದ ಶೆಟ್ಟಿ, ಸುಮುಖ ಸುಪಾರಿ ಟ್ರೇಡರ್ಸ್ ಬೆಳ್ತಂಗಡಿ, ಕಾರ್ತಿಕ್ ಶೆಟ್ಟಿ ಕಾನರ್ಪ ಮನೆ ಮುಂಡಾಜೆ ,ಬೆಳ್ತಂಗಡಿ ಬಂಟರ ಸಂಘದ ಅಧ್ಯಕ್ಷ ಜಯಂತ ಶೆಟ್ಟಿ ಭಂಡಾರಿಗುಡ್ಡೆ ಇವರುಗಳ ಸಾಮಾಜಿಕ ಕಳಕಳಿ ಹಾಗೂ ಪ್ರಯತ್ನವನ್ನು ಸ್ಮರಿಸಿಕೊಳ್ಳಲಾಯಿತು.

ವೇದಿಕೆಯಲ್ಲಿ ಮುಂಡಾಜೆ ಗ್ರಾಮ ಸಮಿತಿ ಗೌರವಾಧ್ಯಕ್ಷ ರಾಮಣ್ಣ ಶೆಟ್ಟಿ ಅಗರಿ, ಅಧ್ಯಕ್ಷ ಪ್ರದೀಪ್ ಶೆಟ್ಟಿ ನಾಗಂಡ, ಗೌರವ ಸಲಹೆಗಾರ ಪುರುಷೋತ್ತಮ ಶೆಟ್ಟಿ ಅಗರಿ, ಉಪಸ್ಥಿತರಿದ್ದರು. ತನು ಮನ ಧನ ಸಹಕಾರ ನೀಡಿದ ಮುಂಡಾಜೆ ಗ್ರಾಮ ಸಮಿತಿಯ ಎಲ್ಲಾ ಬಂಧುಗಳು ಮತ್ತು ಉಜಿರೆ ವಲಯದ ಎಲ್ಲಾ ಬಂಧುಗಳಿಗೆ ಕೃತಜ್ಞತೆ ಸಮರ್ಪಿಸಲಾಯಿತು. ಮುಂಡಾಜೆ ಗ್ರಾಮ ಸಮಿತಿಯ ಪರವಾಗಿ ಪುಷ್ಪರಾಜ ರೈ ಕಲ್ಲ ಹಿತ್ತಿಲು, ಕೋಶಾಧಿಕಾರಿ ಮಧು ಶೆಟ್ಟಿ ಹುರ್ತಾಜೆ, ಶಿವರಾಜ್ ರೈ ಸೋಮಂತಡ್ಕ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ನವೀತ್ ಶೆಟ್ಟಿ ನೈಯಾಲು ಇವರು ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನಕ್ಕೆ ವ್ಯವಸ್ಥಾಪನ ಸಮಿತಿ ರಚನೆ

Suddi Udaya

ಫೆ.13: ಹತ್ಯಡ್ಕ ಪ್ರಾ.ಕೃ.ಪ. ಸ. ಸಂಘದಲ್ಲಿ ಜೇನು ಕೃಷಿ ತರಬೇತಿ ಹಾಗೂ ಮಾಹಿತಿ ಕಾರ್ಯಕ್ರಮ

Suddi Udaya

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ 13 ದಿನಗಳ ಕಾಲ ನಡೆದೆ ಸಿಸಿ ಕ್ಯಾಮರ ಆಳವಡಿಕೆ ಮತ್ತು ದುರಸ್ತಿ ತರಬೇತಿಯ ಸಮಾರೋಪ

Suddi Udaya

ಉಜಿರೆ ಮೈಸೂರು ಗಾರ್ಮೆಂಟ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ಪ್ರತಿ ರೂ 1 ಸಾವಿರ ಖರೀದಿಯೊಂದಿಗೆ ಆಕರ್ಷಕ ಗಿಪ್ಟ್

Suddi Udaya

ಆಗಷ್ಟ್ 28 : ಸೌಜನ್ಯ ಪ್ರಕರಣದ ತನಿಖೆಗೆ ಒತ್ತಾಯಿಸಿ ಚಲೋ ಬೆಳ್ತಂಗಡಿ ಮಹಾಧರಣಿ

Suddi Udaya

ಪುದುವೆಟ್ಟು ಗ್ರಾ.ಪಂ. ನಲ್ಲಿ ವಿಕಲಚೇತನರ ವಿಶೇಷ ಸಮನ್ವಯ ಗ್ರಾಮ ಸಭೆ

Suddi Udaya
error: Content is protected !!