37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಧರ್ಮಸ್ಥಳ ಬುರುಡೆ ಪ್ರಕರಣ: ಬೆಳ್ತಂಗಡಿ ನ್ಯಾಯಾಲಯದಲ್ಲಿ ವರದಿಯ ವಿಚಾರಣೆ

ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣದಲ್ಲಿ ಎಸ್.ಐ.ಟಿ ಅಧಿಕಾರಿಗಳು ಆರು ಮಂದಿಯ ವಿರುದ್ಧ ವರದಿ ಸಲ್ಲಿಸಿರುವ ವರದಿಯ ಬಗ್ಗೆ ಬೆಳ್ತಂಗಡಿ ನ್ಯಾಯಾಲಯ ವಿಚಾರಣೆ ನಡೆಸಿದ್ದು. ಮುಂದಿನ ಶನಿವಾರಕ್ಕೆ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದೆ‌.

ಬೆಳ್ತಂಗಡಿ ನ್ಯಾಯಾಲಯಕ್ಕೆ ಎಸ್.ಐ.ಟಿ ಅಧಿಕಾರಿಗಳು ನ.20 ಕ್ಕೆ (Perjury Report) u/s 215 ಅಡಿಯಲ್ಲಿ ಚಿನ್ನಯ್ಯ, ಗಿರೀಶ್ ಮಟ್ಟಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ, ಜಯಂತ್.ಟಿ, ಸೌಜನ್ಯ ಮಾವ ವಿಠಲ್ ಗೌಡ, ಸುಜಾತ ಭಟ್ ವಿರುದ್ಧ 3,923 ಪುಟಗಳ ವರದಿಯನ್ನು ಸಲ್ಲಿಸಿದ್ದರು.

ಈ ಬಗ್ಗೆ ಬೆಳ್ತಂಗಡಿ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯೇಂದ್ರ ಟಿ.ಹೆಚ್ ಅವರ ಮುಂದೆ ಡಿ.2 ರಂದು ಎಸ್ಐಟಿ ಪರ ಸರಕಾರಿ ವಕೀಲರಾದ ದಿವ್ಯರಾಜ್ ವಾದ ಮಾಡಿದರು.ವಾದದಲ್ಲಿ 39/2025 ಅಪರಾಧ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ತನಿಖೆ ಮುಗಿಯದ ಕಾರಣದಿಂದ ಚಾರ್ಜ್ ಶೀಟ್ ಬದಲು BNS u/s 215 ಅಡಿಯಲ್ಲಿ ವರದಿ ನೀಡಿದ್ದು.ಈ ವರದಿಯಲ್ಲಿ ಎಸ್.ಐ.ಟಿ ಅಧಿಕಾರಿಗಳು ಆರೋಪಿಗಳ ವಿರುದ್ದ ಎಫ್ಎಸ್ಎಲ್ ವರದಿ ಮತ್ತು ಇತರ ದಾಖಲೆಗಳ ಮೂಲಕ ವಿವರಿಸಲಾಗಿದೆ.ಇದರಿಂದ ನ್ಯಾಯಾಲಯ ಕಾನೂನು ಕ್ರಮ ಕೈಗೊಳ್ಳುವ ಅವಕಾಶವಿದೆ. ಎಂದು ಹಲವು ಅಂಶಗಳನ್ನು ಮುಂದಿಟ್ಟು ಸರಕಾರಿ ವಕೀಲರು ನ್ಯಾಯಾಲಯಕ್ಕೆ ವಿವರಿಸಿದರು. ಬಳಿಕ ಸರಕಾರಿ ವಕೀಲರು ಮುಂದಿನ ವಿಚಾರಣೆಗೆ ಸಮಯಾವಕಾಶ ಕೇಳಿದ್ದು. ಈ ಬಗ್ಗೆ ನ್ಯಾಯಲಯ ಮುಂದಿನ ಡಿ.6 ಕ್ಕೆ ನ್ಯಾಯಾಧೀಶರು ವಿಚಾರಣೆ ಮುಂದೂಡಿದ್ದಾರೆ.

Related posts

ಚಾರ್ಮಾಡಿ: ಅಂಗನವಾಡಿ ಸಹಾಯಕಿ ಆತ್ಮಹತ್ಯೆ

Suddi Udaya

ನಾವೂರು ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಕಾಡಾನೆ ದಾಳಿ, ಕೃಷಿಕರ ಭಾವನೆಗಳಿಗೆ ಸ್ಪಂದಿಸದ ಕಾಂಗ್ರೆಸ್ ಸರಕಾರ : ಹರೀಶ್ ಪೂಂಜ ಆಕ್ರೋಶ

Suddi Udaya

ಬೆಳಾಲು ಪ್ರೌಢಶಾಲೆಯ ಮಕ್ಕಳಿಗೆ ಗದ್ದೆಯಲ್ಲಿ ಒಂದು ದಿನ ಕಾರ್ಯಕ್ರಮ:ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಬೇಸಾಯದ ಪಾಠ

Suddi Udaya

ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನ ಮಹಾಸಭೆಯಲ್ಲಿ ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘಕ್ಕೆ ಪ್ರಶಸ್ತಿ

Suddi Udaya

ಇಂದಬೆಟ್ಟು: ಬಾರಿ ಗಾಳಿ ಮಳೆಗೆ ಮನೆಯ ಮೇಲ್ಚಾವಣಿಗೆ ಹಾನಿ

Suddi Udaya
error: Content is protected !!