37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಶ್ರೀ ಧ.ಮಂ. ಪ.ಪೂ.ಕಾಲೇಜಿನ ಸಂಸ್ಕೃತ ವಿಭಾಗ ಹಾಗೂ ಸಂಸ್ಕೃತ ಸಂಘದ ಆಶ್ರಯದಲ್ಲಿ ಗೀತಾ ಜಯಂತಿ ಕಾರ್ಯಕ್ರಮ

ಉಜಿರೆ: ಅಭ್ಯಾಸ ಹಾಗೂ ವೈರಾಗ್ಯದಿಂದ ಜೀವನದಲ್ಲಿ ಯಶಸ್ಸು ಕಾಣಲು ಭಗವದ್ಗೀತೆ ನೆರವಾಗುತ್ತದೆ. ವಿದ್ಯಾರ್ಥಿ ಧರ್ಮದ ಪರಿಪಾಲನೆ ಇದರಿಂದ ತಿಳಿದುಕೊಳ್ಳಬಹುದು. ಆಗ ಅರ್ಜುನನ ಹೃದಯ ದೌರ್ಬಲ್ಯ ಕೃಷ್ಣನು ದೂರಮಾಡಿದಂತೆ ಆಧುನಿಕ ಯುಗದಲ್ಲಿ ಭಗವದ್ಗೀತೆಯು ನಮ್ಮ ಮನಸ್ಸಿಗೆ ಘಾಸಿಯಾದಾಗ ನೆಮ್ಮದಿ ಹಾಗೂ ಪರಿಹಾರ ಕೊಡುತ್ತದೆ. ಬುದ್ಧಿಮತ್ತೆಯನ್ನು ವರ್ಗಾಯಿಸಲು ಕೂಡ ಪ್ರಯೋಜನಕಾರಿಯಾಗಿದೆ. ಶ್ರೇಯಸ್ಸು ಮಾರ್ಗ ಹಾಗೂ ಪ್ರೇಯಸ್ಸು ಮಾರ್ಗಕ್ಕೆ ಗೀತೆಯು ಬುನಾದಿಯಾಗಿದೆ. ಒಟ್ಟಾರೆ ಭಗವದ್ಗೀತೆಯು ಭವದಗೀತೆ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ವಿದ್ಯಾಲಯದ ಯೋಗ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಉದಯಸುಬ್ರಹ್ಮಣ್ಯ ಹೇಳಿದರು.

ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ವಿಭಾಗ ಹಾಗೂ ಸಂಸ್ಕೃತ ಸಂಘದ ಆಶ್ರಯದಲ್ಲಿ ನಡೆದ ಗೀತಾ ಜಯಂತಿ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಪ್ರಮೋದ್ ಕುಮಾರ್ ಬಿ ಅವರು ಮಾತನಾಡಿ ಎಲ್ಲಾ ಧರ್ಮಗಳಿಗೆ ಹೊಸ ದರ್ಶನ ಕೊಡಬಲ್ಲ ಒಂದು ಗ್ರಂಥ ಇದ್ದರೆ ಅದು ಶ್ರೀಮದ್ ಭಗವದ್ಗೀತೆ. ಮಾನವನ ವೈಯಕ್ತಿಕ ಸಮಸ್ಯೆಗಳಿಗೆ ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಮಸ್ಯೆಗಳಿಗೆ ಭಗವದ್ಗೀತೆಯಲ್ಲಿ ಉತ್ತರ ಇದೆ. ಇದು ಬದುಕಿನ ಸ್ಪೂರ್ತಿಯ ಚಿಲುಮೆಯ ಭಾಗವಾಗಿದೆ. ಭಗವದ್ಗೀತೆಯ ಶ್ಲೋಕಗಳನ್ನು ಓದಿದಷ್ಟು ಹೊಸ ಹೊಸ ಅರ್ಥವನ್ನು ಸ್ಪುರಿಸುತ್ತಾ ಹೋಗುವುದು ಇದರ ದೊಡ್ಡ ಹೆಗ್ಗಳಿಕೆಯಾಗಿದೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಭಗವದ್ಗೀತಾ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಹಂಸಿನಿ ಭಿಡೆ , ನಿಜ ಕುಲಾಲ್ ಹಾಗೂ ಅಕ್ಷರಾ ಅವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥರಾದ ಡಾ. ಪ್ರಸನ್ನಕುಮಾರ ಐತಾಳ್ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಶ್ರೀಪೂರ್ಣಾ, ಸಿರಿ.ಜಿ. ಗೌಡ , ಪಲ್ಲವಿ ಪುರಾಣಿಕ್ ಹಾಗೂ ತೇಜಸ್ವಿ ಅವರು ಧ್ಯಾನ ಶ್ಲೋಕದ ಪಠಣೆ ಮಾಡಿದರು.
ಪ್ರೀತಿ ಕೆ.ಜೆ ಸ್ವಾಗತಿಸಿ , ಸಮೃದ್ದ್ ಜೈನ್ ವಂದಿಸಿದರು. ನಿಧಿ ನಾರಾಯಣ್ ನಿರೂಪಿಸಿದರು.

Related posts

ಪೆರಿಂಜೆ: ನಿವೃತ್ತ ಶಿಕ್ಷಕಿ ಶಶಿಪ್ರಭಾರವರಿಗೆ ಬೀಳ್ಕೊಡುಗೆ: ನಿವೃತ್ತ ಶಿಕ್ಷಕಿಯಿಂದ ಪರಿಸರ ಕಾಳಜಿ ವಹಿಸಲು ಮಕ್ಕಳಿಗೆ ಹಣ್ಣಿನ ಗಿಡಗಳ ವಿತರಣೆ

Suddi Udaya

ರಾಜ್ಯ ಕಾಂಗ್ರೆಸ್ ಸರಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ಮೇಲಂತಬೆಟ್ಟು ಗ್ರಾ.ಪಂ. ಎದುರು ಪ್ರತಿಭಟನೆ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಭೀಷ್ಮ ಏಕಾದಶೀ ಪ್ರಯುಕ್ತ ವಿಷ್ಣು ಸಹಸ್ರನಾಮ ಪಠಣ

Suddi Udaya

ನಾಲ್ಕೂರು: ಬಾಲಸ್ನೇಹಿ ಅಂಗನವಾಡಿ ಕೇಂದ್ರದಲ್ಲಿ ಶಿಕ್ಷಕರ ದಿನಾಚರಣೆ: ಪುಟಾಣಿ ಮಕ್ಕಳು ಪ್ರೀತಿಯ ಗುರುಗಳಿಗೆ ಪೆನ್ನು,ಹೂ ನೀಡಿ ಗೌರವ ಸಲ್ಲಿಕೆ

Suddi Udaya

ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾಗಿ ಅಭಿಷಕ್ತರಾದ ಅ. ವಂ. ಜೇಮ್ಸ್ ಪಟ್ಟೇರಿಲ್ ರವರಿಗೆ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಪರವಾಗಿ ಅಭಿನಂದನೆ

Suddi Udaya

ಬೆಳಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಚುನಾವಣೆ: 6 ಕ್ಷೇತ್ರಕ್ಕೆ ಅವಿರೋಧ ಆಯ್ಕೆ: 6 ಸ್ಥಾನ ಪದ್ಮಗೌಡ ನೇತೃತ್ವದ ತಂಡಕ್ಕೆ ಜಯ

Suddi Udaya
error: Content is protected !!