September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ : ಬೆಳ್ತಂಗಡಿಯ ಎಸ್.ಡಿ.ಎಂ ಶಾಲೆಗೆ ಹಲವು ಪ್ರಶಸ್ತಿ

ಬೆಳ್ತಂಗಡಿ : ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳ್ತಂಗಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಬೆಳ್ತಂಗಡಿಯ ಸಹಭಾಗಿತ್ವದಲ್ಲಿ ಬೆಳ್ತಂಗಡಿಯ ಎಸ್.ಡಿ.ಎಂ ಆಂಗ್ಲಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಬೆಳ್ತಂಗಡಿಯ ಎಸ್.ಡಿ.ಎಂ ಆಂಗ್ಲಮಾಧ್ಯಮ ಶಾಲೆಗೆ ಹಲವು ಪ್ರಶಸ್ತಿಗಳು ಲಭಿಸಿವೆ.

11 ಕ್ಲಸ್ಟರ್ ಗಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯ 40 ಕ್ಕೂ ಹೆಚ್ಚಿನ ಸ್ಪರ್ಧೆಗಳ ಪೈಕಿ ಹಲವು ವಿಭಾಗಗಳಲ್ಲಿ ಬೆಳ್ತಂಗಡಿಯ ಎಸ್.ಡಿ.ಎಂ ಆಂಗ್ಲಮಾಧ್ಯಮ ಶಾಲೆಗೆ ಪ್ರಶಸ್ತಿಗಳು ಸಂದಿವೆ. ಈ ಮೂಲಕ 13 ವಿದ್ಯಾರ್ಥಿಗಳು ಡಿ. 18 ರಂದು ಮೂಡುಬಿದಿರೆಯಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

ಯಶ್ವಿತ್, ಕಿರಿಯ ಪ್ರಾಥಮಿಕ ವಿಭಾಗ ಚಿತ್ರಕಲೆಯಲ್ಲಿ ಪ್ರಥಮ ಸ್ಥಾನ‌, ಎಂ ರೀತಿಕಾ ಶೆಣೈ ಪ್ರೌಢಶಾಲಾ ವಿಭಾಗ ಹಿಂದಿ ಭಾಷಣ ಪ್ರಥಮ ಸ್ಥಾನ, ಜಾನಪದ ನೃತ್ಯ ಸಮೂಹ ನೃತ್ಯ ಸ್ಪರ್ಧೆ ಪ್ರೌಢಶಾಲಾ ವಿಭಾಗ ಪೂರ್ವಿ, ಪ್ರಾಪ್ತಿ, ಶ್ರೀರಕ್ಷಾ, ರಿಧು, ಸಂಜನಾ, ತೇಜಸ್ ಬಳಗ ಪ್ರಥಮ ಸ್ಥಾನ, ಪ್ರೌಢಶಾಲಾ ವಿಭಾಗದ ಕವಾಲಿ ಸ್ಪರ್ಧೆಯಲ್ಲಿ ಅನಘ, ಬಿ ಸಹನಾ ಆಚಾರ್ಯ, ರಿಷಿತ, ಶ್ರೀವಿನೀತ್ ಎಮ್, ನಿಧೀಶ, ಶ್ರೇಯಸ್ ಬಳಗ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾರೆ.

ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಬೆಳ್ತಂಗಡಿ ತಾಲೂಕನ್ನು ಪ್ರತಿನಿಧಿಸಲಿದ್ದಾರೆ. ಇವರಿಗೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಹಾಗು ಶಾಲೆಯ ಶಿಕ್ಷಕರ ವೃಂದ ಮತ್ತು ವಿದ್ಯಾರ್ಥಿ ಸಮೂಹ ಅಭಿನಂದಿಸಿರುತ್ತಾರೆ.

Related posts

ಮಂಗಳೂರು ವಿಭಾಗ ಸಹ ಪ್ರಭಾರಿಯಾಗಿ ಜಯಂತ್ ಕೋಟ್ಯಾನ್ ನೇಮಕ

Suddi Udaya

ಬೆಳ್ತಂಗಡಿ ತಾಲೂಕು ಮಟ್ಟದಲ್ಲಿ ಸರ್ವಜ್ಞ ಜಯಂತಿ ಆಚರಣೆ:

Suddi Udaya

ಬೆಳಾಲು: ಶ್ರೀಮತಿ ಸುಲೋಚನಾ ಎಸ್. ಕೆರ್ಮುಣ್ಣಾಯ ನಿಧನ

Suddi Udaya

ಬೆಳ್ತಂಗಡಿ ಸ್ಟೇಟ್‌ಬ್ಯಾಂಕ್ ಆಪ್ ಇಂಡಿಯಾ ಶಾಖೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದ ಮಾಧುರ್ಯ ರವರಿಗೆ ಹವ್ಯಕ ಮಂಡಲದ ವತಿಯಿಂದ ಗೌರವ

Suddi Udaya

ಟಿಪ್ಪರ್ ವಾಹನದ ಬಾಡಿಗೆ ಕೇಳಲು ಹೋದವನ ಮೇಲೆ ಹಲ್ಲೆ: ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya
error: Content is protected !!