38.6 C
ಪುತ್ತೂರು, ಬೆಳ್ತಂಗಡಿ
March 6, 2026
ಕರಾವಳಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಧರ್ಮಸ್ಥಳ ಬುರುಡೆ ಪ್ರಕರಣದ ಎಸ್.ಐ.ಟಿ ತನಿಖೆ:ಸತ್ಯದ ಅಗ್ನಿ ಪರೀಕ್ಷೆ ಅಗುತ್ತದೆ, ಸತ್ಯ ಹೊರಗೆ ಬರುತ್ತದೆ ಎಂದು ಕಾಯುತ್ತಿರುವ ಕ್ಷೇತ್ರದ ಭಕ್ತರು ಹಾಗೂ ಸಾರ್ವಜನಿಕರು: ಪತ್ರಿಕಾಗೋಷ್ಠಿಯಲ್ಲಿ ಧರ್ಮಸ್ಥಳ ಗ್ರಾ.ಪಂ ಉಪಾಧ್ಯಕ್ಷ ಶ್ರೀನಿವಾಸ ರಾವ್ ಆಗ್ರಹ

ಬೆಳ್ತಂಗಡಿ: ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಎಸ್.ಐ.ಟಿ ತನಿಖೆ ನಡೆಸಿ ಸತ್ಯ ಹೊರಗೆ ಬರುತ್ತದೆ ಎಂದು ಜನರು ಬಹಳವಾದ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಆದರೆ ಶ್ರೀ ಕ್ಷೇತ್ರದ ವಿರುದ್ಧ ಷಡ್ಯಂತರ ಮಾಡಿದವರ ವಿರುದ್ಧ ಈಗ ಯಾವುದೇ ತನಿಖೆ ನಡೆಯುತ್ತಿಲ್ಲ, ತನಿಖೆಯಾಗಬೇಕು ಎಂದು ಒತ್ತಾಯಿಸಿದವರೇ ಈಗ ಪ್ರಕರಣ ರದ್ದುಗೊಳಿಸಲು ನ್ಯಾಯಾಲಯಕ್ಕೆ ಹೋಗಿದ್ದಾರೆ. ಇದರಿಂದಾಗಿ ಮತ್ತಷ್ಟು ಸಂಶಯಕ್ಕೆ ಕಾರಣವಾಗಿದ್ದು, ಷಡ್ಯಂತರ ಮಾಡಿದವರ ವಿರುದ್ಧ ಕಾನೂನು ಕ್ರಮಗಳಾಗಿ ಶಿಕ್ಷೆಯಾಗಬೇಕು ಎಂದು ಕ್ಷೇತ್ರದ ಭಕ್ತರು ಹಾಗೂ ನಾಗರಿಕರು ನಿರೀಕ್ಷೆಯಲ್ಲಿದ್ದಾರೆ ಎಂದು ಧರ್ಮಸ್ಥಳ ಗ್ರಾ.ಪಂ ಉಪಾಧ್ಯಕ್ಷ ಶ್ರೀನಿವಾಸ ರಾವ್ ಆಗ್ರಹಿಸಿದರು.

ಅವರು ಡಿ.5ರಂದು ಬೆಳ್ತಂಗಡಿ ಸುವರ್ಣ ಆರ್ಕೇಡ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಒಂದು ಕ್ಷೇತ್ರದ ಬೆಳವಣಿಗೆಯನ್ನು ಸಹಿಸಲಾಗದೆ, ಒಬ್ಬ ವ್ಯಕ್ತಿ ತನ್ನ ವ್ಯಕ್ತಿತ್ವದ ಮೂಲಕ ದೇಶಕ್ಕೆ ಮಾದರಿಯಾದ ಕೆಲಸ ಮಾಡಿರುವುದಕ್ಕೆ ಕಳಂಕ ತರವ ಷಡ್ಯಂತರದ ಭಾಗವಾಗಿ, ಬೇರೆ, ಬೇರೆ ಹಂತದಲ್ಲಿ ಕ್ಷೇತ್ರದ ಮತ್ತು ಆ ವ್ಯಕ್ತಿಗೆ ಕಳಂಕ ತರುವ ಪ್ರಯತ್ನಗಳನ್ನು ಮಾಡಿದರು. ಆದರೆ, ಕ್ಷೇತ್ರದ ಮಂಜುನಾಥ ಸ್ವಾಮಿ ಮತ್ತು ಬಡವ ದೀನ ದಲಿತ ಸೇವೆ ಮಾಡಿದ ಪುಣ್ಯ ಸಂಚಯ ಯಾವುದಕ್ಕೂ ಅವಕಾಶ ಮಾಡಿಕೊಡಲಿಲ್ಲ, ಕ್ಷೇತ್ರದ ಹೆಸರನ್ನು ಕೆಡಿಸುವ ಭಾಗವಾಗಿಯೇ ಬರುಡೆ ಪ್ರಕರಣಗಳು ಬಂದವು ಅದರ ವಿವಿಧ ಆಯಾಮಗಳು ಬೆಳಕಿಗೆ ಬಂದವು. 17 ಗುಂಡಿಯನ್ನು ಅಗೆದು ಅವರ ಉದ್ದೇಶಿತ ಮೃತದೇಹಗಳು ಸಿಗಲಿಲ್ಲ ಎಂದು ನಿಷ್ಪ್ರೇಜಕರಾಗಿ ತನಿಖೆಯ ಹಾದಿಯನ್ನು ದಾರಿ ತಪ್ಪಿಸುವ ಹಿನ್ನಲೆಯಲ್ಲಿ ಅವರ ಮನೋ ಇಚ್ಚೆಗೆ ಬೇಕಾದಂತೆ ಮಾತನಾಡಿಕೊಂಡು ಬಂದರು ಎಂದರು.

ವಿಘ್ನಸಂತೋಷಿಗಳ ಷಡ್ಯಂತರ ತಂಡ ಸುಪ್ರೀಂ ಕೋರ್ಟಿಗೆ ಹೋದರು. ನೂರಾರು ಶವ ಹೂತಹಾಕಿದೆ ಎಂದು ತನಿಖೆಗೆ ಒತ್ತಾಯಿಸಿದರು. ಅಲ್ಲಿ ಸತ್ಯಾಸತ್ಯತೆ ತಿಳಿದು ತಿರಸ್ಕೃತವಾಗುತ್ತದೆ. ಆದರೆ ಕರ್ನಾಟಕ ಸರಕಾರ ಇದನ್ನು ಬಹಳ ಗಂಭೀರವಾಗಿ ತೆಗೆದುಕೊಂಡು ಎಸ್.ಐ.ಟಿ ರಚನೆ ಮಾಡಿತು. ಅದನ್ನು ನಾವು ಆರಂಭದಲ್ಲೇ ಸ್ವಾಗತಿಸಿದ್ದೇವು. ಎಸ್‌ಐಟಿ ರಚನೆಗೆ ಅವರೇ ಒತ್ತಾಯಸಿ, ಅವರೇ ಅಪೇಕ್ಷಿಸಿದಂತ ಪ್ರಮುಖರನ್ನು ಎಸ್‌ಐಟಿ ತಂಡಕ್ಕೆ ಮುಖ್ಯಸ್ಥರನ್ನಾಗಿ ಮಾಡಿದರು. ಪಾರದರ್ಶಕವಾಗಿ, ಕಾನೂನಿಗೆ ನ್ಯಾಯಕೊಡುವ ಅನುಭವದ ತಂಡ ತನಿಖೆ ಮಾಡಿ ವರದಿ ಕೋರ್ಟಿಗೆ ಕೊಟ್ಟಿದೆ. ಆದರೆ ನಂತರದ ದಿನಗಳಲ್ಲಿ ಆಗುತ್ತಿರುವುದಂತದು ಬೇರೆಯೇ, ಸಾರ್ವಜನಿಕ ಭಾವನೆಗಳಿಗೆ ಘಾಸಿಯನ್ನು ಮಾಡಿ, ಕ್ಷೇತ್ರ ಮತ್ತು ವ್ಯಕ್ತಿತ್ವ ಗೌರವದ ಭಾವನೆಗಳಿಗೆ ಘಾಸಿ ಮಾಡಿದಂತಹ ತಂಡ ಬೇರೆ, ಬೇರೆ ಆಯಾಮಗಳನ್ನು ಕಂಡುಕೊಂಡಿತ್ತು. ಆದರೆ ಸತ್ಯ ಯಾವಾಗಲೂ ಶಾಶ್ವತ ಎನ್ನುವ ನಿರೀಕ್ಷೆಯಲ್ಲಿದ್ದ ಜನಗಳಿಗೆ ಇವತ್ತು ಸಂಶಯದ ಮೊಳಕೆ ಒಡೆಯುತ್ತಿದೆ. ಷಡ್ಯಂತರ ಮಾಡಿದ ತಂಡ ತನಿಖೆಗೆ ಬರಲು ಹೇಳಿದಾಗ ಒಂಭತ್ತು ಹತ್ತು ಸಿಟ್ಟಿಂಗ್ ಆಗಿದೆ. ಮತ್ತೆ ಬರಲು ಆಗುವುದಿಲ್ಲ, ಮಾನಸಿಕ ಕಿರುಕುಳ ಕೊಡುತ್ತಾರೆ ಎಂದು ಹೇಳಿ ಅವರೇ ಆಯ್ಕೆ ಮಾಡಿದ, ಅವರೇ ಸಂತೋಷ ಪಟ್ಟ ಅವರ ತನಿಖಾ ತಂಡದ ಬಗ್ಗೆ ಅಪಸ್ವರಗಳಿಂದ ಮಾತನಾಡುತ್ತಿದ್ದಾರೆ. ಮಾಸ್ಕ್‌ಮ್ಯಾನ್ ಚಿನ್ನಯ್ಯನ ತನಿಖೆ ಮಾಡುವಾಗ ಷಡ್ಯಂತರ ತಂಡ ಬಹಳ ಪರಿಣಾಮಕಾರಿಯಾಗಿ ತನಿಖೆ ಆಗುತ್ತಿದೆ ಎಂದು ಹೇಳಿಕೆ ಕೊಡುತ್ತಾರೆ ಈ ತನಿಖೆಯನ್ನು ಸ್ವಾಗತಿಸುತ್ತೇವೆ ಎಂದು ಹೇಳುತ್ತಾರೆ. ಆದರೆ ಈಗ ಯಾವುದು ಸರಿಯಲ್ಲ, ತಂಡಗಳೇ ಸರಿಯಿಲ್ಲ, ತಂಡವನ್ನೇ ಬದಲು ಮಾಡಬೇಕು. ಕೋರ್ಟಿನ ಸುಪರ್ದಿಯಲ್ಲಿ ತನಿಖೆ ಮಾಡಬೇಕು ಎಂಬ ಹೊರ ರಾಗ ಎಳೆಯುತ್ತಿದ್ದಾರೆ. ಇದು ಸಾರ್ವಜನಿಕರಿಗೆ ಸಂಶಯ ಮೂಡಲು ಕಾರಣವಾಗಿದೆ ಎಂದು ತಿಳಿಸಿದರು.


ಸಾರ್ವಜನಿಕರಿಗೆ ನ್ಯಾಯಾಂಗದ ಬಗ್ಗೆ ಅಪಾರವಾದ ಗೌರವಿದೆ. ಪರಿಣಾಮಕಾರಿಯಾಗಿ ತನಿಖೆಯಾಗುತ್ತಿರುವ ಈ ಸಮಯದಲ್ಲಿ ಸಾರ್ವಜನಿಕರು ಇದರ ಫಲಿತಾಂಶದ ನಿರೀಕ್ಷೆಯಲ್ಲಿರುತ್ತಾರೆ. ಆದರೆ ರಾಜ್ಯ ಸರಕಾರ ಏನೂ ಮಾತನಾಡುವುದಿಲ್ಲ, ಅಧೀವೇಶನದ ಸಮಯದಲ್ಲಿ ಗೃಹಸಚಿವರು ತನಿಖೆ ಆಗುತ್ತಿದೆ ಎಂದು ಹೇಳಿದ್ದನ್ನು ಬಿಟ್ಟರೇ, ಮಧ್ಯಂತರ ವರದಿ ಯಾವ ಹಂತದಲ್ಲಿದೆ ಏನು ಆಗಿದೆ ಎಂಬುದನ್ನು ಹೇಳುತ್ತಿಲ್ಲ. ಸರಕಾರದ ಪ್ರಮುಖ ಹುದ್ದೆಯಲ್ಲಿರುವವರೇ ಇದು ಷಡ್ಯಂತರದ ಭಾಗ ಎಂದು ಹೇಳಿದ ಮೇಲೆ ಇದರಲ್ಲಿ ಷಡ್ಯಂತವಾಗಿದೆ ಎಂದು ಸರಕಾರದ ಮಟ್ಟದಲ್ಲಿ ಗೊತ್ತಾಗಿದೆ. ಆದರೆ ಷಡ್ಯಂತರ ಮಾಡಿದವರ ಮೇಲೆ ಏನು ಕ್ರಮ ಆಗಿದೆ ಎಂದು ಸಾರ್ವಜನಿಕರು ಕೇಳುವ ಪರಿಸ್ಥಿತಿಯಾಗಿದೆ. ನಿರಂತರ 12 ವರ್ಷಗಳಲ್ಲಿ ನೋವಿನ ಬೇಗೆಯಲ್ಲಿ ಬೆಂದಂತಹ ಕ್ಷೇತ್ರದ ಭಕ್ತರಿಗೆ ಕುತೂಹಲ ಇದೆ. ಸತ್ಯದ ಅಗ್ನಿ ಪರೀಕ್ಷೆ ಅಗುತ್ತದೆ. ಸತ್ಯ ಹೊರಗೆ ಬರುತ್ತದೆ ಎಂದು ಆದರೆ ಎಸ್‌ಐಟಿ ತನಿಖೆಗೆ ಬರಲು ಹೇಳಿದರೂ ಅವರು ಹಾಜರಾಗುತ್ತಿಲ್ಲ, ಎಸ್‌ಐಟಿ ಇದರ ಬಗ್ಗೆ ಪ್ರತಿಕ್ರಿಯಿಸಿಲ್ಲ ಇಲ್ಲಿ ಸಂಶಯ ಬರುತ್ತಿದೆ. ಪಾಪದವನಿಗೆ ಒಂದು ಕಾನೂನು, ಶ್ರೀಮಂತನಿಗೆ ಒಂದು ಕಾನೂನು ಷಡ್ಯಂತನಿಗೆ ಒಂದು ಕಾನೂನು, ಪ್ರಭಾವಿಗೆ ಒಂದು ಕಾನೂನು ಎಡಪಂಥಿಯ ಮಾನಸಿಕತೆ ಹೊಂದಿದವನಿಗೆ ಒಂದು ಕಾನೂನು ಇದು ಸಂಶಯದ ಸುಳಿಗಳು ಉಂಟಾಗಲು ಕಾರಣವಾಗಿದೆ. ಉಪಮುಖ್ಯ ಮಂತ್ರಿಗಳು ಇದು ಷಡ್ಯಂತರ ಭಾಗ ಎಂದು ಹೇಳಿದ ಮೇಲೆ, ಷಡ್ಯಂತರದ ತನಿಖೆ ಆಗುತ್ತಿಲ್ಲ ಎಂದಾದರೆ ಇದರಲ್ಲಿ ಕಾಣದ ಕೈವಾಡದ ಶಂಕೆ ಕಾಡುತ್ತಿದೆ. ಆದ್ದರಿಂದ ಸರಕಾರವನ್ನು ನಾವು ಒತ್ತಾಯಿಸುವುದೆನೆಂದರೆ ಎಸ್‌ಐಟಿ ಕೊಟ್ಟ ಸತ್ಯಸತ್ಯಾತೆಯ 3923 ಪುಟಗಳ ಮಧ್ಯಂತರ ವರದಿಯನ್ನು ಗಮನಿಸಿ ಷಡ್ಯಂತರ ಮಾಡಿದವರಿಗೆ ಕಾನೂನಿನ ಶಿಕ್ಷೆ ಕೊಡಿಸಬೇಕು ಎಂಬ ನಿರೀಕ್ಷೆಯಲ್ಲಿ ಕ್ಷೇತ್ರದ ಭಕ್ತರಾದ ನಾವೆಲ್ಲ ಇದ್ದೇವೆ ಎಂದು ಹೇಳಿದರು.


ಪತ್ರಿಕಾಗೋಷ್ಠಿಯಲ್ಲಿ ಧರ್ಮಸ್ಥಳ ವ್ಯಾಪರಾಸ್ಥರಾದ ಧನಕೀರ್ತಿ ಆರಿಗಾ, ಚಂದ್ರನ್ ಶೆಟ್ಟಿಯಾರ್, ವಾಹನ ಚಾಲಕ-ಮಾಲಕರ ಸಂಘದ ಸದಸ್ಯ ರಾಜಾ, ನೀಲಕಂಡ ಶೆಟ್ಟಿ ಉಪಸ್ಥಿತರಿದ್ದರು.

Related posts

ಸುರತ್ಕಲ್ ಮಣಿ ಕೃಷ್ಣಸ್ವಾಮಿ ಅಕಾಡೆಮಿ ವತಿಯಿಂದ ಸಭಾಂಗಣದ ಲೋಕಾರ್ಪಣೆ

Suddi Udaya

ಉಜಿರೆ ಎಸ್.ಡಿ.ಎಮ್ ಸಿ.ಬಿ.ಎಸ್.ಇ ಶಾಲೆಯಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

Suddi Udaya

ಬಸದಿಗಳನ್ನು ಪುರಾತತ್ವ ಇಲಾಖೆಗೆ ಸೇರಿಸಲು ಪ್ರಯತ್ನಿಸುತ್ತಿರುವುದನ್ನು ವಿರೋಧಿಸಿ ಜೈನ ಸಮಾಜದಿಂದ ತಹಶೀಲ್ದಾರರಿಗೆ ಮನವಿ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಕಿವಿ-ಮೂಗು-ಗಂಟಲು ತಪಾಸಣಾ ಶಿಬಿರ

Suddi Udaya

ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ಸವಣಾಲು : ಕೋಟಿ ಚೆನ್ನಯ್ಯ ಸೈಬರ್ ಸೆಂಟರ್ ಶುಭಾರಂಭ

Suddi Udaya
error: Content is protected !!