25.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಯುವವಾಹಿನಿ ಘಟಕದಿಂದ ಯುವ ವೈಭವ 2025 ಕ್ಕೆ ಅದ್ದೂರಿ ಚಾಲನೆ : ನಾರಾಯಣ ಗುರು ಚಿಂತನೆಯಿಂದ ಈಡಿಗ ಬಿಲ್ಲವರು ಒಗ್ಗಟ್ಟಾಗೋಣ: ವಿಖ್ಯಾತಾನಂದಶ್ರೀ

ಬೆಂಗಳೂರು : ರಾಜ್ಯದಲ್ಲಿ ಈಡಿಗ ಬಿಲ್ಲವರು ಸೇರಿದಂತೆ 26 ಪಂಗಡಗಳಲ್ಲಿ ಹರಿದು ಹಂಚಿಹೋದ ಸಮುದಾಯದ ಉಪ ಪಂಗಡಗಳು ಒಗ್ಗಟ್ಟಾಗಿ ಕರುಳ ಬಳ್ಳಿಯ ಸಂಬಂಧವನ್ನು ಗಟ್ಟಿಗೊಳಿಸಬೇಕು ಎಂದು ಸೋಲೂರು ಈಡಿಗ ಮಹಾ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಕರೆ ನೀಡಿದರು.


ಅವರು ಬೆಂಗಳೂರಿನ ಮೈಸೂರ್ ಬ್ಯಾಂಕ್ ಸರ್ಕಲ್ ಹತ್ತಿರದ ಶಿಕ್ಷಕರ ಸದನದಲ್ಲಿ ಡಿ.7 ರಂದು ನಡೆದ ರಾಜ್ಯಮಟ್ಟದ ಯುವ ವೈಭವ 2025 ಕಾರ್ಯಕ್ರಮವನ್ನು ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿ ಜಾತಿ ಸಮೀಕ್ಷೆಯ ವೇಳೆ ಈಡಿಗ ಸಮುದಾಯದ ವಿವಿಧ ಪಂಗಡಗಳು ರಾಜ್ಯದಲ್ಲಿ ಒಗ್ಗಟ್ಟಿನ ಕೊರತೆಯಿಂದ ಜಾತಿ ನಮೂದಿಸಲು ಕಷ್ಟಕರವಾಯಿತು. ಭವಿಷ್ಯದಲ್ಲಿ ಎಲ್ಲ ಪಂಗಡಗಳನ್ನು ಒಗ್ಗೂಡಿಸುವ ಕೆಲಸ ಅತ್ಯಂತ ಅಗತ್ಯವಾಗಿದ್ದು ಯುವ ವೈಭವ ಏರ್ಪಡಿಸಿದ ಸಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಎಲ್ಲರ ಮನಸ್ಸು ಗೆದ್ದು ಒಗ್ಗಟ್ಟಿನಿಂದ ಗುರು ಚಿಂತನೆಯಡಿ ಸಮಾಜವನ್ನು ಒಗ್ಗಟ್ಟಿನಿಂದ ಕಟ್ಟಿ ಬೆಳೆಸಬೇಕಾಗಿದೆ. ಯುವವಾಹಿನಿಯ ಅದ್ದೂರಿ ಆಯೋಜನೆಯ ಯುವವೈಭವ ಕಾರ್ಯಕ್ರಮ ಸಮಾಜಕ್ಕೆ ಶಕ್ತಿ ತುಂಬಿದೆ ಮತ್ತು ಎಲ್ಲ ಪಂಗಡಗಳ ಯುವಕರನ್ನು ಒಗ್ಗೂಡಿಸಿದೆ ಎಂದು ಸ್ವಾಮೀಜಿ ಶ್ಲಾಘಿಸಿದರು.

ಈಡಿಗ ಬಿಲ್ಲವ ಸೇರಿದಂತೆ 26 ಪಂಗಡಗಳ ಸಮುದಾಯವನ್ನು ಶಕ್ತಿಯುತವಾಗಿ ಬೆಳೆಸಿದಾಗ ರಾಜ್ಯದಲ್ಲಿ ಸಂಕುಚಿತ ಮನೋಭಾವ ದೂರವಾಗಿ ಆತ್ಮಬಲ ಹೆಚ್ಚುತ್ತದೆ ಎಂದು ನಾರಾಯಣ ಗುರು ಬ್ರಹ್ಮಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷರಾದ ಸತ್ಯಜಿತ್ ಸುರತ್ಕಲ್ ಹೇಳಿದರು.


ಭರತನಾಟ್ಯ ಕಲಾವಿದೆ ದೀಕ್ಷಾ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಉದ್ಯಮಿ ಗೋವಿಂದ ಬಾಬು ಪೂಜಾರಿ, ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಸತ್ಯನ್ ಪುತ್ತೂರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಗೀತಾಂಜಲಿ ಸುವರ್ಣ, ನ್ಯಾಯವಾದಿ ಶಿಲ್ಪಾ ಗೋಗಿ,ನಳಿನಾಕ್ಷಿ ಸಣ್ಣಪ್ಪ, ಧೀವರ ಸಂಘದ ರಾಜ್ಯಾಧ್ಯಕ್ಷ ಮಂಚೇಗೌಡ, ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಲೋಕೇಶ್ ಕೋಟ್ಯಾನ್, ಯುವವಾಹಿನಿಯ ಬೆಂಗಳೂರು ಘಟಕದ ಸಾಂಸ್ಕೃತಿಕ ನಿರ್ದೇಶಕರಾದ ಭವ್ಯಶ್ರೀ ಪೂಜಾರಿ, ಸುಧೀರ್ ಪೂಜಾರಿ ಪೆರಾಡಿ, ಕಾರ್ತಿ, ಭಾವನಾ ಮತ್ತಿತರರು ಉಪಸ್ಥಿತರಿದ್ದರು. ಬೆಂಗಳೂರು ಯುವವಾಹಿನಿ ಘಟಕದ ಅಧ್ಯಕ್ಷ ಶಶಿಧರ ಕೋಟ್ಯಾನ್ ಸ್ವಾಗತಿಸಿದರು. ಸಂತೋಷ್ ಪೂಜಾರಿ ಪಣಪಿಲ ಧನ್ಯವಾದವಿತ್ತರು.

ಬೆಳ್ತಂಗಡಿಯ ಯುವವಾಹಿನಿ ಘಟಕಕ್ಕೆ ಪ್ರಶಸ್ತಿ:

ಯುವ ವೈಭವ ರಾಜ್ಯ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಸಮಗ್ರ ಪ್ರಶಸ್ತಿಯನ್ನು ಕಾರ್ಕಳ ಯುವವಾಹಿನಿ ಘಟಕ ಮುಡಿಗೇರಿಸಿಕೊಂಡಿದೆ. ದ್ವಿತೀಯ ಸ್ಥಾನವನ್ನು ಬೆಳ್ತಂಗಡಿ ಯುವವಾಹಿನಿ ಘಟಕ ಪಡೆದುಕೊಂಡಿದೆ.
ಭಾಷಣ ಸ್ಪರ್ಧೆಯಲ್ಲಿ ಬೆಳ್ತಂಗಡಿ ಘಟಕದ ಆಕಾಶ್ (ಪ್ರಥಮ), ಹೊಸಮಾರು ಬಲ್ಯೊಟ್ಟು ಮಠದ ನಿರೀಕ್ಷಾ( ದ್ವಿತೀಯ), ರಂಗೋಲಿ ಸ್ಪರ್ಧೆಯಲ್ಲಿ ಕಾರ್ಕಳ ಘಟಕ ಪ್ರಥಮ ಬಜಪೆ ಘಟಕ ದ್ವಿತೀಯ ಚಿತ್ರಕಲಾ ಸ್ಪರ್ಧೆಯಲ್ಲಿ ಕಾರ್ಕಳ ಪ್ರಥಮ ಬೆಳ್ತಂಗಡಿ (ದ್ವಿತೀಯ) ಗೀತ ಗಾಯನ ಸ್ಪರ್ಧೆಯಲ್ಲಿ ಕಾರ್ಕಳ ಘಟಕ(ಪ್ರಥಮ) ಬಜಪೆ ಘಟಕ ( ದ್ವಿತೀಯ) ನೃತ್ಯ ಸ್ಪರ್ಧೆಯಲ್ಲಿ ಬೆಳ್ತಂಗಡಿ ಘಟಕ (ಪ್ರಥಮ), ಹೊಸಮಾರು ಬಲ್ಯೊಟ್ಟು ಮಠ (ದ್ವಿತೀಯ) ರಸಪ್ರಶ್ನೆ ಸ್ಪರ್ಧೆಯಲ್ಲಿ ಹೊಸಮಾರು ಬಲ್ಯೋಟ್ಟು ಮಠ, ಕೊಲ್ಯ ಘಟಕ( ದ್ವಿತೀಯ) ಸ್ಥಾನ ಪಡೆದಿದೆ. ವೀಡಿಯೋ ಸ್ಪರ್ಧೆಯಲ್ಲಿ ಬೆಳ್ತಂಗಡಿ ಘಟಕ (ಪ್ರಥಮ) ಕಾರ್ಕಳ ಘಟಕ (ದ್ವಿತೀಯ) ಬಹುಮಾನ ಪಡೆದು ಸಂಭ್ರಮಿಸಿದರು.

Related posts

ಸೂರ್ಯತ್ತಾವು ಶ್ರೀ ದುರ್ಗಾ ಜನರಲ್ ಸ್ಟೋರ್ ಹಾಗೂ ಚಿಕನ್ ಸೆಂಟರ್ ಶುಭಾರಂಭ

Suddi Udaya

ಎ.22-ಮೇ.20: ಮುಳಿಯ ಮಳಿಗೆಗಳಲ್ಲಿ ‘ಮುಳಿಯ ಚಿನ್ನೋತ್ಸವ ಸಂಭ್ರಮ’ ಗ್ರಾಹಕರ ನೆಚ್ಚಿನ ಚಿನ್ನಾಭರಣಗಳನ್ನು ಆಕರ್ಷಕ ಬೆಲೆಗೆ ಖರೀದಿಸಲು ಸುವರ್ಣವಕಾಶ

Suddi Udaya

ಸೆ.26-27: ಬೆಳ್ತಂಗಡಿಯಲ್ಲಿ ಊದು ಪೂಜೆ ಮತ್ತು ಬೋಳ್ತೆರ್ದ ಪಿಲಿಕುಲೆನ ಅಬ್ಬರದ ನಲಿಕೆ

Suddi Udaya

ಅಳದಂಗಡಿ: ಶ್ರೀ ಗಾಯತ್ರಿ ವಿಶ್ವಕರ್ಮ ಸಂಘದ ಕಾರ್ಯಕಾರಿ ಸಭೆ

Suddi Udaya

ದಯಾ ಶಾಲಾ ವಾರ್ಷಿಕೋತ್ಸವ

Suddi Udaya

ಗುರುವಾಯನಕೆರೆ ಶ್ರೀ ಕ್ಷೇ.ಧ.ಗ್ರಾ. ಯೋಜನೆ ಹಾಗೂ ಮುಂಡೂರು ಸ.ಪ್ರಾ. ಶಾಲೆಯ ಸಹಕಾರದೊಂದಿಗೆ ಪರಿಸರ ಜಾಗೃತಿ ಮಾಹಿತಿ ಹಾಗೂ ಗಿಡ ನಾಟಿ ಕಾರ್ಯಕ್ರಮ

Suddi Udaya
error: Content is protected !!