38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಟೈಲರ್ಸ್ ಅಸೋಸಿಯೇಷನ್ ವಲಯ ಸಮಿತಿ ಹಾಗೂ ಕ್ಷೇತ್ರ ಸಮಿತಿ ವತಿಯಿಂದ ಉಚಿತ ನೇತ್ರ ಪರೀಕ್ಷೆ ಮತ್ತು ಕನ್ನಡಕ ವಿತರಣೆ


ಬೆಳ್ತಂಗಡಿ: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಬೆಳ್ತಂಗಡಿ ವಲಯ ಸಮಿತಿ ಹಾಗೂ ಕ್ಷೇತ್ರ ಸಮಿತಿ, ಡಾ.ಅಶ್ವಿನ್ ಐ ಕೇರ್ ಸೆಂಟರ್ ಪುತ್ತೂರು ಹಾಗೂ ವಿಕಾಸ್ ಒಪ್ಟಿಕಲ್ಸ್ ಬೆಳ್ತಂಗಡಿ ಇವರ ಸಹಯೋಗದಲ್ಲಿ ಡಿ.7 ರಂದು ಉಚಿತ ನೇತ್ರ ಪರೀಕ್ಷೆ ಮತ್ತು ಕನ್ನಡಕ ವಿತರಣೆ ಜೇಸಿ ಭವನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನೆಯನ್ನು ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ರಾವ್ ದೀಪ ಬೆಳಗಿಸಿ ನೆರವೇರಿಸಿ ಶುಭವನ್ನು ಹಾರೈಸಿದರು. ಸಭೆಯ ಅಧ್ಯಕ್ಷತೆಯನ್ನು ಕ್ಷೇತ್ರ ಸಮಿತಿ ಅಧ್ಯಕ್ಷ ರಾಜು ಪೂಜಾರಿ ಅಳದಂಗಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸೈನಿಕರ ಸಂಘದ ಮಾಜಿ ಅಧ್ಯಕ್ಷ ಮಹಮ್ಮದ್ ರಫೀಕ್,ಟೈಲರ್ಸ್ ಅಸೋಸಿಯೇಷನ್ ರಾಜ್ಯ ಸಮಿತಿ ಅಧ್ಯಕ್ಷ ಸುರೇಶ್ ಸಾಲಿಯಾನ್, ಜಿಲ್ಲಾ ಸಮಿತಿ ಅಧ್ಯಕ್ಷ ಜಯಂತ್ ಉರ್ಲಾಂಡಿ ,ಜಿಲ್ಲಾ ಉಪಾಧ್ಯಕ್ಷರಾದ ವೇದಾವತಿ ಜನಾರ್ದನ, ಜಿಲ್ಲಾ ಕಾರ್ಯದರ್ಶಿ ಈಶ್ವರ್ ಕುಲಾಲ್, ಕ್ಷೇತ್ರ ಸಮಿತಿ ಕಾರ್ಯದರ್ಶಿ ಲ್ಯಾನ್ಸಿ ಡಿಸೋಜಾ, ಬೆಳ್ತಂಗಡಿ ವಲಯ ಸಮಿತಿ ಉಪಾಧ್ಯಕ್ಷ ಮೋಹನ್ ಶೆಟ್ಟಿ, ನಾಗೇಶ್ ಇಂಜಿನಿಯರ್ ಬೆಳ್ತಂಗಡಿ, ಅರುಣ್ ಶೆಟ್ಟಿ ಶ್ರೀ ದುರ್ಗಾ ಉದ್ಯಮಿಗಳು ಬೆಳ್ತಂಗಡಿ, ಸತ್ಯ ಶಂಕರ್ ಭಟ್ ಸನ್ನಿಧಿ ಮೆಡಿಕಲ್ ಬೆಳ್ತಂಗಡಿ, ಬೆಳ್ತಂಗಡಿ ವಲಯ ಸಮಿತಿ ಕಾರ್ಯದರ್ಶಿ ಜಿ.ವಿ.ಹರೀಶ್ ಸವಣಾಲು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಶಾಲಪ್ಪ ಗೌಡ, ಜಿಲ್ಲಾ ಮಾಜಿ ಕಾರ್ಯದರ್ಶಿ ನವೀನ್ ಪೂಜಾರಿ, ವಲಯ ಸಮಿತಿ ಕೋಶಾಧಿಕಾರಿ ಸುರೇಖಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ನಿಧಿ ಮೆಡಿಕಲ್ಸ್ ಮಾಲಕರಾದ ಸತ್ಯಶಂಕರ್ ಭಟ್ ಕೊಡುಗೆಯಾಗಿ ನೀಡಿದ ವೀಲ್ ಚೆಯರನ್ನು ದೀಕ್ಷಿತ್ ಬಿರ್ಮಜಲು ಇವರಿಗೆ ಹಸ್ತಾಂತರ ಮಾಡಲಾಯಿತು. ಟೈಲರ್ಸ್ ವೃತ್ತಿ ಭಾಂದವರಿಗೆ ಐಡಿ ಕಾರ್ಡ್ ವಿತರಿಸಲಾಯಿತು. ಕಾರ್ಯಕ್ರಮವನ್ನು ಬೆಳ್ತಂಗಡಿ ವಲಯ ಸಮಿತಿಯ ಅಧ್ಯಕ್ಷ ಸುರೇಂದ್ರ ಕೋಟ್ಯಾನ್ ಸಂಘಟಿಸಿದ್ದರು. ಕ್ಷೇತ್ರ ಸಮಿತಿ ಮತ್ತು ವಲಯ ಸಮಿತಿಯ ಪದಾಧಿಕಾರಿಗಳು ಪೂರ್ಣ ಸಹಕಾರವನ್ನು ನೀಡಿದರು. ಕ್ಷೇತ್ರ ಸಮಿತಿ ಮಾಜಿ ಕಾರ್ಯದರ್ಶಿ ಸದಾನಂದ ಸಾಲಿಯಾನ್ ಬಳಂಜ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವಸಂತ ಸ್ವಾತಿ ಟೈಲರ್ ಧನ್ಯವಾದ ಸಲ್ಲಿಸಿದರು.

Related posts

ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಯುವ ಬಿಲ್ಲವ ವೇದಿಕೆ, ಮಹಿಳಾ ಬಿಲ್ಲವ ವೇದಿಕೆ ಕುವೆಟ್ಟು, ಓಡಿಲ್ನಾಳ ಗ್ರಾಮ ಸಮಿತಿ ಆಶ್ರಯದಲ್ಲಿ ‘ಆಟಿಡೊಂಜಿ ಕೂಟ’

Suddi Udaya

ರೆಖ್ಯ: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಕಾರು: 6 ಮಂದಿಗೆ ಗಂಭೀರ ಗಾಯ

Suddi Udaya

ಎಸ್.ಡಿ.ಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ : ರಾಜ್ಯ ಮಟ್ಟದ ಮಹಿಳೆಯರ ತ್ರೋಬಾಲ್ ಪಂದ್ಯಾಟ : ಪ್ರಶಸ್ತಿ ಪ್ರದಾನ ಸಮಾರಂಭ

Suddi Udaya

ಸುಲ್ಕೇರಿಮೊಗ್ರು: ದರ್ಖಾಸು ಐರಿನ್ ಡಿಸೋಜರವರ ಮನೆ ಹಿಂಬದಿ ಗುಡ್ಡ ಕುಸಿತ: ಗ್ರಾ.ಪಂ. ಅಧಿಕಾರಿಗಳ ಭೇಟಿ

Suddi Udaya

ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಬಂದ ಅಂಕಣಕಾರ ತನ್ವೀರ್ ಅಹಮ್ಮದ್ ಉಲ್ಲಾ ಅವರಿಗೆ ಭವ್ಯ ಸ್ವಾಗತ

Suddi Udaya

ವಾಣಿ ಪದವಿ ಪೂರ್ವ ಕಾಲೇಜು ಬೆಳ್ತಂಗಡಿಯಲ್ಲಿ ಚಂದ್ರಯಾನ – 3 ಯಶಸ್ವಿಯ ಸಂಭ್ರಮಾಚರಣೆ

Suddi Udaya
error: Content is protected !!