September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿರಾಜ್ಯ ಸುದ್ದಿವರದಿ

ಬೆಳಗಾವಿ ಅಧಿವೇಶನ: ಕಾಡಾನೆಗಳ ನಿರಂತರ ಹಾವಳಿಯಿಂದಾಗಿ ಬೆಳೆ ನಾಶ: ಶಾಶ್ವತ ಪರಿಹಾರ ಒದಗಿಸಿ-ವಿ.ಪ.ಸದಸ್ಯ ಪ್ರತಾಪಸಿಂಹ ನಾಯಕ್ ಆಗ್ರಹ

ಬೆಳ್ತಂಗಡಿ: ಆನೆಗಳು ಸಂಚರಿಸುವ ಪಥಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯು ನಿರಂತರವಾಗಿ ಹಗಲು-ರಾತ್ರಿ ನಡೆಯುತ್ತಿದೆ. ಇದಲ್ಲದೇ ಈ ಅಭಿವೃದ್ಧಿ ಕಾಮಗಾರಿಗಳಿಗೆ ಅರಣ್ಯ ಭೂಮಿಗಳು ಬಳಕೆಯಾಗುತ್ತಿದ್ದು, ಅರಣ್ಯ ಪ್ರದೇಶಗಳು ಕ್ಷೀಣಿತವಾಗುತ್ತಿದ್ದು, ಅವಾಸ ಸ್ಥಾನ ವಿಭಜನೆಯಿಂದಾಗಿ ಕಾಡಾನೆಗಳು ಹೊಸ ಪ್ರದೇಶಗಳಿಗೆ ಸಂಚಾರ ಮಾಡುತ್ತಿದ್ದು, ಸ್ಥಳೀಯ ಕೃಷಿ ಭೂಮಿಗಳಿಗೆ ಹಾನಿಯುಂಟಾಗುತ್ತಿದೆ. ಇದರಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮತ್ತು ಕಡಬ ತಾಲ್ಲೂಕಿನಲ್ಲಿ ಗಡಿ ಭಾಗದ ಗ್ರಾಮೀಣ ಭಾಗಗಳಲ್ಲಿ ಕಾಡಾನೆಗಳ ಹಾವಳಿಯಿಂದಾಗಿ ಬೆಳ ಹಾನಿಯಾಗುತ್ತಿರುತ್ತದೆ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಅವರು ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಸಭಾ ಅಧಿವೇಶನದಲ್ಲಿ ವಿಧಾನಪರಿಷತ್ ಸದಸ್ಯ ಉಜಿರೆ ಪ್ರತಾಪಸಿಂಹ ನಾಯಕ್ ಅವರು ಕಾಡಾನೆಗಳ ನಿರಂತರ ಹಾವಳಿಯಿಂದಾಗಿ ಬೆಳೆ ನಾಶದ ಬಗ್ಗೆ ಹಾಗೂ ಇದನ್ನು ತಪ್ಪಿಸಲು ಸರಕಾರ ಮಾಡಿರುವ ಸೂಕ್ತ ಮತ್ತು ಶಾಶ್ವತ ಪರಿಹಾರ ಕ್ರಮದ ಬಗ್ಗೆ ಕೇಳಿರುವ ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು.

ಬೆಳ್ತಂಗಡಿ ತಾಲೂಕಿನಲ್ಲಿ 18 ಗ್ರಾಮಗಳ ಕಾಡಿನ ನಡುವೆ ವಾಸಿಸುವ ಜನವಸತಿ ಪ್ರದೇಶಗಳಾಗಿದ್ದು ದಿನನಿತ್ಯ ಮಾನವ-ವನ್ಯಪ್ರಾಣಿ ಸಂಘರ್ಷಕ್ಕೆ ಸಿಲುಕಿದಂತಾಗಿರುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ ಮುಖ್ಯ ಹೆದ್ದಾರಿಗಳಾದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 73 (ಚಾರ್ಮಾಡಿ ಘಾಟ್), ರಾಷ್ಟ್ರೀಯ ಹೆದ್ದಾರಿ ಸಂಖ್ಯೆ75 (ಶಿರಾಡಿ ಘಾಟ್), ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 273 (ಮಾಣಿ-ಮಡಿಕೇರಿ) ಇವೆಲ್ಲವೂ ದಟ್ಟ ಅರಣ್ಯ ಪ್ರದೇಶಗಳಲ್ಲಿ ಹಾದುಹೋಗುತ್ತಿರುವುದಲ್ಲದೇ, ಆನೆಗಳು ಸಂಚರಿಸುವ ನೈಸರ್ಗಿಕ ಪಥ ಕೂಡಾ ಆಗಿರುತ್ತದೆ. ಹಲವಾರು ಬಾರಿ ಆನೆಗಳು ಅಥವಾ ಕಾಡುಕೋಣಗಳು ರಸ್ತೆ ದಾಟುವ ಸಂದರ್ಭದಲ್ಲಿ ವಾಹನಗಳ ಸಂಚಾರವನ್ನು ತಡೆದು ಪ್ರಾಣಿಗಳು ರಸ್ತೆ ದಾಟುವುದಕ್ಕೆ ಅವಕಾಶ ನೀಡಿರುವಂತಹ ಪ್ರಕರಣಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಹಾಗೂ ಕೆಲವು ಪ್ರಕರಣಗಳಲ್ಲಿ ವಾಹನಗಳಿಗೆ ಹಾನಿ ಮಾಡಿದಂತಹ ಪ್ರಕರಣಗಳು ದಾಖಲಾಗಿರುತ್ತದೆ. ಮಾನವ- ವನ್ಯಜೀವಿ ಸಂಘರ್ಷ ತಡೆಗಟ್ಟಲು ರಾಜ್ಯ ಸರಕಾರದಿಂದ ೫ ವರ್ಷಗಳ ಸ್ಟ್ರಾಟೆಜಿಕ್ ಪ್ಯಾನ್ ತಯಾರಿಸುವ ಪ್ರಕ್ರಿಯೆಯು ಪರಿಶೀಲನಾ ಹಂತದಲ್ಲಿದೆ.

ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಆನೆ ಸರೆ ಹಿಡಿಯುವ ಹಾಗೂ ಹಿಮ್ಮೆಟ್ಟಿಸುವ ಕಾರ್ಯಾಚರಣೆ ನಡೆಯುತ್ತಿದ್ದು ಹಾಗೂ ಬೇಸಿಗೆಯಲ್ಲಿ ಬೆಂಕಿ ಬಿದ್ದ ಸಂದರ್ಭಗಳಲ್ಲಿ ಬೆಟ್ಟ-ಗುಡ್ಡಗಳಿಂದ ಇಳಿದು ಬರುತ್ತಿರುವುದರಿಂದ ಪ್ರದೇಶಗಳಲ್ಲಿ ಕಾಡಾನೆಗಳ ಚಲನವಲನಗಳು ಹೆಚ್ಚುತ್ತಿರಲು ಕಾರಣವಾಗಿದೆ.ಕಾಡಾನೆ ದಾಳಿಯಿಂದ ಬಾಳಗಿಡ, ತೆಂಗು ಮತ್ತು ಅಡಿಕೆ ಮರಗಳು ಹಾನಿಗೊಳಗಾಗಿ ಬಹುವಾರ್ಷಿಕ ಬೆಳೆಗಳನ್ನು ಕಳೆದುಕೊಂಡು ಕೃಷಿಕರಿಗೆ ಪರಿಹಾರವನ್ನು ನೀಡಲಾಗುತ್ತಿದೆ. ಕೃಷಿಕರಿಗೆ ಪರಿಹಾರ ಧನವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಪಾವತಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಮುಂದುವರಿದು ಕಾಡಾನೆಗಳ ದಾಳಿಯನ್ನು ತಡೆಗಟ್ಟಲು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಉಪ್ಪಿನಂಗಡಿ, ಪುತ್ತೂರು, ಪಂಜ, ಸುಳ್ಯ ಮತ್ತು ಸುಬ್ರಹ್ಮಣ್ಯ ವ್ಯಾಪ್ತಿಗೆ ಒಳಪಡುವ ೯೫.೦೦ ಕಿ.ಮೀ. ಉದ್ಯದ ಆನೆ ಸಂಚರಿಸುವ ನೈಸರ್ಗಿಕ ಪಥದ ಇಕ್ಕೆಲಗಳಲ್ಲಿ ಜನವಸತಿ ಪ್ರದೇಶ ಹಾಗೂ ಕೃಷಿ ಚಟುವಟಿಕೆಗಳಗಳಿಗೆ ಕಾಡಾನೆಗಳ ದಾಳಿಯನ್ನು ನಿಯಂತ್ರಿಸಲು ಅನುವಾಗುವಂತೆ “ದಕ್ಷಿಣ ಕನ್ನಡ ಜಿಲ್ಲಾ ಆನೆ ಕಾರ್ಯಪಡೆ” ಯನ್ನು ರಚಿಸುವ ಪ್ರಸ್ತಾವನೆಯು ಪರಿಶೀಲನೆಯಲ್ಲಿರುತ್ತದೆ ಎಂದು ಸಚಿವರು ತಿಳಿಸಿದರು.

Related posts

ರಾಷ್ಟ್ರಮಟ್ಟದ ಯೂತ್ ಗೇಮ್ಸ್ : ಉಜಿರೆಯ‌ ಎಸ್.ಡಿ.ಎಂ ಶಾಲೆ ವಿದ್ಯಾರ್ಥಿನಿ ಚಾಂಪಿಯನ್

Suddi Udaya

ಉಜಿರೆ ಭಾರತ್ ಆಟೋ ಕಾರ್‍ಸ್ ಮಾರುತಿ ಸುಝುಕಿ ಶೋರೂಮ್ ನಲ್ಲಿ ಡಾಜ್ಲಿಂಗ್ ನ್ಯೂ ಡಿಝೈರ್ ಕಾರು ಮಾರುಕಟ್ಟೆಗೆ

Suddi Udaya

ಹತ್ಯಡ್ಕ ಪ್ರಾ.ಕೃ.ಪ. ಸಹಕಾರಿ ಸಂಘದ ಸಿಬ್ಬಂದಿವರ್ಗದವರಿಂದ ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿ. ತ್ಯಾಂಪಣ್ಣ ಶೆಟ್ಟಿಗಾರ್ ರವರಿಗೆ ಗೌರವಾರ್ಪಣೆ

Suddi Udaya

ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹುಟ್ಟುಹಬ್ಬ: ನಾಗೇಶ್ ಕುಮಾರ್ ಅಭಿಮಾನಿ ಬಳಗದ ವತಿಯಿಂದ ಕೊಕ್ಕಡ ಎಂಡೋ ಸಲ್ಫಾನ್ ಪಾಲನಾ ಕೇಂದ್ರ ಹಾಗೂ ಕೊಕ್ಕಡ ಅಂಗನವಾಡಿ ಕೇಂದ್ರದಲ್ಲಿ ಆಚರಣೆ

Suddi Udaya

ಕೊಯ್ಯೂರು ತಾಲೂಕು ಮಟ್ಟದ ಬಾಲಕ, ಬಾಲಕಿಯರ ಮ್ಯಾಟ್ ಕಬ್ಬಡಿ ಪಂದ್ಯಾಟ

Suddi Udaya

ಮಚ್ಚಿನ ಸರಕಾರಿ ಪ್ರೌಢ ಶಾಲಾ ಪ್ರಾರಂಭೋತ್ಸವ

Suddi Udaya
error: Content is protected !!