24.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿರಾಜ್ಯ ಸುದ್ದಿವರದಿ

ಬೆಳಗಾವಿ ಅಧಿವೇಶನ: ಬೆಳೆ ವಿಮೆ ಪರಿಹಾರದಲ್ಲಿ ತಾರತಮ್ಯ ಏಕೆ?: ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ಈ ಭಾರಿಯ ಬೆಳೆ ವಿಮೆಯ ವಿತರಣೆಯಲ್ಲಿ ಕರಾವಳಿ ಭಾಗದ ಅಡಿಕೆ ಹಾಗೂ ಕರಿಮೆಣಸು ಬೆಳೆಗಾರರಿಗೆ ಅತೀ ಹೆಚ್ಚು ಮಳೆಯಿಂದಾಗಿ ಕೃಷಿಗೆ ಗರಿಷ್ಠ ಮಟ್ಟದ ಹಾನಿ ಉಂಟಾಗಿದ್ದರು ಅತ್ಯಂತ ಕಡಿಮೆ ವಿಮಾ ಪರಿಹಾರ ಬಂದಿದ್ದು ಈ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಿ ರೈತರಿಗೆ ಅನುಕೂಲವಾಗುವಂತೆ ಅತ್ಯಂತ ಹೆಚ್ಚಿನ ಮೊತ್ತದ ಪರಿಹಾರವನ್ನು ಒದಗಿಸುವಂತೆ ಶಾಸಕ ಹರೀಶ್ ಪೂಂಜ ಸರ್ಕಾರವನ್ನು ಸದನದಲ್ಲಿ ಒತ್ತಾಯಿಸಿದರು.

ಇಳಂತಿಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 2023ರಲ್ಲಿ 3,791 ಮಿ.ಮೀ. ಮಳೆ ಬಿದ್ದಿರುವುದಾಗಿ ಮಳೆಮಾಪಕ ಯಂತ್ರದಲ್ಲಿ ದಾಖಲಾಗಿದೆ. 58ಸಾವಿರ ರೂ. ವಿಮೆ ಸಿಕ್ಕಿತ್ತು. 2024ರಲ್ಲಿ 4,876 ಮಿ.ಮೀ. ಮಳೆಯಾಗಿತ್ತಾದರೂ ವಿಮೆ ಪರಿಹಾರ ಸಿಕ್ಕಿದ್ದು ಮಾತ್ರ 25,000 ರೂಪಾಯಿ. ಈ ತಾರತಮ್ಯ ಏಕೆ? ಇದಕ್ಕೆ ಏನು ಮಾನದಂಡ? ಹೆಚ್ಚು ಮಳೆ ಬಿದ್ದರೂ ಕಡಿಮೆ ವಿಮೆ ಪರಿಹಾರ ಏಕೆ? ಅಡಿಕೆ, ಕರಿಮೆಣಸು, ರಬ್ಬರ್‌ ಬೆಳೆಗಾರರಿಗೆ ಇದರಿಂದ ಸಾಕಷ್ಟು ನಷ್ಟ ಆಗುತ್ತಿದೆ ಎಂದು ಗಮನ ಸೆಳೆದರು.

Related posts

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ರವರಿಗೆ ಸ್ವಾಗತ ಕೋರಿ ಬ್ಯಾನರ್ ಅಳವಡಿಕೆ : ಬ್ಯಾನರ್ ತೆರವು ಗೊಳಿಸಿದ ಪಟ್ಟಣ ಪಂಚಾಯತ್ ಸಿಬ್ಬಂದಿಗಳು

Suddi Udaya

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತೆನೆ ಹಬ್ಬ

Suddi Udaya

ಕಲ್ಲೇರಿ: ಕಾರು ಮತ್ತು ಸ್ಕೂಟಿಯ ನಡುವೆ ಭೀಕರ ರಸ್ತೆ ಅಪಘಾತ: ಓರ್ವ ಮೃತ್ಯು

Suddi Udaya

ವಿಘ್ನೇಶ್ ಸಿಟಿ ಕಾಂಪ್ಲೆಕ್ಸ್ ನ ಬಾಡಿಗೆದಾರರಿಂದ ಸಹಾಯಧನ ಹಸ್ತಾಂತರ

Suddi Udaya

ಅಭ್ಯಾಸ್ ಪಿಯು ಕಾಲೇಜು ಹಾಗೂ ಪ್ರಸನ್ನ ಕಾಲೇಜಿನ ಜಂಟಿ ಆಶ್ರಯದಲ್ಲಿ ಅಬ್ಬಕ್ಕ ರಾಣಿಯ ವರ್ಷಾಚರಣೆಯ ಅಂಗವಾಗಿ ಉಪನ್ಯಾಸ ಕಾರ್ಯಕ್ರಮ

Suddi Udaya

ಹಿಂದೂ ರುದ್ರಭೂಮಿಗಾಗಿ ನೆರಿಯ ಗ್ರಾಮಸಭೆಯಲ್ಲಿ ಪಂಚಾಯತ್ ಮತ್ತು ಗ್ರಾಮಸ್ಥರ ನಡುವೆ ಚರ್ಚೆ,

Suddi Udaya
error: Content is protected !!