37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹೆತ್ತವರ ಕ್ರೀಡಾಕೂಟ

ಮಡಂತ್ಯಾರು : ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆ, ಮಡಂತ್ಯಾರಿನಲ್ಲಿ ಹೆತ್ತವರ ಕ್ರೀಡಾಕೂಟವು ಡಿ.10 ರಂದು ಸೇಕ್ರೆಡ್ ಹಾರ್ಟ್ ಕಾಲೇಜು ಕ್ರೀಡಾಂಗಣದಲ್ಲಿ ನೆರವೇರಿತು.

ಕ್ರೀಡಾಕೂಟದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ವಂ|ಸ್ವಾ|ದೀಪಕ್ ಲಿಯೋ ಡೇಸರವರು ವಹಿಸಿ ಮಾತನಾಡಿ, ಕ್ರೀಡೋತ್ಸವ ಮನಸ್ಸಿಗೆ ಸಂತೋಷವನ್ನು ನೀಡಲಿ. ಸಂತೋಷದಿಂದ ಬಂದಿದ್ದೀರಿ, ಸಂತೋಷದಿಂದ ಆಡಿ. ನಿಮ್ಮ ಜೀವನದಲ್ಲಿ ಅವಿಸ್ಮರಣೀಯ ದಿನವಾಗಲಿ ಎಂದು ಹೇಳಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ರವೀಂದ್ರ ರೈ ಮಾತನಾಡಿ ಇವತ್ತಿನ ಕ್ರೀಡಾಕೂಟ ದ್ವೇಷಕ್ಕೆ ಕಾರಣವಾಗದೆ ಸ್ನೇಹ ಸೌಹಾರ್ದಕ್ಕೆ ಕಾರಣವಾಗಲಿ.ಕ್ರೀಡಾ ಮನೋಭಾವದಿಂದ ಆಡಿ ಪೋಷಕರ ವಾರ್ಷಿಕ ಕೀಡಾ ಕೂಟವನ್ನು ಯಶಸ್ವಿಗೊಳಿಸೋಣ ಎಂದು ಹೇಳಿದರು.

ಹೆತ್ತವರು ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ಈ ಕ್ರೀಡಾಕೂಟವನ್ನು ಯಶಸ್ವಿಗೊಳಿಸಿದರು. ಕ್ರೀಡಾಕೂಟದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ-ರಕ್ಷಕ ಸಂಘದ ಸದಸ್ಯರು, ಹೆತ್ತವರು, ಶಿಕ್ಷಕ-ಶಿಕ್ಷಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಕ್ರೀಡಾಕೂಟವನ್ನು ಸಹ ಶಿಕ್ಷಕರಾದ ಶ್ರೀ ಜೆರಾಲ್ಡ್ ಡಿಸೋಜ ಮತ್ತು ಶ್ರೀಮತಿ ಐಡ ಡಿಕುನ್ಹ ರವರು ನಿರೂಪಿಸಿ, ಮೇಘಶ್ರೀರವರು ಸ್ವಾಗತಿಸಿ, ವಲೇರಿಯನ್ ಡಿಸೋಜರವರು ಧನ್ಯವಾದವನ್ನು ಸಮರ್ಪಿಸಿದರು.

Related posts

ಲೋಕಸಭಾ ಚುನಾವಣೆ ಹಿನ್ನಲೆ: ಬೆಳ್ತಂಗಡಿಯ ಪಿಎಸ್ಐ ಓಡಿಯಪ್ಪ ಗೌಡ ಹಾಗೂ ಪುಂಜಾಲಕಟ್ಟೆಯ ಪಿಎಸ್ಐ ನಂದ ಕುಮಾರ್ ವರ್ಗಾವಣೆ

Suddi Udaya

ಪಡಂದಡ್ಕ ವ್ಯಾಪ್ತಿಯಲ್ಲಿ ರಸ್ತೆ ಹಾಗೂ ಚರಂಡಿ ದುರಸ್ತಿಗೆ ಎಸ್.ಡಿ.ಪಿ.ಐ ಮನವಿ

Suddi Udaya

ಬೆಳ್ತಂಗಡಿಯ ‘ಆಲ್ಫಾ ಕೋಟ್’ ನಿವಾಸಿ ಮೇರಿ ಮಾಡ್ತಾ ನಿಧನ

Suddi Udaya

ಬೆಳ್ತಂಗಡಿ: ಶ್ರೀ ವೀರಾಂಜನೇಯ ಸೇವಾ ಸಮಿತಿ ವತಿಯಿಂದ ಬಡಕುಟುಂಬಗಳಿಗೆ ಸಹಾಯಧನ ಹಸ್ತಾಂತರ

Suddi Udaya

ಕೊಕ್ಕಡ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುರಕ್ಷಾ ವಿಮಾ ಯೋಜನೆ ಚೆಕ್ ಹಸ್ತಾಂತರ

Suddi Udaya

ಬೆಳ್ತಂಗಡಿ ಸಂತ ತೆರೇಸಾ ಪ್ರೌಢ ಶಾಲೆಗೆ ಶೇ.88.60 ಫಲಿತಾಂಶ

Suddi Udaya
error: Content is protected !!