25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಎಸ್.ವೈ.ಎಸ್ ಬೆಳ್ತಂಗಡಿ ಝೋನ್ ಮಾದರಿ ಮದುವೆ ಪ್ರಯುಕ್ತ ಡಿ.12 ರಂದು ಜಮಾಅತ್ ಪ್ರತಿನಿಧಿ ಸಂಗಮ

ಬೆಳ್ತಂಗಡಿ: ಮದುವೆಯ ಹೆಸರಿನಲ್ಲಿ ಇಂದು ಹಲವಾರು ಅನಾಚಾರಗಳು ನಡೆಯುತ್ತಿದ್ದು, ಮದುವೆಯನ್ನು ಹೆಚ್ಚು ಭಾರಗೊಳಿಸುವುದರೊಂದಿಗೆ, ಅನಿಸ್ಲಾಮಿಕತೆಗಳಿಂದ ಮದುವೆಯ ಬರಕತ್ತನ್ನು ನೀಗಿಸಲಾಗುತ್ತಿದೆ. ಇದಕ್ಕೊಂದು ಕಡಿವಾಣ ಹಾಕಬೇಕೆಂದುಕೊಂಡು ಎಸ್.ವ್ಯೆ.ಎಸ್ ಕರ್ನಾಟಕ ರಾಜ್ಯ ಸಮಿತಿಯು ‘ಮಾದರಿ ಮದುವೆ: ಶತದಿನ ಅಭಿಯಾನ’ವನ್ನು ಹಮ್ಮಿಗೊಂಡಿದ್ದು. ಆ ಪ್ರಯುಕ್ತ ಎಸ್.ವ್ಯೆ.ಎಸ್ ಬೆಳ್ತಂಗಡಿ ಝೋನ್ ಜಮಾಅತ್ ಪ್ರತಿನಿಧಿಗಳ ಸಂಗಮ ಡಿ12 ರಂದು 3ಗಂಟೆಗೆ ಝೋನ್ ಅಧ್ಯಕ್ಷ ಅಬ್ದುಲ್ ರಹ್ಮಾನ್ ಸಖಾಫಿ ಆಲoದಿಲ ರವರ ಅಧ್ಯಕ್ಷತೆ ಯಲ್ಲಿ ಗುರುವಾಯನಕೆರೆ ಮಸೀದಿ ಹಾಲ್ ನಲ್ಲಿ ನಡೆಯಲಿರುವುದು.

ಅಸ್ಸಯ್ಯದ್ ಇಸ್ಮಾಯಿಲ್ ಅಲ್ ಹಾದಿ ತಂಗಳ್ ಉಜಿರೆ ಕಾರ್ಯಕ್ರಮದ ದುಆ ನೇತ್ರತ್ವವನ್ನು ನೀಡಲಿದ್ದಾರೆ. ಅಸ್ಸಯ್ಯದ್ ಅಬ್ದುಲ್ ರಹ್ಮಾನ್ ಬಾ-ಅಲವಿ ಸಾದಾತ್ ತಂಗಳ್ ಕುಪ್ಪೆಟ್ಟಿ ಉದ್ಘಾಟನೆ ಯೊಂದಿಗೆ ಚಾಲನೆ ನೀಡಲಿದ್ದಾರೆ. ಮತ್ತು
ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿ MSM ಅಬ್ದುಲ್ ರಶೀದ್ ಝ್ಯೆನಿ ಕಾಮಿಲ್ ಸಖಾಫಿ ಮಾದರಿ ಮದುವೆ ಬಗ್ಗೆ ವಿಷಯ ಮಂಡಿಸಲಿದ್ದಾರೆ.

ಬೆಳ್ತಂಗಡಿ ಝೋನ್ ವ್ಯಾಪ್ತಿಯ 60 ಮೊಹಲ್ಲಾ ಗಳಿಂದ ಖತೀಬರು, ಜಮಾಅತ್ ಪ್ರತಿನಿದಿಗಳು ಸೇರಿ ಸುಮಾರು 350ರಷ್ಟು ನಾಯಕರುಗಳು ಭಾಗವಹಿಸಲಿದ್ದಾರೆ. ಎಂದು ಝೋನ್ ಪ್ರಧಾನ ಕಾರ್ಯದರ್ಶಿ ಸಲೀಂ ಕನ್ಯಾಡಿ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

Related posts

ಬೆಳ್ತಂಗಡಿ ದಾರುಸ್ಸಲಾಂ ದುಅ್’ವಾ ಕಾಲೇಜಿಗೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಭೇಟಿ

Suddi Udaya

ಎಸ್.ಎಸ್.ಎಲ್.ಸಿ ಮರುಮೌಲ್ಯಮಾಪನ: ವಾಣಿ ಆಂ.ಮಾ. ಪ್ರೌಢ ಶಾಲೆಯ ವಿದ್ಯಾರ್ಥಿ ಕು. ಮಾನ್ಯ 620 ಅಂಕದೊಂದಿಗೆ ರಾಜ್ಯಮಟ್ಟದಲ್ಲಿ 6ನೇ ರ‍್ಯಾಂಕ್

Suddi Udaya

ತುಮಕೂರು ಬೆಳ್ತಂಗಡಿಯ ಮೂವರ ಕೊಲೆ ಪ್ರಕರಣ; 7 ದಿನದ ಬಳಿಕ ಮನೆ ತಲುಪಿದ ಮೂವರ ಮೃತದೇಹ

Suddi Udaya

ಮಾಜಿ ಅಧ್ಯಕ್ಷ ಹಾಲಿ ಗ್ರಾ.ಪಂ ಸದಸ್ಯ ಅಬ್ದುಲ್ ರಝಾಕ್ ಸತತ ಹೋರಾಟದಿಂದ ತೆಕ್ಕಾರು ಗ್ರಾಮಕ್ಕೆ ಉಪ ಆರೋಗ್ಯ ಕೇಂದ್ರ ಮಂಜೂರು ಕಟ್ಟಡ ನಿರ್ಮಿಸಲು ಅನುದಾನ ಮಂಜೂರುಗೊಳಿಸುವಂತೆ ಆರೋಗ್ಯ ಸಚಿವರಿಗೆ ಮತ್ತೊಂದು ಮನವಿ

Suddi Udaya

ಬೆಳ್ತಂಗಡಿ ಜಮ್ಮೀಯತುಲ್‌ ಫಲಾಹ್ ಘಟಕದ ವಾರ್ಷಿಕ ಮಹಾಸಭೆ

Suddi Udaya

ಕುತ್ಲೂರು : ಬಿಜೆಪಿಯಿಂದ ಮನೆ‌ ಮನೆ ಭೇಟಿ ಕಾರ್ಯಕ್ರಮ

Suddi Udaya
error: Content is protected !!