38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಹೊಸ ವಿದ್ಯುತ್ ಸಂಪರ್ಕಗಳಿಗೆ ಇನ್ನು ಬರಲಿದೆ..ಸ್ಮಾರ್ಟ್ ಮೀಟರ್: ಮೊಬೈಲ್ ಮೂಲಕ ಪ್ರೀ ಪೇಯ್ಡ್ ಪೋಸ್ಟ್ ಪೇಯ್ಡ್ ಸೌಲಭ್ಯ

ಬೆಳ್ತಂಗಡಿ: ಹೊಸ ವರ್ಷಕ್ಕೆ ಗ್ರಾಹಕರಿಗೆ ಮೆಸ್ಕಾಂ, ವಿದ್ಯುತ್ ಸಂಪರ್ಕದಲ್ಲಿ ಮಹತ್ವದ ಬದಲಾವಣೆಯನ್ನು ತರುತ್ತಿದೆ. ಜನವರಿ 1 ರಿಂದ ಮೆಸ್ಕಾಂ ಹೊಸ ಹಾಗೂ ತಾತ್ಕಾಲಿಕ ವಿದ್ಯುತ್ ಸಂಪರ್ಕಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯಗೊಳಿಸಿ ಮೆಸ್ಕಾಂ ಆದೇಶ ಹೊರಡಿಸಿದೆ.


ಈ ಹಿಂದೆ ಜುಲೈನಲ್ಲಿ ಬೆಸ್ಕಾಂ ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸಲಾಗಿದ್ದು, ಗ್ರಾಮಾಂತರ ಪ್ರದೇಶಕ್ಕೂ ಇದನ್ನು ವಿಸ್ತರಣೆ ಮಾಡುವಂತೆ ಬೆಸ್ಕಾಂ ಆದೇಶ ಹೊರಡಿಸಿತ್ತು. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಆದೇಶದಂತೆ ಮೆಸ್ಕಾಂ ಕೂಡ ಆದೇಶ ಹೊರಡಿಸಿದೆ.


2026ರ ಜ.1ರಿಂದ ಒದಗಿಸುವ ಹೊಸ ವಿದ್ಯುತ್ ಸಂಪರ್ಕಗಳಿಗೆ ಕಡ್ಡಾಯವಾಗಿ ಸ್ಮಾರ್ಟ್ ಮೀಟರ್ ಅಳವಡಿಸಲಿದೆ. ಆದರೆ ಇದರಲ್ಲಿ ಕೃಷಿ ಸಂಪರ್ಕಕ್ಕೆ ವಿನಾಯತಿ ನೀಡಲಾಗುತ್ತದೆ. ಈ ಸ್ಮಾರ್ಟ್ ಮೀಟರ್‌ಗಳನ್ನು ಗ್ರಾಹಕರು ಖರೀದಿಸಬೇಕಿದ್ದು, ವಿದ್ಯುತ್ ಸಂಪರ್ಕದ ಸಾಮರ್ಥ್ಯಕ್ಕೆ ಅನುಗುಣವಾಗಿ ಮೀಟರ್ ಒಂದಕ್ಕೆ 4,785 ರಿಂದ 9725 ರೂ. ತನಕ ದರ ಇರಲಿದೆ. ಈಗಾಗಲೇ ದಾವಣಗೆರೆ ಮೂಲದ ಏಜೆನ್ಸಿಗೆ ಸ್ಮಾರ್ಟ್ ಮೀಟರ್ ಪೂರೈಸುವ ಗುತ್ತಿಗೆ ನೀಡಲಾಗಿದೆ.


ಏನಿದು ಸ್ಮಾರ್ಟ್ ಮೀಟರ್..?
ಪ್ರಸ್ತುತ ಚಾಲ್ತಿಯಲ್ಲಿರುವ ವಿದ್ಯುತ್ ಮೀಟರ್‌ಗಳಿಗಿಂತ ಸ್ಮಾರ್ಟ್ ಮೀಟರ್‌ಗಳು ವಿಭಿನ್ನವಾಗಿರಲಿದೆ. ಜಿಪಿಆರ್‌ಎಸ್ ಆಧಾರಿತ ಸಂವಹನ, ಡೇಟಾ ಸಂಗ್ರಹಣೆಗೆ ಸರ್ವರ್ ಹಾಗೂ ಕ್ಲೌಡ್ ಸಂಪರ್ಕಗಳನ್ನು ಒಳಗೊಂಡಿದ್ದು ಮುಂಗಡ (ಅಡ್ವಾನ್ಸ್ಡ್) ಮೀಟರ್ ಇನ್ಫಾಸ್ಟ್ರಕ್ಚರ್ ತಂತ್ರಜ್ಞಾನ ಹೊಂದಿವೆ. ಇದು ವಿದ್ಯುತ್ ಬಳಕೆಯ ಮಾಹಿತಿಯನ್ನು ಪಡೆಯಲು ಗ್ರಾಹಕರು ಮತ್ತು ಮೆಸ್ಕಾಂಗೆ ನೇರವಾಗಿ ಸಂಪರ್ಕ ನೀಡುತ್ತದೆ.


ಈ ಮೀಟರ್‌ನಲ್ಲಿ ಮೊಬೈಲ್‌ಗಳಿಗೆ ಕರೆನ್ಸಿ ಹಾಕುವ ಹಾಗೆ, ಪ್ರಿಪೇಯ್ಡ್ ಹಾಗೂ ಪೋಸ್ಟ್ ಪೇಯ್ಡ್ ಸೌಲಭ್ಯವಿದ್ದು ಮೊಬೈಲ್ ಅಪ್ಲಿಕೇಶನ್ ಮೂಲಕ ನೈಜ್ಯ ಸಮಯದ ವಿದ್ಯುತ್ ಬಳಕೆ, ಪವರ್ ಫ್ಯಾಕ್ಟರ್ ಮಾಹಿತಿ ಹಾಗೂ ರಿಚಾರ್ಜ್ ಸೌಲಭ್ಯ ಪಡೆಯಬಹುದಾಗಿದೆ. ಮುಂಚಿತವಾಗಿ ಹಣ ಪಾವತಿಸಿ ತಮ್ಮ ಆಯ್ಕೆಯ ದಿನಗಳ ಅವಧಿಗೆ ಮಾತ್ರ ರಿಚಾರ್ಜ್ ಮಾಡಿಸಿಕೊಳ್ಳಲು ಅವಕಾಶವಿದೆ. ಒಂದು ವೇಳೆ ವಿದ್ಯುತ್ ಕಡಿತಗೊಂಡರೆ ಗ್ರಾಹಕರು ರೀಚಾರ್ಜ್ ಮಾಡಿದ ತಕ್ಷಣ ನೇರ ಸಂಪರ್ಕ ಪಡೆದುಕೊಳ್ಳಬಹುದು.


ಮೀಟರ್ ರೀಡರ್‌ಗಳ ಅಗತ್ಯವಿಲ್ಲ:
ವಿದ್ಯುತ್ ಸೋರಿಕೆ ತಡೆಗಟ್ಟುವ ಜತೆ, ನೈಜ್ಯ ಉಪಯೋಗಕ್ಕೆ ಮಾತ್ರ ಹಣ ಖರ್ಚಾಗುತ್ತದೆ. ಇದು ಗ್ರಾಹಕರ ಮತ್ತು ಮೆಸ್ಕಾಂನ ನಡುವಿನ ನೇರ ಸಂಪರ್ಕವಾಗಿದ್ದು ಇಲ್ಲಿ ಮೀಟರ್ ರೀಡರ್‌ಗಳ ಅಗತ್ಯತೆ ಕಂಡು ಬರುವುದಿಲ್ಲ. ಜತೆಗೆ ಬಳಕೆದಾರರು ಮಿತಿ ಮೀರಿ ವಿದ್ಯುತ್ ಖರ್ಚು ಮಾಡುವುದಕ್ಕೂ ಇದು ಕಡಿವಾಣ ಹಾಕಲಿದೆ. ಇದರಿಂದ ವಿದ್ಯುತ್ ಮಿತ ಬಳಕೆಯೊಂದಿಗೆ ವಿದ್ಯುತ್‌ನ ಉಳಿತಾಯವು ಆಗಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಇದರಿಂದ ಗೃಹಜ್ಯೋತಿಗೆ ಸಮಸ್ಯೆಯಾಗಲ್ಲ ಹಾಗೆ ಐಎ ಕೃಷಿ ಪಂಪ್ ಸೆಟ್‌ಗೂ ವಿನಾಯಿತಿ ನೀಡಲಾಗಿದೆ.

  • ಹಳೆಯ ಮಾದರಿಯ ಮೀಟರ್‌ಗಳಿಗಿಂತ ವಿಶಿಷ್ಟವಾಗಿರುವ ಸ್ಮಾರ್ಟ್ ಮೀಟರ್‌ಗಳು ಜಿಪಿಆರ್‌ಎಸ್/ಆರ್‌ಎಫ್ ಆಧಾರಿತ ಸಂವಹನ ಡೇಟಾ ಸಂಗ್ರಹಣೆಗೆ ಸರ್ವರ್ ಹಾಗೂ ಕ್ಲೌಡ್ ಸಂಪರ್ಕ ಹೊಂದಿರುತ್ತದೆ.
  • ಅಡ್ವಾನ್ಸ್ಡ್ ಮೀಟರಿಂಗ್ ಇನ್ಫಾಸ್ಟ್ರಕ್ಚರ್ (ಎಎಂಐ) ತಂತ್ರಜ್ಞಾನದ ಸ್ಮಾರ್ಟ್ ಮೀಟರ್‌ಗಳು ವಿದ್ಯುತ್ ಬಳಕೆ ಮಾಹಿತಿಯನ್ನು ಸಂಗ್ರಹಿಸುವ ಮೂಲಕ ಗ್ರಾಹಕರು ಹಾಗೂ ಬೆಸ್ಕಾಂ ನಡುವೆ ನೇರ ಸಂಪರ್ಕ ಕಲ್ಪಿಸಲಿದೆ.
  • ಮೊಬೈಲ್ ಅಪ್ಲಿಕೇಶನ್ ಮೂಲಕ ನೈಜ ಸಮಯದ ವಿದ್ಯುತ್ ಬಳಕೆ, ವೊಲ್ಟೇಜ್, ಪವರ್ ಫ್ಯಾಕ್ಟರ್ ಮಾಹಿತಿ ಹಾಗೂ ರೀಚಾರ್ಜ್ ಸೌಲಭ್ಯ ಪಡೆಯಬಹುದಾಗಿದೆ.
  • ಮುಂಚಿತವಾಗಿ ಹಣ ಪಾವತಿಸಿ ತಮ್ಮ ಆಯ್ಕೆಯ ದಿನಗಳ ಅವಧಿಗೆ ರಿಜಾರ್ಜ್ ಮಾಡಿಕೊಳ್ಳಬಹುದು.
  • ಒಂದು ವೇಳೆ ವಿದ್ಯುತ್ ಕಡಿತಗೊಂಡರೆ ಗ್ರಾಹಕರು ಬಿಲ್ ಪಾವತಿಸಿದ ತಕ್ಷಣ ವಿದ್ಯುತ್ ಸಂಪರ್ಕ ಪಡೆದುಕೊಳ್ಳಬಹುದಾಗಿದೆ.

✍️ಮನೀಷ್ ವಿ.ಅಂಚನ್ ಪಾಲೇದು

Related posts

ಅಳದಂಗಡಿ: ಸುರೇಶ್ ಪೂಜಾರಿ ಅಭಿಮಾನಿ ಬಳಗದಿಂದ ಸಮಾಜಮುಖಿ ಕಾರ್ಯ: ಕರಂಬಾರು ಗ್ರಾಮದ ಲಲಿತಾ ಪೂಜಾರಿಯವರಿಗೆ ಆರೋಗ್ಯ ನಿಧಿ ಹಸ್ತಾಂತರ

Suddi Udaya

ಮಲವಂತಿಗೆ: ದಿಡುಪೆ ಶ್ರೀ ವಿದ್ಯಾ ಗಣಪತಿ ಪೂಜ್ಯೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬೆಳ್ತಂಗಡಿ ರಾಜಕೇಸರಿ ಸಂಘಟನೆ ಸಂಸ್ಥಾಪಕ ದೀಪಕ್ ಜಿ ರವರ ಹುಟ್ಟುಹಬ್ಬದ ಪ್ರಯುಕ್ತ ಸೇವಾ ಕಾರ್ಯ

Suddi Udaya

ದಿಡುಪೆ- ಕಜಕೆ ಕೆಎಸ್ಸಾರ್ಟಿಸಿ ಬಸ್ ಸಂಚಾರಕ್ಕೆ ಚಾಲನೆ: ಬಸ್ ನ್ನು ಸ್ವಾಗತಿಸಿದ, ಮಲವಂತಿಗೆ, ಕಜಕೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು

Suddi Udaya

ಉಜಿರೆ ಎಸ್.ಡಿ.ಎಂ. ಮಹಿಳಾ ಐ.ಟಿ.ಐ. ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಸಮಾರಂಭ ಹಾಗೂ ಆಟಿದ ಕೂಟ

Suddi Udaya

ಕರಾಟೆ ಚಾಂಪಿಯನ್‌ಶಿಪ್: ಶ್ರೇಯಸ್ ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನ

Suddi Udaya
error: Content is protected !!