September 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಧೈರ್ಯ ಸಮಾಹಿತ ನವೀನ್ UIPM ವರ್ಲ್ಡ್ ಚಾಂಪಿಯನ್‌ಷಿಪ್‌ ನಲ್ಲಿ ದ್ವಿತೀಯ ಸ್ಥಾನ

ಬೆಳ್ತಂಗಡಿ: ನಡ ಗ್ರಾಮದ ಮಂಚಕಲ್ ಕಿರಣ್ ನಿಲಯದ ನಿವಾಸಿ, ನವೀನ್ ಸಂಜೀವ ಅವರ ಪುತ್ರ ಹಾಗೂ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಡಿ.ಆರ್.ಸಂಜೀವ ಗೌಡ ಡೊಡಡ್ಕ ಶಿರಾಡಿ ಅವರ ಮೊಮ್ಮಗ ಧೈರ್ಯ ಸಮಾಹಿತ ನವೀನ್ ಅವರು ದಕ್ಷಿಣ ಆಫ್ರಿಕಾದ ಮೊಸೆಲ್ ಬೇಯಲ್ಲಿ ನಡೆಯುವ UIPM ವರ್ಲ್ಡ್ ಚಾಂಪಿಯನ್‌ಷಿಪ್‌ನಲ್ಲಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ಭಾರತದ ಕೀರ್ತಿ ಬೆಳಗಿದ್ದಾರೆ.

ಕೇಂದ್ರ ವಿದ್ಯಾಲಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿರುವ ಇವರು ಡಿ.6 ರಿಂದ ಡಿ.16 ರವರೆಗೆ ದ.ಆಫ್ರಿಕಾದ ಮೋಸೆಲ್ ಬೇಯ ಸಂತೊಸ್ ಬೀಚ್‌ನಲ್ಲಿ ವಿಶ್ವದ 32 ರಾಷ್ಟ್ರಗಳ 1800 ಕ್ಕೂ ಹೆಚ್ಚು ಯುವ ಕ್ರೀಡಾಪಟುಗಳ ಜೊತೆ ಸ್ಪರ್ಧಿಸುವಲ್ಲಿ, ಕರ್ನಾಟಕದಿಂದ ಅರ್ಹತೆ ಪಡೆದ ಇಬ್ಬರಲ್ಲಿ ಧೈರ್ಯ ಒಬ್ಬನಾಗಿ ಭಾರತವನ್ನು ಪ್ರತಿನಿಧಿಸಿದ್ದರು. ಅವನು ಬಯಾಥ್ಲೆ, ಟ್ರಯಾಥ್ಲೆ ಮತ್ತು ಲೇಸರ್ ರನ್ ವಿಭಾಗಗಳಲ್ಲಿ ಸ್ಪರ್ಧಿಸಿದರು. ಇವು ಆಧುನಿಕ ಪೆಂಟಾಥ್ಲಾನ್‌ನ ಅತ್ಯಂತ ದೊಡ್ಡ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಒಂದಾಗಿದೆ. ಇದರಲ್ಲಿ ಬೆಳ್ಳಿ ಪದಕ ಪಡೆದು ಸಾಧನೆ ತೋರಿದ್ದಾರೆ.

Related posts

ಅಳದಂಗಡಿ: ಕೊಡಂಗೆ ದೈಲಬೈಲುವಿನಲ್ಲಿ ತೋಡು ಮಾಯ, ಕೃತಕ ನೆರೆ, ಕೃಷಿ ಹಾನಿ: ಸಮರ್ಪಕವಾದ ತೋಡಿನ ಕಾಮಗಾರಿ ಆಗದ ಹೊರತು ಈ ಸಮಸ್ಯೆಗೆ ಪರಿಹಾರ ಸಿಗದು

Suddi Udaya

ಕೊಯ್ಯೂರು ಗ್ರಾಮ ಪಟ್ಟಣ ಪಂಚಾಯತ್ ಸೇರ್ಪಡೆ ಆದೇಶ ರದ್ದು ಪಡಿಸುವಂತೆ ಮನವಿ

Suddi Udaya

ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಕೊಯ್ಯೂರು ಗ್ರಾಮ ಸಮಿತಿ ಮಹಾಸಭೆ ಮತ್ತು ವಾರ್ಷಿಕ ಸಮಾವೇಶ

Suddi Udaya

ಭಗವದ್ಗೀತೆಯ ಕಂಠಪಾಠ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯನ್ನು ಪಡೆದ ಕುಮಾರಿ ಅದ್ವಿತಿ ರಾವ್ ರವರಿಗೆ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದ ವತಿಯಿಂದ ಸನ್ಮಾನ

Suddi Udaya

ಬಾರ್ಯ: ಆನೆಪಲ್ಲ ನಿವಾಸಿ ಇಲ್ಯಾಸ್ ನಿಧನ

Suddi Udaya

ವೇಣೂರು ಪರಿಸರದಲ್ಲಿ ಚಿರತೆ ಪ್ರತ್ಯಕ್ಷ: ವೇಣೂರು ಅರಣ್ಯ ಇಲಾಖೆಯಿಂದ ಬೋನು ಅಳವಡಿಕೆ

Suddi Udaya
error: Content is protected !!