27 C
ಪುತ್ತೂರು, ಬೆಳ್ತಂಗಡಿ
June 21, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಡಿ.13-14: ಬಳಂಜ ಶಾಲೆಗೆ ಅಮೃತ ಮಹೋತ್ಸವ ಸಂಭ್ರಮ

ಬಳಂಜ: ಬಳಂಜ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ, ಅಮೃತ ಮಹೋತ್ಸವ ಸಮಿತಿ, ಹಳೆ ವಿದ್ಯಾರ್ಥಿ ಸಂಘ, ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಇವರ ಸಹಯೋಗದಲ್ಲಿ ಬಳಂಜ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಅಮೃತ ಮಹೋತ್ಸವ ಡಿ.13 ಮತ್ತು 14 ರಂದು ಶಾರದಾ ಕಲಾ ಮಂಟಪದ ಕೀರ್ತಿಶೇಷ ಪಟೇಲ್ ಕಿನ್ನಿ ಯಾನೆ ಕೋಟಿ ಪಡಿವಾಳ ಸಭಾ ಮಂದಿರದಲ್ಲಿ ನಡೆಯಲಿದೆ.


ವಿಧಾನಸಭಾ ಅಧ್ಯಕ್ಷ ಯುಟಿ ಖಾದರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯ ಸಚಿವ ದಿನೇಶ್ ಗುಂಡೂರಾವ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಖಾತೆಯ ಸಚಿವ ಮಧು ಬಂಗಾರಪ್ಪ ಭಾಗವಹಿಸಲಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ ವೀರೇಂದ್ರ ಹೆಗ್ಗಡೆಯವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕ ಹರೀಶ್ ಪೂಂಜ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಂಸದ ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯರುಗಳಾದ ಎಸ್.ಯಲ್. ಭೋಜೇಗೌಡ, ಐವನ್ ಡಿ’ಸೋಜ, ಪ್ರತಾಪ್‌ಸಿಂಹ ನಾಯಕ್, ಮಂಜುನಾಥ್ ಭಂಡಾರಿ, ಧನಂಜಯ ಸರ್ಜಿ, ಕಿಶೋರ್ ಕುಮಾರ್, ಮೆಸ್ಕಾಂ ಅಧ್ಯಕ್ಷ ಹರಿಶ್ ಕುಮಾರ್, ಬಳಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭಾ ಕುಲಾಲ್, ವಿಶೇಷ ಆಹ್ವಾನಿತರಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಮೋಹನ್ ಆಳ್ವ, ಉದ್ಯಮಿ ಶಶಿಧರ್ ಶೆಟ್ಟಿ, ಗುರುವಾಯನಕೆರೆ ಎಕ್ಸೆಲ್ ವಿದ್ಯಾಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಗೌರವ ಉಪಸ್ಥಿತರಾಗಿ ದಕ್ಷಿಣ ಕನ್ನಡ ವಿದ್ಯಾಂಗ ಉಪ ನಿರ್ದೇಶಕ ಜಿ.ಯಸ್. ಶಶಿಧರ್, ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ, ಎಸ್.ಡಿ.ಎಮ್.ಸಿ ಕಾರ್ಯಾಧ್ಯಕ್ಷಕೆ. ವಸಂತ್ ಸಾಲಿಯಾನ್ ಮತ್ತು ಎಸ್‌ಡಿಎಂಸಿ ಅಧ್ಯಕ್ಷ ರತ್ನಾಕರ ಪೂಜಾರಿ ಭಾಗವಹಿಸಲಿದ್ದಾರೆ.

ಡಿ.13 ರಂದು ಮಧ್ಯಾಹ್ನದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಬಳಂಜ ಗ್ರಾಮ ಪಂಚಾಯತ್‌ಗೊಳಪಟ್ಟ ಅಂಗನವಾಡಿ ಮಕ್ಕಳಿಂದ ನೃತ್ಯ ಪ್ರದರ್ಶನ, ಬಳಂಜ ಶಾಲಾ ಎಲ್.ಕೆ.ಜಿ., ಯು.ಕೆ.ಜಿ., ಉನ್ನತೀಕರಿಸಿದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿಂದ ಹಾಡು-ನೃತ್ಯ ರೂಪಕ ಕೂಡಿದ ವೈವಿಧ್ಯಮಯ ಸಾಂಸ್ಕೃತಿಕ ಲೋಕದ ಅನಾವರಣ ಮಕ್ಕಳ ಸಂಭ್ರಮ ನಡೆಯಲಿದ್ದು ಸಂಜೆ ೬ರಿಂದ ಹೆಸರಾಂತ ಕಲಾವಿದರಾದ ದೇವದಾಸ್ ಕಾಪಿಕಾಡ್ ನೇತೃತ್ವದಲ್ಲಿ ನವೀನ ಡಿ ಪಡೀಲ್, ಭೋಜರಾಜ್ ವಾಮಂಜೂರ್, ಸಾಯಿಕೃಷ್ಣ ಅವರ ಅಪೂರ್ವ ಸಂಗಮದಲ್ಲಿ ಕಲಾ ರಸಿಕರ ಬಹು ಬೇಡಿಕೆಯ ನಾಟಕ “ಪುದರ್ ದೀತಿಜಿ” ಪ್ರದರ್ಶನಗೊಳ್ಳಲಿದೆ.


ಡಿ.14 ರಂದು ತೆಲಿಕೆದ ಪರ್ಬ-ಸಾಂಸ್ಕೃತಿಕ ವೈಭವ:
ಡಿ.14ರಂದು ಮಧ್ಯಾಹ್ನ 2.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಜ್ಯೋತಿ ಮಹಿಳಾ ಮಂಡಳಿ, ಶ್ರೀ ಉಮಾಮಹೇಶ್ವರ ಯುವಕ ಮಂಡಲ ಬಳಂಜ, ಹಳೆ ವಿದ್ಯಾರ್ಥಿಗಳು ಹಾಗೂ ಶಾಲಾ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಕಾಂತಾರ ಖ್ಯಾತಿಯ ದೀಪಕ್ ರೈ ಪಾಣಾಜೆ, ಪ್ರಕಾಶ್ ತೂಮಿನಾಡು ಹಾಗೂ ತಂಡದವರಿAದ “ತೆಲಿಕೆದ ಪರ್ಬ” ನಡೆಯಲಿದೆ. ಪ್ರಖ್ಯಾತ ಕಲಾವಿದೆ ಶ್ವೇತಾ ಅರೆಹೊಳೆ ನೇತೃತ್ವದ ಅರೆಹೊಳೆ ಪ್ರತಿಷ್ಠಾನ ನಂದಗೋಕುಲ ಮಂಗಳೂರು ತಂಡದವರಿAದ “ಸಾಂಸ್ಕೃತಿಕ ವೈಭವ’ ನಡೆಯಲಿದೆ.

ರವಿ ಹೆಗಡೆಯವರಿಂದ ಧ್ವಜಾರೋಹಣ:
ಡಿ. 14 ರಂದು ಬೆಳಿಗ್ಗೆ9 ಗಂಟೆಗೆ ಧ್ವಜಾರೋಹಣ ನಡೆಯಲಿದೆ. ಕನ್ನಡ ಪ್ರಭ ಮತ್ತು ಸುವರ್ಣ ನ್ಯೂಸ್‌ನ ಪ್ರಧಾನ ಸಂಪಾದಕ ರವಿ ಹೆಗಡೆ ಧ್ವಜಾರೋಹಣ ಮಾಡಲಿದ್ದಾರೆ. ಅಳದಂಗಡಿ ಅರಮನೆ ಅರಸರಾದ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ಪಿ.ಕೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಸಂಸದ ಪ್ರಮೋದ್ ಮಧ್ವರಾಜ್, ಖ್ಯಾತ ಸಾಹಿತಿ, ವಾಗ್ನಿ ಡಾ. ನಾ. ಸೋಮೇಶ್ವರ, ಚಲನಚಿತ್ರ ಮತ್ತು ರಂಗಭೂಮಿ ಕಲಾವಿದ ಸುಚೇಂದ್ರ ಪ್ರಸಾದ್, ಪತ್ರಕರ್ತ ಜೋಗಿ, ಉಜಿರೆ ಎಸ್‌ಡಿಯಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಅಳದಂಗಡಿಯ ಶಿವಪ್ರಸಾದ್ ಅಜಿಲ, ಉದ್ಯಮಿ ಮೋಹನ್ ಕುಮಾರ್, ಧಾರ್ಮಿಕ ಮುಖಂಡ ಕಿರಣ್‌ಚಂದ್ರ ಪುಷ್ಪಗಿರಿ, ಉದ್ಯಮಿ ಬಾಲಕೃಷ್ಣ ಭಟ್, ಕ್ಷೇತ್ರ ಸಮನ್ವಯಾಧಿಕಾರಿ ಟಿ.ಬಿ. ಬಸವಲಿಂಗಪ್ಪ, ಹೆಚ್. ಧರ್ಣಪ್ಪ ಪೂಜಾರಿ, ಬಳಂಜ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಶಿಕಲಾ, ಹಳೆ ವಿದ್ಯಾರ್ಥಿ ಸಂಘದ ಸ್ಥಾಪಕ ಅಧ್ಯಕ್ಷ ಕೆ.ಎ ಉಸ್ಮಾನ್ ಉಪಸ್ಥಿತಿ ಇರಲಿದ್ದಾರೆ.

Related posts

ಎಲ್ ಸಿ ಆರ್ ಇಂಡಿಯನ್ ವಿದ್ಯಾ ಸಂಸ್ಥೆಯ ಪ್ರೌಢ ವಿಭಾಗದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಗಾರ

Suddi Udaya

ಶ್ರೀ ಕ್ಷೇತ್ರ ಮಂಗಳಗಿರಿಯ ಆಡಳಿತ ಮೋಕ್ತೇಸರಾದ ರಾಜೀವ ಇವರ ವತಿಯಿಂದ ಮುಂಡೂರು ಶಾಲಾ ಮಕ್ಕಳಿಗೆ ಬರೆಯುವ ಪುಸ್ತಕ ವಿತರಣೆ

Suddi Udaya

ನವೀನ್ ನೆರಿಯ ವಿರುದ್ದ ದಾಖಲಾಗಿದ್ದ ದ್ವೇಷ ಭಾಷಣ ಪ್ರಕರಣ‌ ವಜಾಗೊಳಿಸಿದ ಹೈಕೋರ್ಟ್

Suddi Udaya

ಅಕ್ರಮ ಮರಳು ಸಾಗಾಟ: ವಾಹನ ಚಾಲಕನಿಗೆ ನ್ಯಾಯಾಂಗ ಬಂಧನ, ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ವಾಣಿ ಕಾಲೇಜಿನ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ

Suddi Udaya

ಜ.14: ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನಕ್ಕೆ ಸಮರ್ಪಣೆಯಾಗಲಿದೆ 80 ಕೆಜಿ ತೂಕದ ಘಂಟೆ

Suddi Udaya
error: Content is protected !!