March 7, 2026
ಅಪರಾಧ ಸುದ್ದಿ

ಪತ್ರಕರ್ತನಿಗೆ ಜೀವ ಬೆದರಿಕೆ: ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘ ಖಂಡನೆ,-ಕ್ರಮಕ್ಕೆ ಆಗ್ರಹ

ಬೆಳ್ತಂಗಡಿ: ವರದಿ ಮಾಡಿದ್ದನ್ನೆ ನೆಪವಾಗಿರಿಸಿಕೊಂಡು ಪತ್ರಕರ್ತರೊಬ್ಬರಿಗೆ ಜೀವ ಬೆದರಿಕೆ ಹಾಕಿದ ಘಟನೆ ಕಳಿಯ ಗ್ರಾಮದ ನಾಳ ಎಂಬಲ್ಲಿ ಡಿ 03 ನಡೆದಿದೆ.

ಮಡಂತ್ಯಾರು ವಲಯದ ಉದಯವಾಣಿ ವರದಿಗಾರ ಕೆ.ಎನ್.ಗೌಡ ಎಂಬವರು ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಡಿಸೆಂಬರ್ 3 ರಂದು ವ್ಯವಸ್ಥಾಪನಾ ಸಮಿತಿ ಹಾಗೂ ಗ್ರಾಮಸ್ಥರ ಸಭೆ ನಡೆದಿದ್ದು, ಈ ವೇಳೆ ವ್ಯವಸ್ಥಾಪನಾ ಸಮಿತಿಯ ಕಾರ್ಯ ವೈಖರಿ ಬಗ್ಗೆ ಕೆಲವರು ಅಸಾಮಾಧಾನ ಹೊರಹಾಕಿದ್ದರು.‌ಈ ಬಗ್ಗೆ ವರದಿ ಮಾಡಿದ ಹಿನ್ನೆಲೆಯಲ್ಲಿ ಹರೀಶ್ ಎಂಬವರು ಪೋನ್ ಮೂಲಕ ಕಾಲರ್ ಪಟ್ಟಿ ಹಿಡಿದು ಎಳೆಯುತ್ತೆನೆ ಎಂದಿದ್ದಲ್ಲದೇ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಬೆಳ್ತಂಗಡಿ ಪತ್ರಕರ್ತರ ಸಂಘ ಖಂಡನೆ,ಕ್ರಮಕ್ಕೆ ಆಗ್ರಹ:

ಪತ್ರಕರ್ತನಿಗೆ ಜೀವ ಬೆದರಿಕೆ ಒಡ್ಡಿರುವ ಬಗ್ಗೆ ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಖಂಡನೆ ವ್ಯಕ್ತಪಡಿಸಿದೆಯಲ್ಲದೆ, ಈಗಾಗಲೇ ಬೆಳ್ತಂಗಡಿ ಠಾಣೆಗೆ ದೂರು ನೀಡಲಾಗಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು, ಎಂದು ಆಗ್ರಹಿಸಿದೆ.

Related posts

ನಿವೃತ್ತ ಯೋಧ ದಿನೇಶ್ ಮೂಲ್ಯಹೃದಯಾಘಾತದಿಂದ ನಿಧನ

Suddi Udaya

ಕುಕ್ಕೇಡಿ ಸುಡುಮದ್ದು ತಯಾರಿಕ ಘಟಕದಲ್ಲಿ ಭೀಕರ ಸ್ಪೋಟ ಪ್ರಕರಣ: ಮಾಲಕ ಸೈಯ್ಯದ್ ಬಶೀರ್ ಪೊಲೀಸ್ ವಶ

Suddi Udaya

ಧರ್ಮಸ್ಥಳ ಮುಂಡ್ರುಪಾಡಿಯಲ್ಲಿ ಬೈಕಿಗೆ ಲಾರಿ ಡಿಕ್ಕಿ : ಬೈಕ್ ಸವಾರ ಬೆಳ್ತಂಗಡಿ ಖಾಸಗಿ ಸವೆ೯ಯರ್ ಸಹಾಯಕ ಗುರುವಾಯನಕೆರೆ ಶಕ್ತಿನಗರ ನಿವಾಸಿ ಪ್ರಸಾದ್ ಶೆಟ್ಟಿ ಮೃತ್ಯು: ಸಹ ಸವಾರ ಖಾಸಗಿ ಸವೆ೯ಯರ್ ವಿಶ್ವನಾಥ್ ರಾವ್ ಗೆ ಗಾಯ

Suddi Udaya

ಬೆಳ್ತಂಗಡಿ: ವಾಣಿ ಕಾಲೇಜು ಎದುರು ಸ್ಕೂಟಿ ಮತ್ತು ಗೂಡ್ಸ್ ಲಾರಿ ಡಿಕ್ಕಿ

Suddi Udaya

ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತ ಪ್ರಕರಣ ಎಸ್.ಐ.ಟಿ ಕಚೇರಿ; ಸಹಾಯವಾಣಿ ಆರಂಭ

Suddi Udaya

ಹೊಸಂಗಡಿ ತೊರ್ಪೆ ಡ್ಯಾಂ ಬಳಿ ನದಿಯಲ್ಲಿ ಕಾರ್ಕಳ ಮಿಯಾರು ನಿವಾಸಿ ಯತೀಶ್ ಪೂಜಾರಿ ಶವ ಪತ್ತೆ : ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಕುಟುಂಬಸ್ಥರಿಂದ ಪೊಲೀಸರಿಗೆ ದೂರು

Suddi Udaya
error: Content is protected !!