September 6, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿವರದಿ

ಬೆಳ್ತಂಗಡಿ: ಕಳೆದು ಹೋದಂತಹ ಚಿನ್ನದ ಬ್ರೇಸ್ಲೆಟ್ ನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಮಂಜೊಟ್ಟಿಯ ಶ್ರೀಧರ್ ಶೆಟ್ಟಿ

ಬೆಳ್ತಂಗಡಿ: ಕಳೆದು ಹೋದಂತಹ ಸುಮಾರು ರೂ.1.80ಲಕ್ಷ ಮೌಲ್ಯದ ಚಿನ್ನದ ಬ್ರೇಸ್ಲೆಟ್ ಅನ್ನು ನಡ ಗ್ರಾಮದ ಮಂಜೊಟ್ಟಿ ಚಿಕನ್ ಸೆಂಟರ್ ಮಾಲಕ ಶ್ರೀಧರ್ ಶೆಟ್ಟಿ ಅವರು ಸಂಬಂಧಪಟ್ಟವರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಘಟನೆ ವಿವರ: ಬೆಳ್ತಂಗಡಿ ಪೇಟೆಗೆ ಹೋದ ಸಂದರ್ಭದಲ್ಲಿ ನಿಲ್ಲಿಸಿದ ಸ್ಥಳದಲ್ಲಿ ಯಾವುದೋ ಹೊಳೆಯುತ್ತಿದ್ದ ಆಭರಣವನ್ನು ಕಂಡು ಮನೆಗೆ ತಂದು ಪರಿಶೀಲಿಸಲು ಹೇಳಿದಾಗ ಇದು ಅಸಲಿ ಚಿನ್ನದ ಆಭರಣವೆಂದು ಗೊತ್ತಾಗಿ ತನ್ನ ಮನೆಯವರಲ್ಲಿ ಈ ವಿಚಾರವನ್ನು ಫೋಟೋ ಸಮೇತ ವಾಟ್ಸಪ್ ಗ್ರೂಪ್ ನಲ್ಲಿ ಹಾಕಲು ಹೇಳಿದರು. ಎರಡು ದಿನಗಳಿಂದ ಸರಿಸುಮಾರು 85ಕ್ಕೂ ಹೆಚ್ಚು ಜನರು ಫೋನ್ ಕರೆ ಮಾಡಿ ಇದರ ಬಗ್ಗೆ ವಿಚಾರಣೆ ಮಾಡಿದರೂ, ನಿಜವಾಗಿಯೂ ಯಾರು ಕಳೆದುಕೊಂಡಿದ್ದಾರೆ ಅವರಿಗೆ ನ್ಯಾಯಯುತವಾಗಿ ಸಿಗಬೇಕು ಎಂಬ ದೃಷ್ಟಿಯಿಂದ ಪೊಲೀಸ್ ಇಲಾಖೆಯ ಸಹಕಾರವನ್ನು ಪಡೆದು ಕಳೆದುಕೊಂಡಂತಹ ಪ್ರಕಾಶ್ ಬಳಂಜ ಇವರಿಗೆ ಹಸ್ತಾಂತರಿಸಲಾಯಿತು.

Related posts

ಗುರುವಾಯನಕೆರೆ: ಶ್ರೀ ಶಿವಂ ಟೆಕ್ಸ್‌ಟೈಲ್ಸ್ ಮತ್ತು ರೆಡಿಮೇಡ್ಸ್‌ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಸ್ಪೆಷಲ್ ಡಿಸ್ಕೌಂಟ್ ಆಫರ್

Suddi Udaya

ಕಿರು ನಾಟಕ ಸ್ಪರ್ಧೆ: ಬೆಳ್ತಂಗಡಿ ಸ.ಪ.ಪೂ. ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ

Suddi Udaya

ಚಾರ್ಮಾಡಿ ಘಾಟಿಯಲ್ಲಿ ಭಾರಿ ಮಳೆ : ಮರ ಸಹಿತ ಗುಡ್ಡ ಕುಸಿತ ತೆರವು

Suddi Udaya

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಬೆಳ್ತಂಗಡಿ ವಲಯದ ವಾರ್ಷಿಕ ಮಹಾಸಭೆ

Suddi Udaya

ಮಚ್ಚಿನ: ಕಾಂಗ್ರೆಸ್ ಹಿರಿಯ ಕಾರ್ಯಕರ್ತ ಸೇಸು ಮೂಲ್ಯ ನಿಧನ

Suddi Udaya

ನಾವೂರು: ಮುರ ಮದರಸದಲ್ಲಿ ಮಾದಕ ದ್ರವ್ಯ ವಿರುದ್ಧದ ಅಭಿಯಾನ ಹಾಗೂ ಸ್ನೇಹ ಸಹವಾಸ ಶಿಬಿರ

Suddi Udaya
error: Content is protected !!