37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅರಸಿನಮಕ್ಕಿ ಸರಕಾರಿ ಪ್ರೌಢಶಾಲೆಗೆ ಹಳೆಯ ವಿದ್ಯಾರ್ಥಿಯ ಸಾಫ್ಟ್ ವೇರ್ ತಂಡದಿಂದ ಶಾಲೆಗೆ ಬಣ್ಣ

ಅರಸಿನಮಕ್ಕಿ : ಇಲ್ಲಿಯ ಸರಕಾರಿ ಪ್ರೌಢಶಾಲೆಯಲ್ಲಿ ಹಳೆಯ ಶಾಲಾ ಕಟ್ಟಡದ ದುರಸ್ತಿ ಕಾರ್ಯವು ಹಳೆಯ ವಿದ್ಯಾರ್ಥಿಗಳ ನೆರವಿನಿಂದ ಡಿ.13ರಂದು ನಡೆಯಿತು.

ಹಳೆಯ, ಹಿರಿಯ ವಿದ್ಯಾರ್ಥಿಯಾದ ಶಿಶಿಲದ ಮುಕುಂದ ದಾಮ್ಲೆ ಯವರು ತಮ್ಮ ಸಾಫ್ರಾನ್ ಟೆಕ್ನಾಲಜಿ ಸಾಫ್ಟ್ ವೇರ್ ಸಂಸ್ಥೆಯ ವೃತ್ತಿ ಸ್ನೇಹಿತರ ತಂಡದೊಂದಿಗೆ ಈ ಕಟ್ಟಡದ ಶಾಲಾ ಕಿಟಕಿ ಬಾಗಿಲುಗಳಿಗೆ ಬಣ್ಣವನ್ನು ಬಳಿಯುವ ಮೂಲಕ ಹೊಸ ಮೆರುಗನ್ನು ನೀಡಿದರು. ಸರಕಾರಿ ಶಾಲೆಗಳ ಉಳಿವಿನ ಮಹದಾಸೆಯನ್ನು ಹೊತ್ತ ಈ ಟೆಕ್ಕಿಗಳ ತಂಡವು ಬೆಂಗಳೂರಿನಿಂದ ಅರಸಿನಮಕ್ಕಿಗೆ ಬಂದು ಶ್ರಮದಾನ ಮಾಡಿರುವುದು ಶ್ಲಾಘನೀಯ ಹಾಗೂ ಮಾದರಿಯಾಗಿದೆ.ಮುಕುಂದ ದಾಮ್ಲೆರವರು ಪ್ರಸ್ತುತ ದಿನಗಳಲ್ಲಿ ಮಕ್ಕಳ ಕಲಿಕೆಗೆ ಅವಶ್ಯಕವಾದ ನಾಲ್ಕು ಕಂಪ್ಯೂಟರ್ ಡೆಸ್ಕ್ ಟಾಪ್ ಗಳನ್ನು ನೀಡಿ ಕಲಿಕೆಯ ವಾತಾವರಣ ಇನ್ನೂ ಸುಂದರಗೊಳಿಸುವಲ್ಲಿ ಸಹಕರಿಸಿರುತ್ತಾರೆ.

ಖ್ಯಾತ ಅಂತರಾಷ್ಟ್ರೀಯ ಕಲಾವಿದ, ಪರಿಸರ ಪ್ರೇಮಿ ಮಂಗಳೂರಿನ ಸಹ್ಯಾದ್ರಿ ಸಂಚಯದ ಸಂಚಾಲಕರಾದ ದಿನೇಶ್ ಹೊಳ್ಳರವರು ಪಶ್ಚಿಮ ಘಟ್ಟಗಳ ಉಳಿವು ಕುರಿತು ಜಾಗೃತಿ ಮೂಡಿಸುವ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು. ಪಶ್ಚಿಮ ಘಟ್ಟಗಳ ಉಳಿವಿನ ಅವಶ್ಯಕತೆ ವಿದ್ಯಾರ್ಥಿಗಳ ಮನಮುಟ್ಟುವಲ್ಲಿ ಈ ಕಾರ್ಯಕ್ರಮ ಮಹತ್ತರ ಪರಿಣಾಮಕಾರಿಯಾಗಿತ್ತು.
ನಂತರ ವಿದ್ಯಾರ್ಥಿಗಳ ಬರವಣಿಗೆಯನ್ನು ಅಂದಗೊಳಿಸುವ ಅಕ್ಷರ ವಿನ್ಯಾಸ ಕಾರ್ಯಾಗಾರವನ್ನು ದಿನೇಶ್ ಹೊಳ್ಳರವರು ನಡೆಸಿಕೊಟ್ಟರು ಇದರಿಂದಾಗಿ ಉತ್ತಮ ಕೈಬರಹ ಹಾಗೂ ಕಲಾಕೃತಿಗಳನ್ನು ಸುಲಭವಾಗಿ ಕಲಿಯುವ ನೂತನ ವಿಧಾನ ವಿದ್ಯಾರ್ಥಿಗಳು ಕಲಿಯುವಂತಾಯಿತು.
ಇದು ವಿದ್ಯಾರ್ಥಿಗಳ ಮೌಲ್ಯಯುತ ಕಲಿಕೆಗೆ ಅಗತ್ಯವಾದ ಕಾರ್ಯಕ್ರಮವಾಗಿತ್ತು.

ಹಿರಿಯ ವಿದ್ಯಾರ್ಥಿ ಸಮಿತಿಯ ಅಧ್ಯಕ್ಷ ವಾಮನ ತಾಮನ್ಕರ್, ಶ್ರೀರಂಗ ದಾಮ್ಲೆ ಅವಿನಾಶ್ ಭಿಡೆ ಹಾಗೂ ಶಾಲಾ ಮುಖ್ಯ ಶಿಕ್ಷಕರಾದ ಮಂಜುಳಾರವರು ಮೀನಾಕ್ಷಿ, ಶ್ರೀಚೇತನಾ ಬಿ. ಎಮ್, ಚೇತನಾ ಕುಮಾರಿ, ದಿವ್ಯ , ಸುಧೀಂದ್ರ ಉಪಸ್ಥಿತರಿದ್ದರು.

Related posts

ಗುರುಪೂರ್ಣಿಮೆ ಅಂಗವಾಗಿ ಪಾರೆಂಕಿ ವಿದ್ಯಾಸರಸ್ವತಿ ಭಜನಾ ಮಂಡಳಿಯ ತರಬೇತುದಾರ ಸತೀಶ್ ಪೂಂಜಾರವರಿಗೆ ಗುರು ವಂದನೆ

Suddi Udaya

ಮಚ್ಚಿನದಲ್ಲಿ ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ

Suddi Udaya

ಮುಖ್ಯಮಂತ್ರಿಗಳ ಮೇಲೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆ ಖಂಡಿಸಿ: ಬೆಳ್ತಂಗಡಿ ಕಾಂಗ್ರೆಸ್‌ ಪಕ್ಷದ ವತಿಯಿಂದ ಮೆರವಣಿಗೆ- ರಾಷ್ಟ್ರಪತಿಗೆ ಮನವಿ ಸಲ್ಲಿಕೆ

Suddi Udaya

ಉಜಿರೆ ಎಸ್.ಡಿ.ಎಮ್ ಸಿ.ಬಿ.ಎಸ್.ಇ ಶಾಲೆ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಸ್ಪರ್ಧೆಯಲ್ಲಿ ಬಹುಮಾನ

Suddi Udaya

ಬೆಳ್ತಂಗಡಿ ಎಸ್ ಡಿ ಎಂ ಆಂ.ಮಾ. ಶಾಲೆಯಲ್ಲಿ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

Suddi Udaya

ಕರ್ನಾಟಕ ರಾಜ್ಯ ಗಸ್ತು ಅರಣ್ಯ ಪಾಲಕರ ಮತ್ತು ಅರಣ್ಯ ವೀಕ್ಷಕರ ಸಂಘ ಮಂಗಳೂರು ವಿಭಾಗದ ವತಿಯಿಂದ ಪರಿಸರ ಪ್ರೇಮಿ ಸಚಿನ್ ಭಿಡೆ ಮುಂಡಾಜೆ ರವರಿಗೆ ಸನ್ಮಾನ

Suddi Udaya
error: Content is protected !!