25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ತಲೆಮರೆಸಿಕೊಂಡು ಮೃತಪಟ್ಟ ಆರೋಪಿಯ ಮರಣ ಪತ್ರ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

ಬೆಳ್ತಂಗಡಿ: ಕರ್ತವ್ಯ ನಿರತ ಪೊಲೀಸ್ ಮೇಲೆ ಹಲ್ಲೆ ಪ್ರಕರಣದಲ್ಲಿ ತಲೆಮರೆಸಿಕೊಂಡು, 2001ರಲ್ಲಿ ವಾರಂಟ್ ಜಾರಿಯಾಗಿದ್ದ, ಧರ್ಮಸ್ಥಳ ಗ್ರಾಮದ ವಿದ್ಯುಷಿ ನಗರದ ಬಾಲಕೃಷ್ಣ ರಾವ್ 2007ರಲ್ಲಿ ಮೃತಪಟ್ಟಿರುವುದಾಗಿ ಅವರ ಮರಣ ಪ್ರಮಾಣ ಪತ್ರದ ಪ್ರತಿಯನ್ನು ಧರ್ಮಸ್ಥಳ ಪೊಲೀಸರು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಕರ್ತವ್ಯ ನಿರತ ಪೊಲೀಸ್ ಮೇಲೆ ಹಲ್ಲೆ ಪ್ರಕರಣದಲ್ಲಿ ಧರ್ಮಸ್ಥಳ ಗ್ರಾಮದ ವಿದ್ಯುಷಿ ನಗರ ನಿವಾಸಿ ಬಾಲಕೃಷ್ಣ ರಾವ್ ಎಂಬವರಿಗೆ 2001 ಫೆಬ್ರವರಿಯಲ್ಲಿ ಎಲ್.ಪಿ.ಸಿ ವಾರಂಟ್ ಹೊರಡಿಸಲಾಗಿತ್ತು. ಅವರ ಪತ್ತೆ ಬಗ್ಗೆ ಬೆಳ್ತಂಗಡಿ ಪೊಲೀಸ್ ಉಪ ಅಧಿಕ್ಷಕರಾದ ರೋಹಿಣಿ, ಪೊಲೀಸ್ ವೃತ್ತ ನಿರೀಕ್ಷಕರಾದ ರವಿ ಬಿ ಎಸ್, ಉಪ ನೀರಿಕ್ಷಕರಾದ ಸಮರ್ಥ್ ರವರ ಮಾರ್ಗದರ್ಶನದಲ್ಲಿ ಠಾಣಾ ಸಿಬ್ಬಂದಿಗಳಾದ ವೃಷಭ, ಚರಣ್‌ರಾಜ್, ರವರು ಉಡುಪಿ, ಪುತ್ತೂರು, ಚಿಕ್ಕಮಗಳೂರು ಅಂಚೆ ಉಪ ವಿಭಾಗಗಳಿಗೆ ಭೇಟಿ ನೀಡಿ ಅವರ ಬಗ್ಗೆ ವಿಚಾರಿಸಿದಾಗ, ೧೯೯೭ ರಲ್ಲಿ ಚಿಕ್ಕಮಗಳೂರು ಅಂಚೆ ವಿಭಾಗದಿಂದ ಕಡ್ಡಾಯ ನಿವೃತ್ತಿ ನೀಡಿದ್ದು, ೨೦೦೭ ಫೆ. ೧೨ ರಲ್ಲಿ ಮೃತ ಪಟ್ಟಿರುವುದಾಗಿ ತಿಳಿದುಬಂದಿತ್ತು. ಅದರಂತೆ ಅವರ ಮರಣ ಪ್ರಮಾಣ ಪತ್ರದ ಪ್ರತಿಯನ್ನು ಪಡೆದು ಪೊಲೀಸರು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ವರದಿಯಾಗಿದೆ.

Related posts

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ

Suddi Udaya

ಎಕ್ಸೆಲ್ ನ ವಿದ್ಯಾರ್ಥಿ ಸಂಜನಾ ಜೆ ಇ ಇ ಅಡ್ವಾನ್ಸ್ ನಲ್ಲಿ ರಾಷ್ಟ್ರಕ್ಕೆ 731 ರಾಂಕ್

Suddi Udaya

ಕೊಕ್ಕಡ: ಪೊಟ್ಲಡ್ಕ ಎಂಬಲ್ಲಿ ಅರಣ್ಯ ಇಲಾಖೆಯ ಜೀಪ್ ಪಲ್ಟಿ

Suddi Udaya

ಮಚ್ಚಿನ ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಒಕ್ಕೂಟದ ಪದಗ್ರಹಣ ಸಮಾರಂಭಕ್ಕೆ ಡಾ.ಡಿ ವಿರೇಂದ್ರ ಹೆಗ್ಗಡೆಯವರಿಗೆ ಆಮಂತ್ರಣ

Suddi Udaya

ಧರ್ಮಸ್ಥಳದಲ್ಲಿ ಶಿವರಾತ್ರಿಯ ರಥೋತ್ಸವ

Suddi Udaya

ತೆಗೆದುಕೊಂಡ ಒಡವೆಗಳನ್ನು ಯಾಕೆ ಇನ್ನು ಕೊಟ್ಟಿಲ್ಲ ಎಂದು ಪ್ರಶ್ನಿಸಿದ ಮಹಿಳೆಗೆ ಕೈಯಿಂದ ಹೊಡೆದು ಕುತ್ತಿಗೆಯನ್ನು ಹಿಚುಕಿ ಜೀವಬೆದರಿಕೆ

Suddi Udaya
error: Content is protected !!