September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶಿವಫ್ರೆಂಡ್ಸ್ ಕುರಾಯ -ಖಂಡಿಗ ಮೈರೋಳ್ತಡ್ಕ -ಬಂದಾರು ಇದರ ಆಶ್ರಯದಲ್ಲಿ ತಾ| ಮಟ್ಟದ ವಾಲಿಬಾಲ್ ಪಂದ್ಯಾಟ, ಹಗ್ಗಜಗ್ಗಾಟ ಹಾಗೂ ಮಹಿಳೆಯರ ಮುಕ್ತ ತ್ರೋಬಾಲ್ ಪಂದ್ಯಾಟ

ಬಂದಾರು: ಶಿವಫ್ರೆಂಡ್ಸ್ ಕುರಾಯ -ಖಂಡಿಗ ಮೈರೋಳ್ತಡ್ಕ -ಬಂದಾರು ಗ್ರಾಮ, ಇದರ ಆಶ್ರಯದಲ್ಲಿ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಬೆಳ್ತಂಗಡಿ ಇದರ ಸಹಯೋಗದೊಂದಿಗೆ 10ನೇ ವರ್ಷದ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ, ಪುರುಷರ ಮತ್ತು ಮಹಿಳೆಯರ ಮುಕ್ತ ಸಿಂಗಲ್ ಗ್ರಿಪ್ ಮಾದರಿಯ ಹಗ್ಗಜಗ್ಗಾಟ ಪಂದ್ಯಾಟ ಹಾಗೂ ಮಹಿಳೆಯರ ಮುಕ್ತ ತ್ರೋಬಾಲ್ ಪಂದ್ಯಾಟ ಡಿ.14 ರಂದು ಶಿವಫ್ರೆಂಡ್ಸ್ ಕ್ರೀಡಾಂಗಣದಲ್ಲಿ ನೆರವೇರಿತು.

ಬೆಳಗ್ಗೆ ಪ್ರಗತಿಪರ ಕೃಷಿಕರಾದ ಶ್ರೀಪತಿ ಭಟ್ ಮುಂಡೂರು ಇವರು ದೀಪ ಪ್ರಜ್ವಲನೆಗೊಳಿಸಿ ಪಂದ್ಯಾಟಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಶಿವಫ್ರೆಂಡ್ಸ್ ಕುರಾಯ ಖಂಡಿಗ ಇದರ ಅಧ್ಯಕ್ಷ ಸುಂದರ ಗೌಡ ಖಂಡಿಗ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರಾದ ಡೊoಬಯ್ಯ ಗೌಡ ಖಂಡಿಗ, ನಿರಂಜನ ಗೌಡ ನಡುಮಜಲು, ಬಂದಾರು ಗ್ರಾಮ ಪಂಚಾಯತ್ ಸದಸ್ಯರಾದ ದಿನೇಶ್ ಗೌಡ ಖಂಡಿಗ, ಪದ್ಮುಂಜ ಸಿ ಎ ಬ್ಯಾಂಕ್ ಉಪಾಧ್ಯಕ್ಷರಾದ ಅಶೋಕ್ ಗೌಡ ಪಾಂಜಾಳ, ಉದಯ ಎಂ.ಸಿ.ಕೆ ಉಪಸ್ಥಿತರಿದ್ದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಶಿವಫ್ರೆಂಡ್ಸ್ ಕುರಾಯ ಖಂಡಿಗ ಇದರ ಅಧ್ಯಕ್ಷ ಸುಂದರ ಗೌಡ ಖಂಡಿಗ ಅಧ್ಯಕ್ಷತೆ ವಹಿಸಿದ್ದರು. ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಧರ್ಮಸ್ಥಳ ಪೊಲೀಸ್ ಠಾಣೆ ಉಪ ನೀರಿಕ್ಷಕರಾದ ಸಮರ್ಥ್ ಆರ್ ಗಾಣಿಗೇರ, ಮುಗೇರಡ್ಕ ಮೊಗ್ರು ದ.ಕ.ಜಿ.ಪ.ಕಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕರಾದ ಮಾಧವ ಗೌಡ ದೊರ್ತೋಡಿ, ವಾಣಿ ಪಿ.ಯು ಕಾಲೇಜು ವಾಣಿಜ್ಯ ವಿಭಾಗ ಮುಖ್ಯಸ್ಥರಾದ ಶಂಕರ್ ರಾವ್ ಇವರುಗಳು ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿ ಶಿವಫ್ರೆಂಡ್ಸ್ ಸಂಘದ ಸಮಾಜ ಮುಖಿ ಚಟುವಟಿಕೆ, ಹಾಗೂ ಶಿವಫ್ರೆಂಡ್ಸ್ ಸಂಘವು ಮಾಡಿರುವ 10 ವರ್ಷದ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಅಶೋಕ್ ಕುಲಾಲ್ ಕಣಿಯೂರು -ಸಮಾಜಸೇವೆ, ಜಯರಾಮ ಶೆಟ್ಟಿ ಪದ್ಮುಂಜ ನಿವೃತ್ತ ಕಾರ್ಯದರ್ಶಿ ಹಾಲು ಉತ್ಪಾದಕರ ಸಹಕಾರಿ ಸಂಘ ಪದ್ಮುಂಜ, ತೀರ್ಥೇಶ್ ವಿಟ್ಲ ರಾಷ್ಟಮಟ್ಟದ ಕಬಡ್ಡಿ ಕ್ರೀಡಾಪಟು,ಕು. ಯಕ್ಷಿತಾ ಜೆ ದಂಡುಗ ರಾಷ್ಟ ಮಟ್ಟದ ವಾಲಿಬಾಲ್ ಕ್ರೀಡಾಪಟು,ಕು. ರಕ್ಷಿತಾ ಜೆ ದಂಡುಗ ರಾಷ್ಟ ಮಟ್ಟದ ವಾಲಿಬಾಲ್ ಕ್ರೀಡಾಪಟು, ಕು. ಶ್ರಾವ್ಯ ಮೊಗ್ರು ರಾಷ್ಟ್ರ ಮಟ್ಟದ ವಾಲಿಬಾಲ್ ಕ್ರೀಡಾಪಟು, ಕು.ಅದಿತಿ ಮುಗೆರೋಡಿ ಯೋಗದಲ್ಲಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಇವರುಗಳನ್ನು ಸನ್ಮಾನಿಸಲಾಯಿತು.

ಬಹುಮಾನ ವಿತರಣೆ: ಮಹಿಳೆಯರ ತ್ರೋಬಾಲ್ ಪಂದ್ಯಾಟ ಬಹುಮಾನ ವಿಜೇತರು ವಿಮಲ ಬಳಗ ಪ್ರಥಮ, ರಕ್ಷಿತಾ ಬಳಗ ದ್ವಿತೀಯ ಸ್ಥಾನ, ಮಹಿಳೆಯರ ಮುಕ್ತ ಸಿಂಗಲ್ ಗ್ರಿಪ್ ಮಾದರಿಯ ಹಗ್ಗಜಗ್ಗಾಟ ಬಹುಮಾನ ವಿಜೇತರು ಪರಶುರಾಮ ಫ್ರೆಂಡ್ಸ್ ಉದನೆ ಪ್ರಥಮ ಸ್ಥಾನ, ಶಿವಫ್ರೆಂಡ್ಸ್ ದ್ವಿತೀಯ ಸ್ಥಾನ, ಸತ್ಯದೇವತೆ ಪಾರೆಂಕಿ ತೃತೀಯ ಸ್ಥಾನ, ಶ್ರೀ ಸಾಯಿ ಬಂದಾರು ಚತುರ್ಥ ಸ್ಥಾನ, ಪುರುಷರ ಮುಕ್ತ ಸಿಂಗಲ್ ಗ್ರಿಪ್ ಮಾದರಿಯ ಹಗ್ಗಜಗ್ಗಾಟ ಬಹುಮಾನ ವಿಜೇತರು ಶ್ರೀ ದುರ್ಗಾ ಕೊರಗಟ್ಟೆ ಪ್ರಥಮ ಸ್ಥಾನ, ಶ್ರೀ ಸಾಯಿ ಮೊಗ್ರು -ಬಂದಾರು ದ್ವಿತೀಯ ಸ್ಥಾನ, ಫ್ರೆಂಡ್ಸ್ ಪಣೋಲಿಬೈಲು ತೃತೀಯ ಸ್ಥಾನ, ಪರಶುರಾಮ ಉದನೆ ಚತುರ್ಥ ಸ್ಥಾನ, ತಾಲೂಕು ಮಟ್ಟದ ವಾಲಿಬಾಲ್ ಬಹುಮಾನ ವಿಜೇತರು ಸಂತೃಪ್ತಿ ಫ್ರೆಂಡ್ಸ್ ಗುರುವಾಯನಕೆರೆ ಪ್ರಥಮ ಸ್ಥಾನ, ಶಿವಫ್ರೆಂಡ್ಸ್ ಕುರಾಯ ಖಂಡಿಗ ಬಂದಾರು ದ್ವಿತೀಯ ಸ್ಥಾನ, ಕಣಿಯೂರು ಫ್ರೆಂಡ್ಸ್ ತೃತೀಯ ಸ್ಥಾನ , ಯಜಮಾನ ಫ್ರೆಂಡ್ಸ್ ಚತುರ್ಥ ಸ್ಥಾನ ಹಾಗೂ ಬೆಸ್ಟ್ ಪಾಸಾರ್ ಚರಣ್ ಸಂತೃಪ್ತಿ ಫ್ರೆಂಡ್ಸ್ ಗುರುವಾಯನಕೆರೆ, ಬೆಸ್ಟ್ ಅಟ್ಯಾಕರ್ ಅಖಿಲೇಶ್ ಸಂತೃಪ್ತಿ ಗುರುವಾಯನಕೆರೆ, ಬೆಸ್ಟ್ ಆಲ್ ರೌಂಡರ್ ವೈಯಕ್ತಿಕ ಪ್ರಶಸ್ತಿ ತನ್ನದಾಗಿಸಿಕೊಂಡರು.

ಈ ಸಂದರ್ಭದಲ್ಲಿ ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಅಶೋಕ್ ಗೌಡ ಪಾಂಜಾಲ, ತಾಲೂಕು ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ಯಶವಂತ ಗೌಡ ಬೆಳಾಲು, ಪದ್ಮುಂಜ ಸಿ ಎ ಬ್ಯಾಂಕ್ ನಿವೃತ್ತ ಕಾರ್ಯನಿರ್ವಾಣಾಧಿಕಾರಿ ರಘುಪತಿ ಭಟ್ ಅನಾಬೆ, ಬಂದಾರು ಗ್ರಾಮ ಪಂಚಾಯತ್ ಸದಸ್ಯರಾದ ಪರಮೇಶ್ವರಿ ಕೆ ಗೌಡ, ಸುಚಿತ್ರ ಮುರ್ತಾಜೆ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಕೃಷ್ಣಯ್ಯ ಆಚಾರ್ಯ, ಧರ್ಮಸ್ಥಳ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ರಾಜೇಶ್ ಉಪಸ್ಥಿತರಿದ್ದರು. ಕು ತೃಷಾ, ತೃಪ್ತಿ, ಸಾನ್ವಿ ಪ್ರಾರ್ಥನೆಗೈದು, ಡೊoಬಯ್ಯ ಗೌಡ ಖಂಡಿಗ ಸ್ವಾಗತಿಸಿ ಭರತೇಶ್ ಗೌಡ ನೆಲ್ಲಿದಕಂಡ, ನಿರೂಪಿಸಿ ಧನ್ಯವಾದವಿತ್ತರು. ಶ್ರೀಮತಿ ಸುಷ್ಮಾ ಜಯ ಪೂಜಾರಿ ಮುರ್ತಾಜೆ ಸನ್ಮಾನ ಪತ್ರ ವಾಚಿಸಿದರು.

Related posts

ಉಜಿರೆ ಅನುಗ್ರಹ ಪ.ಪೂ ಕಾಲೇಜು ಶೇ. 100 ಫಲಿತಾಂಶ

Suddi Udaya

ವಿಜಯ ದಶಮಿಯಂದು ಗೆಜ್ಜೆ ಗಿರಿಯಲ್ಲಿ ಒಂಬತ್ತನೇ ಮಹಾಸಭೆ

Suddi Udaya

ದ.ಕ ಜಿಲ್ಲಾ ಕೇಂದ್ರ ಬ್ಯಾಂಕ್ ನಿಂದ ಸುಲ್ಕೇರಿಮೊಗ್ರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶಿರ್ಲಾಲು ಸೊಸೈಟಿಗೆ ಪ್ರೋತ್ಸಾಹಕ ಸಾಧನ ಪ್ರಶಸ್ತಿ

Suddi Udaya

ಮಚ್ಚಿನ: ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಮಾಣೂರು ಸಪರಿವಾರ ಶ್ರೀ ಶಾಸ್ತರ ದೇವಸ್ಥಾನ : ಊರ ಭಕ್ತಾದಿಗಳಿಂದ ಶ್ರಮದಾನ

Suddi Udaya

ಬಳಂಜ ಗ್ರಾ.ಪಂ. ನ ಅಭಿವೃದ್ಧಿ ಕೆಲಸ ಕಾರ್ಯಗಳಿಗೊಳಿದ ಪ್ರತಿಷ್ಠಿತ `ಗಾಂಧಿ ಗ್ರಾಮ’ ಪುರಸ್ಕಾರ

Suddi Udaya

ಅನಾರು ಶ್ರೀ ದುರ್ಗಾಪರಮೇಶ್ವರೀ ದೇವಿಯ ವರ್ಷಾವಧಿ ಜಾತ್ರಾ ಮಹೋತ್ಸವ: ತೋರಣ ಮುಹೂರ್ತ, ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ, ಕ್ಯಾಲೆಂಡರ್ ಬಿಡುಗಡೆ

Suddi Udaya
error: Content is protected !!