September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕುಪ್ಪೆಟ್ಟಿಯಿಂದ ಉಪ್ಪಿನಂಗಡಿ ಸಂಚರಿಸುವ ರಸ್ತೆಯ ಅವ್ಯವಸ್ಥೆಯ ಕೇಳುವವರಾರು? : ಡಿವೈಎಫ್ ಐ ಪ್ರಶ್ನೆ

ಬೆಳ್ತಂಗಡಿ: ಕುಪ್ಪೆಟ್ಟಿಯಿಂದ ಉಪ್ಪಿನಂಗಡಿ ಸಂಚರಿಸುವ ರಸ್ತೆಯಿಂದಾಗಿ ದಿನೇ ದಿನೇ ಸಮಸ್ಯೆಗಳು ಎದುರಾಗುತ್ತಿದ್ದು, ಯಾವ ಅಧಿಕಾರಿಗಳು, ಶಾಸಕರು, ಮಂತ್ರಿಗಳು ಇದರತ್ತ ಗಮನಹರಿಸದಿರುವುದು ಈ ದುಸ್ಥಿತಿಗೆ ಕಾರಣವಾಗಿದೆ ಎಂದು ಡಿ.ವೈ.ಎಫ್.ಐ. ಬೆಳ್ತಂಗಡಿ ತಾಲೂಕು ಸಮಿತಿ ಆಪಾದಿಸಿದೆ.

ಈ ರಸ್ತೆಯ ಮರುಡಾಮರೀಕರಣಕ್ಕೆ ಆಗ್ರಹಿಸಿ ಸರಕಾರಕ್ಕೆ ಮನವಿ ನೀಡಿ, ಡಿ.ವೈ.ಎಫ್.ಐ. ಈ ಹೇಳಿಕೆ ನೀಡಿದೆ. ಇಲ್ಲಿನ ರಸ್ತೆ ಹೊಂಡ-ಗುಂಡಿಗಳನ್ನು ಒಳಗೊಂಡು ಮರಣ ಬಾವಿಯಂತೆ ಬಾಯಿ ಬಿಡುತ್ತಿದೆ ಎಂದು ಡಿ.ವೈ.ಎಫ್.ಐ. ತಾಲೂಕು ಅದ್ಯಕ್ಷರಾದ ಅಧಿತಿ ಕೊಯ್ಯೂರು ಹಾಗೂ ಕಾರ್ಯದರ್ಶಿ ಅಭಿಷೇಕ್ ಪದ್ಮುಂಜ ಅವರು ತಿಳಿಸಿದ್ದಾರೆ. ಇದೇ ಮಾರ್ಗದಲ್ಲಿ ಇತ್ತೀಚಿಗೆ ಬಂದ ನಮ್ಮ ಮೈಸೂರು ಮಹಾರಾಜರು ಅದು ಹೇಗೆ ಬಂದರೋ ಯಾರಿಗೂ ತಿಳಿದಿಲ್ಲ ಎಂದು ಹೇಳಿದರು. ಇಲ್ಲಿನ ಜನರು ಇಲ್ಲಿನ ಗುಂಡಿಗಳಲ್ಲಿ ಬಾಳೆ ಗಿಡಗಳನ್ನು ನೆಟ್ಟು ತಮ್ಮ ಜನಪ್ರತಿನಿಧಿಗಳ ವಿರುದ್ಧ ಪ್ರತಿಭಟಿಸಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಅದಲ್ಲದೆ ರಸ್ತೆ ಬದಿಯ ಅಂಗಡಿ ವ್ಯಾಪಾರಸ್ತರ ಪಾಡು ಯಾರಿಗೂ ಬೇಡ. ಇಲ್ಲಿ ಸಂಚರಿಸುವ, ವಿದ್ಯಾರ್ಥಿಗಳು, ಇತರೆ ಜನಸಾಮಾನ್ಯರು ಹಾಗೆಯೇ ಬಸ್ಸಿಗಾಗಿ ಕಾಯುವ ಪ್ರಯಾಣಿಕರು ಕೂಡ ಮಣ್ಣು, ದೂಳುಗಳನ್ನು ಉಸಿರಾಡಿ ಜೀವಿಸುವಂತಾಗಿದೆ.

ಬೆಳ್ತಂಗಡಿ ತಾಲೂಕಿನ DYFI ಯುವಜನ ಸಂಘಟನೆ ಬೆಳ್ತಂಗಡಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕರಿಗೆ ಇಂಜಿನಿಯರ್ ಗೆ ರಸ್ತೆ ಕಾಮಗಾರಿಯನ್ನು ಆದಷ್ಟು ಬೇಗ ಪ್ರಾರಂಭಿಸಬೇಕೆಂದು ಮನವಿ ಮಾಡಲಾಯಿತು. ಇಲ್ಲವಾದಲ್ಲಿ ಕುಪ್ಪೆಟ್ಟಿಯಲ್ಲಿ ಈ ತಿಂಗಳ ಅಂತ್ಯದೊಳಗೆ ಪ್ರತಿಭಟನೆಯನ್ನು ಕೈಗೊಳ್ಳುವುದಾಗಿ ತಿಳಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಸಹಾಯಕ ಕಾರ್ಯಪಾಲಕರಾದ ಬಕ್ಕಪ್ಪ ರವರು ಈಗಾಗಲೇ ಸರಕಾರದಿಂದ ತಮಗೆ, “ಪ್ಯಾಚ್ ವರ್ಕ್ ” ಮಾಡಲು ಮಾತ್ರ ಅನುದಾನ ಬಂದಿರುವುದು, ರಸ್ತೆ ಕಾಮಗಾರಿಗೆ ಹಣ ಇನ್ನೂ ಬಂದಿಲ್ಲ ಮುಂದಿನ ಎರಡು-ಮೂರು ತಿಂಗಲೊಳಗೆ ಬರಬಹುದು ಎಂದು ತಿಳಿಸಿದ್ದಾರೆ. ಆದರೆ ಈ ಪ್ಯಾಚ್ ವರ್ಕ್ ಕೆಲಸವನ್ನು ಆದಷ್ಟು ಬೇಗ ಪ್ರಾರಂಭಿಸುವುದಾಗಿ ಮಾತು ನೀಡಿರುತ್ತಾರೆ.

ಈ ಸಂದರ್ಭದಲ್ಲಿ DYFI ಬೆಳ್ತಂಗಡಿ ತಾಲೂಕು ಅಧ್ಯಕ್ಷರು ಕಾರ್ಯದರ್ಶಿಗಳ ಜೊತೆ ಸಹಕಾರ್ಯದರ್ಶಿಗಳಾದ ವಿನುಷರಮಣ ಪಟ್ರಮೆ, ಅಶ್ವಿತಾ ಕುತ್ಲೂರು, ಸದಸ್ಯರಾದ ಈಶ್ವರಿ ಪದ್ಮುಂಜ ಮತ್ತಿತರರು ಉಪಸ್ಥಿತರಿದ್ದರು.

Related posts

ಲಾಯಿಲ: ಚಾಲಕನ ನಿಯಂತ್ರಣ ತಪ್ಪಿದ ಕಾರು ಕಾಲೇಜಿನ ಕಂಪೌಂಡಿಗೆ ಡಿಕ್ಕಿ

Suddi Udaya

ಪುಂಜಾಲಕಟ್ಟೆ: ಟೆಂಪೊ ಡಿಕ್ಕಿ: ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವು

Suddi Udaya

ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ ವೃತ್ತಿ ಕೌಶಲ್ಯ ತರಬೇತಿ ‘ಕಾರ್ಯಕ್ರಮ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ 12 ತೆಂಗಿನಕಾಯಿ ಗಣಹೋಮ ಮತ್ತು ಚಂಡಿಕಾ ಹೋಮ

Suddi Udaya

ಚಾರ್ಮಾಡಿ ಘಾಟಿಯಲ್ಲಿ ಕಾಡಾನೆ ಪ್ರತ್ಯಕ್ಷ: ವಾಹನ ಸವಾರರಲ್ಲಿ ಆತಂಕ

Suddi Udaya

ಕಳೆಂಜ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆ

Suddi Udaya
error: Content is protected !!