37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಎಸ್ ಡಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಪ್ರಸಕ್ತ ವರ್ಷ ರೂ.5 ಕೋಟಿಗೂ ಅಧಿಕ ಮೊತ್ತದ ಉಚಿತ ಡಯಾಲಿಸಿಸ್ ಸೇವೆ, ಉಚಿತ ಜೌಷಧ ಹಾಗೂ ಚಿಕಿತ್ಸೆ: ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್

ಬೆಳ್ತಂಗಡಿ: ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಲಾಭದ ದೃಷ್ಟಿ ಇಲ್ಲದೆ ಗ್ರಾಮೀಣ ಜನರಿಗೆ ಸೇವೆ ನೀಡಲು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ, ಶ್ರೀಮತಿ ಹೇಮಾವತಿ ಹೆಗ್ಗಡೆ ಹಾಗೂ ಡಿ.ಹಷೇಂದ್ರ‌ಕುಮಾರ್. ಮತ್ತು ಕುಟುಂಬಸ್ಥರು ಉಜಿರೆಯಲ್ಲಿ ಆರಂಭಿಸಿರುವ ಆಸ್ಪತ್ರೆ ವತಿಯಿಂದ ಪ್ರಸಕ್ತ ವರ್ಷ 5 ಕೋಟಿ ರೂ.ಗೂ ಅಧಿಕ ಮೊತ್ತದ ಉಚಿತ ಔಷಧ ಹಾಗೂ ಚಿಕಿತ್ಸೆ, ಉಚಿತ ಡಯಾಲಿಸಿಸ್ ಇತ್ಯಾದಿ ವೈದ್ಯಕೀಯ ಸೇವೆಗಳನ್ನು ಬಡ ರೋಗಿಗಳಿಗೆ ನೀಡಲಾಗಿದೆ ಎಂದು ಉಜಿರೆ ಎಸ್ ಡಿ ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಜನಾರ್ದನ್ ಹೇಳಿದರು.

ಅವರು ಆಸ್ಪತ್ರೆಯಲ್ಲಿ ಡಿ. 19 ಶುಕ್ರವಾರ ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ತಾಲೂಕಿನ ಪತ್ರಕರ್ತರ ಜೊತೆಗಿನ ಸ್ನೇಹ ಕೂಟದಲ್ಲಿ ಮುಂದಿನ ಯೋಜನೆಗಳು ಹಾಗೂ ಪ್ರಸಕ್ತ ವರ್ಷದ ಆಸ್ಪತ್ರೆಯ ಸಾಧನೆಗಳ ಪಕ್ಷಿನೋಟವನ್ನು ನೀಡಿದರು.


ಜನರಿಗೆ ಉತ್ತಮ ಸೇವೆ ನೀಡುವ ನಿಟ್ಟಿನಲಿ ಧರ್ಮಾಧಿಕಾರಿಗಳು ನರ್ಸಿಂಗ್ ಕಾಲೇಜು ಮಂಜೂರು ಮಾಡಿದ್ದು, ಇದಕ್ಕಾಗಿ ವಿಸ್ತರಿತ ಕಟ್ಟಡದ ಕೆಲಸ ನಡೆಯುತ್ತಿದೆ. ಇದೇ ಕಟ್ಟಡದಲ್ಲಿ ಜನರ ಬೇಡಿಕೆಯ ಮೇರೆಗೆ 7 ಕೋಟಿ ರೂ ಅಧಿಕ ಮೌಲ್ಯದ ಎಂಆರ್‌ಐ ಸ್ಕಾನಿಂಗ್ ಸೌಲಭ್ಯದ ವ್ಯವಸ್ಥೆಯನ್ನು ಶೀಘ್ರವಾಗಿ ಆರಂಭಿಸಲಾಗುವುದು. ನಗರದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದೊರೆಯುವ ಹೈಟೆಕ್ ವೈದ್ಯಕೀಯ ಸೇವೆ ಇಲ್ಲಿ ದೊರೆಯುತ್ತಿದ್ದು, ಆಸ್ಪತ್ರೆಯ ಸೇವೆಯನ್ನು ಪರಿಗಣಿಸಿ, ಸತತ ಎರಡನೇ ಬಾರಿ ಆಸ್ಪತ್ರೆಗೆ ಎನ್ ಎ ಬಿ ಎಚ್ ಮಾನ್ಯತೆ ದೊರೆತಿದೆ.2025 ಜ.1ರಿಂದ ಉಚಿತ ಡಯಾಲಿಸಿಸ್ ಯೋಜನೆಯನ್ನು ಪ್ರಾರಂಭಿಸಿದ್ದು ಪ್ರತಿ ರೋಗಿಗೆ ತಿಂಗಳಿಗೆ 24 ಸಾವಿರ ರೂ.ಗಳಿಗೂ ಅಧಿಕ ಉಳಿತಾಯವಾಗುತ್ತದೆ. ಡಯಾಲಿಸಿಸ್ ಸೆಂಟರ್‌ನ್ಲಿ ಪ್ರತಿ ಬೆಡ್‌ಗೆ ಟಿ.ವಿ ಹಾಗೂ ವಯರ್‌ಲೆಸ್ ಹೆಡ್‌ಫೋನ್ ವ್ಯವಸ್ಥೆಯಿದೆ. ನವೆಂಬರ್ ವರೆಗೆ 6834 ಉಚಿತ ಡಯಾಲಿಸಿಸ್ ನೀಡಲಾಗಿದ್ದು ಇದಕ್ಕೆ ಒಂದು ಕೋಟಿ ರೂ. ಗಿಂತ ಅಧಿಕ ವೆಚ್ಚವಾಗಿದೆ ಎಂದರು.


ಆಸ್ಪತ್ರೆ ವತಿಯಿಂದ ಮೂರು ಸರಕಾರಿ ಮತ್ತು ಹತ್ತೊಂಬತ್ತು ಖಾಸಗಿ ವಿಮಾ ಕಂಪೆನಿಗಳ ಒಡಂಬಡಿಕೆಯಲ್ಲಿ 6೦ಕ್ಕೂ ಅಧಿಕ ಆರೋಗ್ಯ ವಿಮಾ ಯೋಜನೆಗಳ ಮೂಲಕ ನಗದುರಹಿತ ಚಿಕಿತ್ಸಾ ಸೌಲಭ್ಯ ಸಂಪೂರ್ಣ ಸುರಕ್ಷಾ ವಿಮೆಯಲ್ಲಿ ಹೊರರೊಗಿ ವಿಭಾಗದಲ್ಲಿ ಉಚಿತ ವೈದ್ಯಕೀಯ ಸೇವೆ ನೀಡುವ ಏಕೈಕ ಆಸ್ಪತ್ರೆ ಇದಾಗಿದೆ. ಉಚಿತ ಆರೋಗ್ಯ ತಪಾಸಣೆ ಶಿಬಿರಗಳು, ಉಚಿತ ವೈದ್ಯಕೀಯ ಸೇವೆ ಇತ್ಯಾದಿ ನೀಡಲಾಗುತ್ತಿದೆ. ಅತ್ಯಾಧುನಿಕ ವೈದ್ಯಕೀಯ ಸಲಕರಣೆಗಳನ್ನು ಹೊಂದಿರುವ ಆಸ್ಪತ್ರೆಯಲ್ಲಿ ವಿಶ್ವದಲ್ಲಿಯೇ ಮೊದಲ ಬೆನ್ನುಮೂಳೆ ಗೆಡ್ಡೆ ಮತ್ತು ಡ್ಯೂರಲ್ ದುರಸ್ತಿ ಯಶಸ್ವಿ ಶಸ್ತç ಚಿಕಿತ್ಸೆ ನಡೆಸಲಾಗಿದೆ. ಇದರ ಜತೆ ವಕ್ರಪಾದ, ಲ್ಯಾಪ್ರೋಸ್ಕೋಪಿಕ್, ಮಕ್ಕಳಿಗೆ ಲಾಪ್ರೊಸ್ಕೋಪಿಕ್ ಅಪೆಂಡಿಸೈಟಿಸ್, ಕ್ಯಾನ್ಸರ್ ಸರ್ಜರಿ ಮೊದಲಾದ ವಿಶಿಷ್ಟ ಶಸ್ತçಚಿಕಿತ್ಸೆಗಳನ್ನು ನಡೆಸಲಾಗುತ್ತಿದೆ ಎಂದರು.


ಆಸ್ಪತ್ರೆಯಲ್ಲಿ ನಾಲ್ಕು ಅಪರೇಷನ್ ಥಿಯೇಟರ್‌ಗಳಿದ್ದು, ಇನ್ನೊಂದು ಥಿಯೇಟರ್‌ನ ಅಗತ್ಯ ಇರುವುದರಿಂದ ರೋಗಿಗಳ ಅನುಕೂಲಕ್ಕಾಗಿ ಹೊರರೋಗಿ ವಿಭಾಗದ ವಿಸ್ತರಿತ ಕಟ್ಟಡದಲ್ಲಿ ಒಂದು ಅಪರೇಷನ್ ಥಿಯೇಟರ್ ಆಗುತ್ತದೆ. ಜೊತೆಗೆ ವೈದ್ಯರಿಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಸುಸಜ್ಜಿತ ವ್ಯವಸ್ಥೆಗಳಿರುವ ನೊಲೇಜ್ ರೂಮ್‌ವೊಂದು ಕೂಡಾ ಆಗಲಿದೆ. ನಮ್ಮ ಆಸ್ಪತ್ರೆಯಲ್ಲಿ 50ಕ್ಕೂ ಅಧಿಕ ಸ್ಪೆಷಾಲಿಟಿ ಮತ್ತು ಸೂಪರ್ ಸ್ಪೆಷಾಲಿಟಿ ವೈದ್ಯರು, ಉನ್ನತ ಅರ್ಹತೆ ಅನುಭವ ಹೊಂದಿರುವ ದಾದಿಯರು ಇದ್ದಾರೆ ಎಂದು ತಿಳಿಸಿದರು.


ಮುಖ್ಯ ವೈದ್ಯಾಧಿಕಾರಿ ಡಾ. ಸಾತ್ವಿಕ್ ಜೈನ್ ಅವರು ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಯಾವುದೇ ಶಸ್ತçಚಿಕಿತ್ಸೆ ನಡೆಸಲು ಬೇಕಾದ ಎಲ್ಲಾ ವ್ಯವಸ್ಥೆಗಳು ಇವೆ. ನಾಲ್ಕು ಅಪರೇಷನ್ ಥಿಯೇಟರ್‌ಗಳಿದ್ದು, ಲ್ಯಾಪ್ರೋಸ್ಕೋಪಿಕ್ ಹಿಸ್ಟರೆಕ್ಟಮಿ, ಅಪೆಂಡಿಸೈಟಿಸ್ ಶಸ್ತ್ರಚಿಕಿತ್ಸೆ, ಬಾಯಿ, ಅನ್ನನಾಳದ ಕ್ಯಾನ್ಸರ್ ಸರ್ಜರಿ, ಅತ್ಯಂತ ಕ್ಲಿಷ್ಟಕರವಾದ ಕರುಳಿನ ಕಾಯಿಲೆಯ ಅಪರೇಷನನ್ನು ಈ ಆಸ್ಪತ್ರೆಯಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಸಿರುವುದು ವಿಶೇಷ ಸಾಧನೆಯಾಗಿದೆ. ಎಂಟು ವೆಂಟಿಲೇಟರ್ ಬೆಡ್, ಅಕ್ಸಿಜನ್ ಸೌಲಭ್ಯ, ಐಸಿಯೂ ವ್ಯವಸ್ಥೆ, ತಜ್ಞ ವೈದ್ಯರ ತಂಡ ಈ ಆಸ್ಪತ್ರೆಯಲ್ಲಿದೆ ಎಂದು ವಿವರಿಸಿದರು.


ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ ಏಣಿಂಜೆ ಅವರು ಮಾತನಾಡಿ, ಆಸ್ಪತ್ರೆಗೆ ಬರುವ ರೋಗಿಗಳಿಗೆ ನಗುಮುಖದ ಸೇವೆ ದೊರೆತಾಗ ಅವರ ಅರ್ಧ ರೋಗ ಗುಣವಾದಂತೆ ಅಂತಹ ಸೇವೆ ಉಜಿರೆ ಆಸ್ಪತ್ರೆಯಲ್ಲಿ ದೊರೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ತುಕರಾಮ್ ಬಿ., ಮೀಡಿಯ ಕ್ಲಬ್ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಉಪಾಧ್ಯಕ್ಷ ಸತೀಶ್ ಪೆರ್ಲ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಎಲ್‌ಇಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪ್ರಮಾಣ ಪತ್ರ ಪಡೆದಿರುವ ಸಾಲ್ಯಾನ್ ಎಲ್‌ಇಡಿ ಮಾಲಕ ಸುದೀಪ್ ಸಾಲ್ಯಾನ್ ಅವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ದೇವೇಂದ್ರ ಕುಮಾರ್ ಪಿ. ಉಪಸ್ಥಿತರಿದ್ದರು. ಫೈನಾನ್ಸ್ ಆಫೀಸರ್ ನಾರಾಯಣ ಬಿ. ಕಾರ್ಯಕ್ರಮ ನಿರ್ವಹಿಸಿದರು. ಪತ್ರಕರ್ತರು ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Related posts

ವೇಣೂರು : ಮನೆಯ ಅಂಗಳದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪತ್ತೆ: ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟ ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಸೇವಾಪ್ರತಿನಿಧಿ ಜಯಂತಿ

Suddi Udaya

ಕೊಕ್ಕಡ: ಕಾಡಾನೆಗಳ ಹಾವಳಿ : ಅರಣ್ಯ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಬೀದಿ ಬದಿಯ ಅಂಗಡಿಗಳ ತೆರವು ಕಾರ್ಯ

Suddi Udaya

ಹಿರಿಯ ಲೇಖಕ ಪ. ರಾಮಕೃಷ್ಣ ಶಾಸ್ತ್ರಿ ರವರು ಮನುಶ್ರೀ ದತ್ತಿ ಪ್ರಶಸ್ತಿಗೆ ಆಯ್ಕೆ

Suddi Udaya

ಧರ್ಮಸ್ಥಳ: ಯೂಟ್ಯೂಬರ್ಸ್‌ ಮೇಲೆ ಹಲ್ಲೆ ಪ್ರಕರಣ ಧರ್ಮಸ್ಥಳ ಪೊಲೀಸರಿಂದ ಓರ್ವನ ಬಂಧನ

Suddi Udaya

ಪರಪ್ಪು ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಈದ್ ಆಚರಣೆ

Suddi Udaya

ಉಜಿರೆ-ಉಪ್ಪಿನಂಗಡಿ ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್‌ನಲ್ಲಿ ಬೃಹತ್ ಸಾರಿ ಮೇಳ: ಸೀರೆಗಳ ಮೇಲೆ ಶೇ.50 ಡಿಸ್ಕೌಂಟ್: ಕೆಲವೇ ದಿನಗಳು ಮಾತ್ರ

Suddi Udaya
error: Content is protected !!