March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಗೇರುಕಟ್ಟೆ : ಪರಪ್ಪು ಜಮಾಅತಿನ ಗೌರವಾದ್ಯಕ್ಷರಾಗಿ ಕಾಜೂರು ತಂಙಳ್ ರವರು ಅಧಿಕಾರ ಸ್ವೀಕಾರ ಮತ್ತು ಮಹಾಸಭೆ

ಗೇರುಕಟ್ಟೆ: ಖಾಝಿ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ನಿರ್ದೇಶನದಂತೆ ಕಾಜೂರು ತಂಙಳ್ ರವರು ಪರಪ್ಪು ಜಮಾಅತಿನ ಗೌರವಾದ್ಯಕ್ಷರಾಗಿ ಡಿ.19 ರಂದು ಅಧಿಕಾರ ಸ್ವೀಕರಿಸಿದರು.

ನಂತರ ದುಅ ನೆರವೇರಿಸಿ ಮಹಾಸಭೆ ನಡೆಸಿಕೊಟ್ಟರು. ಖತೀಬ್ ಎಫ್.ಎಚ್.ಮಹಮ್ಮದ್ ಮಿಸ್ಬಾಹಿ ಅಲ್ ಫುರ್ಖಾನಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಗತ ವರ್ಷದ ವರದಿ ಮತ್ತು ಜಮಾ ಖರ್ಚಿನ ವಿವರವನ್ನು ಅಬ್ದುಲ್ ಕರೀಮ್ ಸಭೆಗೆ ಓದಿ ಹೇಳಿದರು.
ಮಹಾಸಭೆಯಲ್ಲಿ ಮೊಹಲ್ಲಾದ ಅಭಿವೃದ್ಧಿಗಾಗಿ ಕೆಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಕೆಲ ಸದಸ್ಯರು ಸಲಹೆಗಳನ್ನು ನೀಡಿದರು.


ಜಮಾಅತರ ಅಭಿಪ್ರಾಯ ಪಡೆದು ಹೊಸ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಮುಪತ್ತಿಸ್ ಮುಹಮ್ಮದ್ ಹನೀಫ್ ಮಿಸ್ಬಾಹಿ ಅಲ್ ಅಫ್ಳಲಿ, ಪ್ರಧಾನ ಕಾರ್ಯದರ್ಶಿಯಾಗಿ ಎಚ್ ಎಸ್ ಸೈಫುಲ್ಲ,ಕೋಶಾದಿಕಾರಿಯಾಗಿ ಅಬ್ದುಲ್ ಬಶೀರ್ ಟಿಂಬರ್ ಉಪಾದ್ಯಕ್ಷರಾಗಿ ಮೊಹಮ್ಮದ್ ಹನೀಫ್ ಬಿ.ಐ.,ಅಬ್ದುಲ್ಲ ಕುಂಙ ದಾರಿಮಿ, ಸದಸ್ಯರುಗಳಾಗಿ ಅಬ್ದುಲ್ ಕರೀಮ್ ಗೇರುಕಟ್ಟೆ,ಬಿ.ಕೆ ರವೂಫ್ ಹಾಜಿ,ಎನ್.ಎನ್ ಮಹಮ್ಮದ್, ಅಬ್ದುಲ್ಲ ಎಸ್ ಯು, ಅಬೂಬಕ್ಕರ್ ಕೆ.ಎಮ್ ,ಶರೀಫ್ ಜಿ ಆಯ್ಕೆಯಾದರು.

Related posts

ಶಿಬಾಜೆ ಭಂಡಿಹೊಳೆಯಲ್ಲಿ ಪ್ರಕೃತಿ ಪ್ರಿಯರಿಂದ ರಸ್ತೆ ಸ್ವಚ್ಛತಾ ಅಭಿಯಾನ

Suddi Udaya

ಉರುವಾಲು ಶ್ರೀ ಭಾರತಿ ವಿದ್ಯಾಸಂಸ್ಥೆಯಲ್ಲಿ ವನಮಹೋತ್ಸವ ಮತ್ತು ಸಸಿ ವಿತರಣಾ ಕಾರ್ಯಕ್ರಮ

Suddi Udaya

ಕಕ್ಯಪದವು ಎಲ್.ಸಿ.ಆರ್ ವಿದ್ಯಾಸಂಸ್ಥೆಯಲ್ಲಿ ಪ.ಪೂ. ವಿಭಾಗದ ವಿದ್ಯಾರ್ಥಿ‌‌ ಸಂಘದ ಉದ್ಘಾಟನೆ ಹಾಗೂ ಸ್ವಾಗತ ಕಾರ್ಯಕ್ರಮ

Suddi Udaya

ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನಕ್ಕೆ ಬೆಳ್ಳಿಯ ಪಾತ್ರೆ ಕೊಡುಗೆ

Suddi Udaya

ಮಡಂತ್ಯಾರು : ರೂ. 25 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಕಕ್ಕೆರಕಾಡು ಪರನೀರು ಕಾಂಕ್ರೀಟ್ ರಸ್ತೆ ಉದ್ಘಾಟನೆ

Suddi Udaya

ಅರುವ ನಮ ಮಾತೆರ್ಲ ಒಂಜೇ ಕಲಾ ತಂಡದ ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!