37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬಂಗ್ವಾಡಿ ಬಸದಿ ಶ್ರೀ ಶಾಂತಿನಾಥ ಸ್ವಾಮಿ ಸನ್ನಿಧಿಯಲ್ಲಿ ವಾರ್ಷಿಕ ಮಹಾರಥೋತ್ಸವ: ಧ್ವಜಾರೋಹಣ

ಮಿತ್ತಬಾಗಿಲು: ಬಂಗ್ವಾಡಿ ಬಸದಿ ಶ್ರೀ ಶಾಂತಿನಾಥ ಸ್ವಾಮಿ ಸನ್ನಿಧಿಯಲ್ಲಿ ವಾರ್ಷಿಕ ಮಹಾರಥೋತ್ಸವವು ಡಿ.25ರಿಂದ ಡಿ. 31ರವರೆಗೆ ಪರಮಪೂಜ್ಯ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು, ದಾನಶಾಲಾ ಮಠ, ಕಾರ್ಕಳ ಇವರ ಪಾವನ ಸಾನ್ನಿಧ್ಯ ಮತ್ತು ಮಾರ್ಗದರ್ಶನದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ನೆರವೇರಲಿರುವುದು.

ಡಿ.25 ತೋರಣ ಮುಹೂರ್ತ, ವಿಮಾನ ಶುದ್ಧಿ, ಯಕ್ಷಾರಾಧನೆ, ಧ್ವಜಾರೋಹಣ, ನಿತ್ಯವಿಧಿ ಸಹಿತ ಕ್ಷೀರಾಭಿಷೇಕ ನಡೆಯಿತು.

ಸಂಜೆ 6.೦೦ರಿಂದ ಶ್ರೀ ಕ್ಷೇತ್ರಪಾಲ ದೇವರಿಗೆ ಆರಾಧನಾ ಪೂರ್ವಕ ಕಲಾರೋಪಣೆ, ಡಿ.26 ನಾಂದಿಮಂಗಲ, ಮೃತ್ತಿಕಾ ಸಂಗ್ರಹಣ, ಅಂಕುರಾರ್ಪಣೆ, ಭೇರಿತಾಡನ, ನಿತ್ಯವಿಧಿ ಸಹಿತ ಕ್ಷೀರಾಭಿಷೇಕ. ಸಂಜೆ 5.30ಕ್ಕೆ ಉಪಾಹಾರದ ವ್ಯವಸ್ಥೆ, ಡಿ.27 ವಾಸ್ತು ಶಾಂತಿ, ನಿತ್ಯವಿಧಿ ಸಹಿತ ಕ್ಷೀರಾಭಿಷೇಕ ಡಿ.28 ಶ್ರೀ ಪೀಠಯಂತ್ರಾರಾಧನೆ, ನಿತ್ಯವಿಧಿಸಹಿತ ಕ್ಷೀರಾಭಿಷೇಕ, ಡಿ.29 ನಿತ್ಯವಿಧಿ ಸಹಿತ ಬೃಹಚ್ಫಾಂತಿ ಯಂತ್ರಾರಾಧನೆ, ಪಾಲಕಿ ಉತ್ಸವ, ಕ್ಷೀರಾಭಿಷೇಕ, ಡಿ.೩೦ (ಮಧ್ಯಾಹ್ನ) ದರ್ಶನಬಲಿ, ರಥಾರೋಹಣ, ಮಹಾನೈವೇದ್ಯ ಪೂಜೆ ಸಂಘ ಸಂತರ್ಪಣೆ, ರಾತ್ರಿ ಗಂಟೆ 9.00 ರಿಂದ ಮಹಾರಥೋತ್ಸವ, ಶ್ರೀ ಶಾಂತಿನಾಥ ಸ್ವಾಮಿ ಸನ್ನಿಧಿಯಲ್ಲಿ 108 ಕಲಶ ಮಹಾಭಿಷೇಕ ರಾತ್ರಿ ಗಂಟೆ 7.00ಕ್ಕೆ ಬೆಂಗಳೂರು ದೂರದರ್ಶನದ ಬಿ. ಗ್ರೇಡ್ ಕಲಾವಿದೆ ಕು| ಅನನ್ಯ ರಂಜಿನಿ, ಮೂಡಬಿದಿರೆ. ಇವರಿಂದ ಭರತನಾಟ್ಯ ನಡೆಯಲಿದೆ.

ಜ. 10 ರಂದು ಅತಿಶಯ ಕ್ಷೇತ್ರ ಶ್ರವಣಗುಂಡ ಶ್ರೀ ಬ್ರಹ್ಮಯಕ್ಷ ದೇವರ ಸನ್ನಿಧಿಯಲ್ಲಿ ಮುಡಿ ಅಕ್ಕಿ ಪೂಜೆ (ಗುಂಡುದರ್ಶನ ದಿನ), ಕುಂಕುಮೋತ್ಸವ, ಧ್ವಜಾವರೋಹಣ ನಡೆಯಲಿದೆ ಎಂದು ಸಮಿತಿಯವರು ತಿಳಿಸಿದ್ದಾರೆ.

Related posts

ಜಯರಾಮ್ ಮೊಂಟೆತಡ್ಕರವರಿಂದ ಶಿಬಾಜೆ ಶಾಲೆಗೆ ಪ್ರಿಂಟರ್ ಕೊಡುಗೆ

Suddi Udaya

ಬೆಳ್ತಂಗಡಿ: ಖಾಸಗಿ ಕಾಲೇಜಿನ ಪ್ರಥಮ ಪದವಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಕಾಯರ್ತಡ್ಕ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಶ್ರೀಮತಿ ರತ್ನ ರವರಿಗೆ ಚಿಕಿತ್ಸಾ ನೆರವು

Suddi Udaya

ವೇಣೂರುನಲ್ಲಿ ಶ್ರೀ ಸಾಯಿ ಗಿಫ್ಟ್ &ಟಾಯ್ಸ್ ಸೆಂಟರ್ ಶುಭಾರಂಭ

Suddi Udaya

ಬೆಳ್ತಂಗಡಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ವತಿಯಿಂದ 78ನೇ ವಷ೯ದ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

Suddi Udaya

ರೂ. 6 ಕೋಟಿ ವೆಚ್ಚದಲ್ಲಿ ಗುರುವಾಯನಕೆರೆ- ಉಪ್ಪಿನಂಗಡಿ ರಸ್ತೆ ಅಭಿವೃದ್ಧಿ: ಫೆ.18: ನಾಳೆ ಸಂಸದ ಕ್ಯಾ| ಬ್ರಿಜೇಶ್ ಚೌಟರಿಂದ ಶಿಲಾನ್ಯಾಸ ಶಾಸಕ ಹರೀಶ್‌ಪೂಂಜ ಭಾಗಿ

Suddi Udaya
error: Content is protected !!