ಬೆಳ್ತಂಗಡಿ: ಕ್ಯಾಂಪ್ಕೋ ಸಂಸ್ಥೆಯ “ಸಾಂತ್ವನ” ಯೋಜನೆಯಡಿಯಲ್ಲಿ ಕ್ಯಾಂಪ್ಕೊದ ಸಕ್ರಿಯ ಸದಸ್ಯರಾದ ಶ್ರೀರಾಮ ಶೆಟ್ಟಿಗಾರ್ ಇವರ ವೈದ್ಯಕೀಯ ವೆಚ್ಚದ ಪರಿಹಾರವಾಗಿ ಮಂಜೂರಾದ ರೂ.54,589 ಮೊತ್ತದ ಚೆಕ್‌ನ್ನು ಡಿ.24 ರಂದು ಕ್ಯಾಂಪ್ಕೊ ನಿರ್ದೇಶಕರಾದ ದಯಾನಂದ ಹೆಗ್ಡೆಯವರು ಶ್ರೀರಾಮ ಶೆಟ್ಟಿಗಾರ್ ಅವರ ಸಮ್ಮುಖದಲ್ಲಿ ಅವರ ಮಗನಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕ್ಯಾಂಪ್ಕೋ ಬೈಕಂಪಾಡಿ ಪ್ರಾಂತ್ಯದ ಪ್ರಾದೇಶಿಕ ವ್ಯವಸ್ಥಾಪಕ ನಿತಿನ್ ಕೊಟ್ಯಾನ್, ನಾರಾವಿ ಶಾಖೆಯ ವ್ಯವಸ್ಥಾಪಕ ಉದಯಕುಮಾರ್, ಕಾರ್ಕಳ ಶಾಖೆಯ ವ್ಯವಸ್ಥಾಪಕ ರಾಘವೇಂದ್ರ ಮಲ್ಯ, ಹಾಗೂ ಬೈಕಂಪಾಡಿ ಶಾಖೆಯ ಸಿಬ್ಬಂದಿ ಅಶೋಕ ಉಪಸ್ಥಿತರಿದ್ದರು.











