March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿಸಂಘ-ಸಂಸ್ಥೆಗಳು

ಬಜಿರೆ: ಸಾರ್ವಜನಿಕ ಶ್ರೀ ಶನೇಶ್ವರ ಪೂಜೆ-ಧಾರ್ಮಿಕ ಸಭೆ

ವೇಣೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋಜನೆ, ಪ್ರಗತಿಬಂಧು ಜ್ಞಾನವಿಕಾಸ ಸ್ವಸಹಾಯ ಸಂಘಗಳ ಒಕ್ಕೂಟ ಬಜಿರೆ, ಜನಜಾಗೃತಿ ಗ್ರಾಮಸಮಿತಿ ಬಜಿರೆ ಹಾಗೂ ವಿಘ್ನೇಶ್ವರ ನವಜೀವನ ಭಜನ ಮಂಡಳಿ ಬಜಿರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಗ್ರಾಮ ಸುಭೀಕ್ಷೆಗಾಗಿ 21ನೇ ವರ್ಷದ ಸಾರ್ವಜನಿಕ ಶ್ರೀ ಶನೇಶ್ವರ ಪೂಜೆಯು ಬಜಿರೆಯ ಬತ್ತಾರು ಸಮುದಾಯ ಭವನದಲ್ಲಿ ಡಿ.27ರಂದು ನಡೆಯಿತು.

ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ ಮಾತನಾಡಿ, ಸಂಘಟನೆ ಎಂಬ ಕಲ್ಪನೆಯೇ ಇಲ್ಲದ ಸಮಯದಲ್ಲಿ ಡಾ. ಹೆಗ್ಗಡೆಯವರು ಗ್ರಾಮೀಣ ಭಾಗಗಳಿಗೆ ಯೋಜನೆಯ ಸದಸ್ಯರ ಮೂಲಕ ಜನ ಸಂಘಟನೆ ಮಾಡಿದರು. ಸಾಮೂಹಿಕ ಪೂಜೆಯ ಕಲ್ಪನೆಯನ್ನು ಮೂಡಿಸಿ ಗ್ರಾಮಗ್ರಾಮಗಳ ಸುಭೀಕ್ಷೆಗಾಗಿ ಶ್ರಮಿಸಿದರು. ಯೋಜನೆಗೆ ಅಪವಾದಗಳು ಹಿಂದಿನಿಂದಲೂ ಬರುತ್ತಿದ್ದು, ಈಗಲೂ ಇದೆ. ಆದರೆ ಪೂಜ್ಯರ ಕಲ್ಪನೆಯಂತೆ ಇಂದು ಮಹಿಳೆಯರೂ ಸಹ ಆರ್ಥಿಕ ಸಬಲೀಕರಣಗೊಂಡು ಮುಖ್ಯವಾಹಿನಿಗೆ ಬಂದಿದ್ದಾರೆ, ಯೋಜನೆಯ ಇಂತಹ ಕಾರ್ಯಕ್ರಮಗಳಿಗೆ ನಿರಂತರ ಸಹಕಾರ ನೀಡಬೇಕಿದೆ ಎಂದರು.

ವೇಣೂರು ಗ್ರಾ.ಪಂ. ಅಧ್ಯಕ್ಷೆ ಮಲ್ಲಿಕಾ ಕಾಶಿನಾಥ್ ಹೆಗ್ಡೆ ಸಭೆಯನ್ನು ಉದ್ಘಾಟಿಸಿ, ಈ ಗ್ರಾಮದ ಜನರ ಒಗ್ಗಟ್ಟು, ಧಾರ್ಮಿಕ ಚಿಂತನೆಯನ್ನು ಶ್ಲಾಘಿಸಿದರು. ವೇಣೂರಿನ ವೈದ್ಯ ಡಾ. ಶಾಂತಿಪ್ರಸಾದ್ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಸನಾತನ ಹಿಂದೂ ಧಾರ್ಮಿಕ ಪದ್ದತಿಯನ್ನು ಬೆಳೆಸುವ ಇಲ್ಲಿನ ಯುವಕರ ಶ್ರಮ ಶ್ಲಾಘಿಸುವಂತದ್ದು, ಸಂಘಟನೆ ಮೂಲಕ ಗ್ರಾಮದ ಅಭಿವೃದ್ಧಿ ಇನ್ನಷ್ಟು ಆಗಲಿ ಎಂದರು.

ಪ್ರಗತಿಬಂಧು ಒಕ್ಕೂಟದ ಅಧ್ಯಕ್ಷ ಗಿರೀಶ್ ಕುಲಾಲ್ ಅಧ್ಯಕ್ಷತೆ ವಹಿಸಿ, ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಯೋಜನಾಧಿಕಾರಿ ಅಶೋಕ್, ಶ್ರೀ ವಿಘ್ನೇಶ್ವರ ಭಜನ ಮಂಡಳಿ ಅಧ್ಯಕ್ಷ ಪ್ರವೀಣ್ ಪೂಜಾರಿ, ಒಕ್ಕೂಟದ ಪದಾಧಿಕಾರಿಗಳು, ವಿವಿಧ ವಲಯದ ಸೇವಾಪ್ರತಿನಿಧಿಗಳು, ಸ್ವಸಹಾಯ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.

ಸನ್ಮಾನ
ಒಕ್ಕೂಟದ ಹಿರಿಯರಾದ ಶಂಕರ ಗೌಡ, ಪ್ರಗತಿಸೇವಕರಾಗಿ ಸೇವೆ ಸಲ್ಲಿಸಿದ್ದ ಸತೀಶ್ ಕುಲಾಲ್ ಹಾಗೂ ಪ್ರಸಿದ್ಧ ವೈದ್ಯ ಡಾ. ಶಾಂತಿಪ್ರಸಾದ್ ಅವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಗುರುದತ್ ಹೆಗ್ಡೆ, ಗೋಪಾಲ ಆಚಾರ್ಯ ಹಾಗೂ ಸ್ವಪ್ನ ಹೆಗ್ಡೆ ಸನ್ಮಾನ ಪತ್ರ ವಾಚಿಸಿದರು.
ಯಶೋಧ ಮತ್ತು ಧನಲಕ್ಷ್ಮೀ ಪ್ರಾರ್ಥಿಸಿ, ಸೇವಾಪ್ರತಿನಿಧಿ ರೂಪಾಚಂದನ ವರದಿ ವಾಚಿಸಿದರು. ಜಯಶಂಕರ ಹೆಗ್ಡೆ ಸ್ವಾಗತಿಸಿ, ಮೇಲ್ವಿಚಾರಕಿ ಶಾಲಿನಿ ಮತ್ತು ಜನಜಾಗೃತಿ ಗ್ರಾಮಸಮಿತಿ ಅಧ್ಯಕ್ಷ ಅಶೋಕ್ ಪೂಜಾರಿ ನಿರೂಪಿಸಿದರು. ಭಜನ ಮಂಡಳಿ ಮಾಜಿ ಅಧ್ಯಕ್ಷ ಶಿವಾನಂದ ಗೌಡ ವಂದಿಸಿದರು. ಬಳಿಕ ವಿವಿಧ ಸಾಂಸ್ಕೃತಿಕ ಕಾಯಕ್ರಮಗಳು ಜರುಗಿದವು.

Related posts

ಬೆಳ್ತಂಗಡಿ ಕೋಟಕ್ ಲೈಫ್ 2ನೇ ವರ್ಷಕ್ಕೆ ಪಾದಾರ್ಪಣೆ

Suddi Udaya

ಶಿಶಿಲ ಆರೋಗ್ಯ ಉಪಕೇಂದ್ರದ ಆವರಣದಲ್ಲಿ ಶಿಶಿಲ-ಅರಸಿನಮಕ್ಕಿ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರಿಂದ ಸ್ವಚ್ಚತಾ ಕಾರ್ಯ

Suddi Udaya

ಬಂದಾರು ಸ.ಉ.ಪ್ರಾ ಶಾಲಾ ‘ಪ್ರತಿಭಾ ಪುರಸ್ಕಾರ’ ಸಮಾರಂಭ

Suddi Udaya

ಡಿ.ಕೆ.ಆರ್.ಡಿ.ಎಸ್ ಬೆಳ್ತಂಗಡಿ ವತಿಯಿಂದ ಮಾಧ್ಯಮ ಮಿತ್ರರೊಂದಿಗೆ ಕ್ರಿಸ್ಮಸ್ ಸ್ನೇಹಕೂಟ

Suddi Udaya

ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ನೀಲೇಶ್ವರದ ತಂತ್ರಿವರ್ಯರಾದ ಉಚ್ಚಿಲ ಪದ್ಮನಾಭ ತಂತ್ರಿಗಳ ಭೇಟಿ

Suddi Udaya

ಬೆಳ್ತಂಗಡಿ ಬೊಟ್ಟುಗುಡ್ಡೆ ನಿವಾಸಿ ಶ್ರೀಮತಿ ಕಮಲ ಸಫಲ್ಯ ನಿಧನ

Suddi Udaya
error: Content is protected !!