37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿ

ಡಿ.28-ಜ.2: ಓಡಿಲ್ನಾಳ ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೋತ್ಸವ

ಓಡಿಲ್ನಾಳ: ಶ್ರೀರಾಮ ನಗರ ಮೈರಲ್ಕೆ ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೋತ್ಸವ ಕ್ಷೇತ್ರದ ತಂತ್ರಿಗಳಾದ ವೇದಮೂರ್ತಿ ನೀಲೇಶ್ವರ ಶ್ರೀ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಡಿ.28ರಿಂದ ಜ.1ರವರೆಗೆ ಜರುಗಲಿರುವುದು.

ಡಿ.28ರಂದು ಪೂರ್ವಾಹ್ನ ಹೊರೆಕಾಣಿಕೆ, ತಂತ್ರಿಗಳ ಆಗಮನ, ಮಧ್ಯಾಹ್ನ ತೋರಣ ಮುಹೂರ್ತ, ಧ್ವಜಾರೋಹಣ, ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ಪೂಜೆ ಉತ್ಸವ ಜರುಗಲಿದೆ. ಡಿ.29ರಂದು ಗಣಹೋಮ, ಮೃತ್ಯುಂಜಯ ಹೋಮ, ಕಲಶಪೂಜೆ, ಕಲಶಾಭಿಷೇಕ, ಮಧ್ಯಾಹ್ನ ಮಹಾ ಪೂಜೆ ಪ್ರಸಾದ ವಿತರಣೆ (ಅನ್ನಸಂತರ್ಪಣೆ), ಸಂಜೆ ಪೂಜೆ, ಉತ್ಸವ ಕಟ್ಟೆಪೂಜೆ ಪ್ರಸಾದ ವಿತರಣೆ, ರಾತ್ರಿ ಸ್ಥಳೀಯ ಶಾಲಾ ಮಕ್ಕಳಿಂದ ಹಾಗೂ ಊರವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.
ಮೈರಲಿಕೆ ಶ್ರೀ ಕಿರಾತಮೂರ್ತಿ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಗೋಪಾಲ ಶೆಟ್ಟಿ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ, ಬರೋಡ ಉದ್ಯಮಿ ಶಶಿಧರ ಶೆಟ್ಟಿ ಬಿ., ಸುಜಿತಾ ವಿ. ಬಂಗೇರ ಬೆಳ್ತಂಗಡಿ, ಕುವೆಟ್ಟು ಗ್ರಾ.ಪಂ. ಅಧ್ಯಕ್ಷೆ ಭಾರತಿ ಎಸ್. ಶೆಟ್ಟಿ, ಮುಂಬೈ ತುಂಗಾ ಆಸ್ಪತ್ರೆಯ ವಸಂತಿ ಬಿ. ಶೆಟ್ಟಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರು ಸುಜಯ, ಮನೋಜ್ ಕುಮಾರ್ ನೆಕ್ಕಿಲೊಟ್ಟು, ದುಗ್ಗಪ್ಪ ಪೊಕ್ಕಿ ಭಾಗವಹಿಸಲಿರುವರು.

ಡಿ.30ರಂದು ಬೆಳಿಗ್ಗೆ ಗಣಹೋಮ, ನವಗ್ರಹ ಹೋಮ, ಶೋಡರ ಬಳಿ ಉತ್ಸವ, ಕಲಶ ಪೂಜೆ, ಕಲಶಾಭಿಷೇಕ ಉಪದೇವರಿಗೆ ಕಲಶಾಭಿಷೇಕ, ಮಧ್ಯಾಹ್ನ ಮಹಾ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಪೂಜೆ, ಶ್ರೀ ಭೂತ ಬಲಿ ಉತ್ಸವ, ವಸಂತ ಕಟ್ಟೆ ಪೂಜೆ, ಪ್ರಸಾದ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಜೈ ಭಜರಂದ ಬಲಿ ನಾಟಕ ಪ್ರದರ್ಶನ ಜರುಗಲಿದೆ.
ಡಿ.೩೧ರಂದು ಬೆಳಿಗ್ಗೆ ಗಣಹೋಮ, ದರ್ಶನ ಬಳಿ ಉತ್ಸವ, ಬಟ್ಟಲು ಕಾಣಿಕೆ ರಾಜಾಂಗಣ ಪ್ರಸಾದ ಕಲಶ ಪೂಜೆ ಕಲಶಾಭಿಷೇಕ, ಮಹಾ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಪೂಜೆ ಉತ್ಸವ ಕಟ್ಟೆಪೂಜೆ ಶಯನ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪುಣ್ಣಮೆದ ನಾಗೆ ಯಕ್ಷಗಾನ ಪ್ರದರ್ಶನ ಜರುಗಲಿದೆ. ಜ.1ರಂದು ಬೆಳಿಗ್ಗೆ ಗಣಹೋಮ, ಯಾತ್ರಾಹೋಮ ಕವಾಟ ಉದ್ಘಾಟನೆ, ಸಂಜೆ ಮಹಾ ರಂಗಪೂಜೆ ಆರಾಟ ಬಳಿ, ಆರಾಟ ಉತ್ಸವ ಧ್ವಜಾಅವರೋಹಣ, ಮಂಗಳ ಮಂತ್ರಾಕ್ಷತೆ ಜರುಗುವುದು. ಜ.2ರಂದು ಬೆಳಿಗ್ಗೆ ಸಂಪ್ರೋಕ್ಷಣೆ ಜರುಗಲಿರುವುದು.

Related posts

ಸಹಾಯ ಹಸ್ತ –ಸೇವಾಧಾಮದಿಂದ ಪುನಶ್ಚೇತನಗೊಂಡ ದಿವ್ಯಾಂಗರಿಂದ ತಯಾರಿಸಲಾದ ಉತ್ಪನ್ನಗಳ ಮಾರಾಟ ಯೋಜನೆ

Suddi Udaya

ಶಿಬಾಜೆ ಜನಸ್ಪಂದನ ಸಭೆ

Suddi Udaya

ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಏಕಾಹ ಭಜನಾ ಮಹೋತ್ಸವ

Suddi Udaya

ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಮಹಾಸಭೆ

Suddi Udaya

ಮಾ14-15 ಎಸ್.ಡಿ.ಎಂ ಝೇಂಕಾರ ಉತ್ಸವ: ಖ್ಯಾತ ನಟ ರಮೇಶ್ ಅರವಿಂದ್ ವಿಶೇಷ ಆಕರ್ಷಣೆ

Suddi Udaya

ಬೆಳ್ತಂಗಡಿ ತಾಲೂಕು ಕಾರ್ಯನಿರ್ವಹಣಾಧಿಕಾರಿ ವೈಜಣ್ಣರವರಿಂದ ಕಲ್ಮಂಜ ರಮೇಶ್ ನಾಯ್ಕ ರವರ ಅಡಿಕೆ ತೋಟ ರಚನೆಯ ಪರಿಶೀಲನೆ

Suddi Udaya
error: Content is protected !!