37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದಲ್ಲಿ “ಹೆಜ್ಜೆಗುರುತು” ವಿಶೇಷ ಕಾರ್ಯಕ್ರಮ

ಬೆಳ್ತಂಗಡಿ: ಸಹಕಾರ ಸಂಘದ ಅಭಿವೃದ್ಧಿಗೆ ಕಾರಣೀಕರ್ತರಾದ ಸಹೃದಯ ಸದಸ್ಯರು ಮತ್ತು ಗ್ರಾಹಕ ಬಾಂಧವರ ಸಮ್ಮಿಲನ ಕಾರ್ಯಕ್ರಮದೊಂದಿಗೆ, ನಡೆದು ಬಂದ ಹಾದಿಯ ಮೆಲುಕು ಹಾಕುವ ಹೆಜ್ಜೆಗುರುತು ಕಾರ್ಯಕ್ರಮವು ಕೇಂದ್ರ ಕಛೇರಿಯ ಶ್ರೀ ಗುರು ಸಾನಿಧ್ಯ ವಾಣಿಜ್ಯ ಸಂಕೀರ್ಣದ ಸಭಾಭವನದಲ್ಲಿ ಡಿ 27 ರಂದು ನಡೆಯಿತು.

ಸಂಸ್ಥೆಯ ಪ್ರಗತಿಯ ಪಯಣದಲ್ಲಿ ಹಿಂದಿನ‌ ಪ್ರತಿ ಹೆಜ್ಜೆಗಳತ್ತ ಒಂದು ನೋಟವನ್ನು ಬಿರುವ ವಿಶೇಷ ಪ್ರಯತ್ನದ ಅಂಗವಾಗಿ ಸಂಘದ ಗ್ರಾಹಕರೊಂದಿಗೆ ಚರ್ಚಿಸಲಾಯಿತು.
26 ಶಾಖೆಗಳು, 100ಕ್ಕೂ ಹೆಚ್ಚು ಸಿಬ್ಬಂದಿಗಳು, ರೂ.ರೂ 287 ಕೋಟಿ ಠೇವಣಿ, ರೂ 1404 ಕೋಟಿ ವ್ಯವಹಾರ, ರೂ 4.84 ಕೋಟಿ ಲಾಭವನ್ನು ಸಂಸ್ಥೆ ಗಳಿಸಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ‌ ಸಂಘದ ಅಧ್ಯಕ್ಷ ಭಗೀರಥ ಜಿ ವಹಿಸಿ ದೀಪ ಪ್ರಜ್ವಲನೆ ನೇರವೇರಿಸಿ ಮಾತನಾಡಿ ಗ್ರಾಹಕರ ಮಿತ್ರರ ಸಹಕಾರದಿಂದ ಶ್ರೀ ಗುರುದೇವ ಸೊಸೈಟಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ.ಮುಂದಿನ ದಿನಗಳಲ್ಲಿ ಇನ್ನೂ 5 ಸಂಘದ ಸಂಸ್ಥೆಗಳನ್ನು ಪ್ರಾರಂಭಿಸಲಿದ್ದೇವೆ ಎಂದರು.

ವೇದಿಕೆಯಲ್ಲಿ ಸಹಕಾರಿ ಸಂಘದ ಉಪಾಧ್ಯಕ್ಷ ಜಗದೀಶ್ಚಂದ್ರ ಡಿ.ಕೆ, ನಿರ್ದೇಶಕರಾದ ಗಂಗಾಧರ ಮಿತ್ತಮಾರು,ಚಿದಾನಂದ ಪೂಜಾರಿ ಎಲ್ದಕ್ಕ, ಚಂದ್ರಶೇಖರ್, ಶ್ರೀಮತಿ ತನುಜಾ ಶೇಖರ್, ಧರಣೇಂದ್ರ ಕುಮಾರ್, ಸೂರಜ್ ಕುಮಾರ್, ವಿಶೇಷಾಧಿಕಾರಿ ಯಂ.ಮೋನಪ್ಪ ಪೂಜಾರಿ ಕಂಡೆತ್ಯಾರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವಥ್ ಕುಮಾರ್, ನಿರ್ದೆಶಕರಾದ ಹೆಚ್ ಧರ್ಣಪ್ಪ ಪೂಜಾರಿ ಉಪಸ್ಥಿತರಿದ್ದರು.

ದೈನಿಕ ಸಂಗ್ರಹಕ ವಿಶ್ವನಾಥ ಪ್ರಾರ್ಥನೆ ಹಾಡಿದರು. ಉಪಾಧ್ಯಕ್ಷ ಜಗದೀಶ್ಚಂದ್ರ ಡಿ.ಕೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.

Related posts

ಕೃಷಿ ಕ್ಷೇತ್ರ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ವಿಶೇಷ ಸಾಧನೆ : ನಿವೃತ್ತ ಯೋಧ ಉಜಿರೆಯ ಗೋಪಾಲಕೃಷ್ಣ ಕಾಂಚೋಡು ಅವರಿಗೆ ಗೌರವ ಡಾಕ್ಟರೇಟ್ ಪದವಿ

Suddi Udaya

ಅಂಡಿಂಜೆ: ಯುವಕ ಮಂಡಲದಿಂದ ಮೊಸರು ಕುಡಿಕೆ ಉತ್ಸವ, ವಿವಿಧ ಆಟೋಟ ಸ್ಪರ್ಧೆಗಳು

Suddi Udaya

ಸಿರಿ ಸಂಸ್ಥೆಯ ನೂತನ ಉತ್ಪಾದನಾ ಸಂಕೀರ್ಣದ ಪೂಜಾ ಸಮಾರಂಭ: ಡಾ.ಹೆಗ್ಗಡೆ ಕುಟುಂಬಸ್ಥರು, ಸಿರಿ ಸಂಸ್ಥೆಯ ನಿರ್ದೇಶಕರುಗಳು ಭಾಗಿ

Suddi Udaya

ಕಾಶಿಪಟ್ಣ ಗ್ರಾ.ಪಂ. ಅಧ್ಯಕ್ಷರಾಗಿ ಸತೀಶ್ ಕಾಶಿಪಟ್ಣಅವಿರೋಧ ಆಯ್ಕೆ

Suddi Udaya

ಬೆಳ್ತಂಗಡಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ ಸ್ಥಳೀಯ ಸಂಸ್ಥೆಯ ಜಿಲ್ಲಾ ಮಟ್ಟದ ತೃತೀಯ ಚರಣ ಕಬ್ ಮತ್ತು ಸುವರ್ಣ ಗರಿ ಬುಲ್ ಬುಲ್ ಪರೀಕ್ಷಾ ಶಿಬಿರ

Suddi Udaya

ತೆಕ್ಕಾರು ಪ್ರಾ.ಕೃ.ಪ. ಸ. ಸಂಘದ ಉಪಾಧ್ಯಕ್ಷ ನಾಭಿರಾಜ್ ಹೆಗ್ಡೆ ನಿಧನ

Suddi Udaya
error: Content is protected !!