37.9 C
ಪುತ್ತೂರು, ಬೆಳ್ತಂಗಡಿ
March 6, 2026
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿವರದಿ

ಉಜಿರೆ: ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಕೆಸರ್ದ ಕಂಡೊಂಡು ಕುಸಲ್ದ ಗೊಬ್ಬುಲು ಕಾರ್ಯಕ್ರಮದ ಉದ್ಘಾಟನೆ

ಉಜಿರೆ: ಕ್ರೀಡೆ ಮನುಷ್ಯನ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವರವಾದ ಪಾತ್ರವನ್ನು ವಹಿಸಿದ್ದು, ಸಮಾಜದ ಸ್ವಾಸ್ಥ್ಯವನ್ನು ಕಾಪಾಡುತ್ತದೆ. ಕ್ರೀಡಾ ಕೂಟವು ಎಲ್ಲಾ ಧರ್ಮದವರನ್ನು ಒಟ್ಟುಗೂಡಿಸುವ ಕೆಲಸದ ಮೂಲಕ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ರೂಪಿಸುತ್ತದೆ. ಈ ವೇದಿಕೆ ಸಂಘಟನೆಯಲ್ಲಿರುವ ಯುವಕರಿಗೆ ತಮ್ಮ ಪ್ರತಿಭೆಗಳನ್ನು ತೋರ್ಪಡಿಸುವುದಕ್ಕೆ ಸೂಕ್ತವಾಗಿದೆ ಎಂದು ಉಜಿರೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಾಲಕೃಷ್ಣ ಕೇರಿಮಾರ್ ಹೇಳಿದರು.

ಅವರು ಡಿ.28ರಂದು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ವತಿಯಿಂದ ನಡೆಯುವ “ಕೆಸರ್ದ ಕಂಡೊಂಡು ಕುಸಲ್ದ ಗೊಬ್ಬುಲು” ವಿವಿಧ ಆಟೋಟ ಸ್ಪರ್ಧೆಗಳು ಮತ್ತು ಪುರುಷರ ಹಾಗೂ ಮಹಿಳೆಯರ ಮುಕ್ತ ಹಗ್ಗಜಗ್ಗಾಟ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಕೆಸರ್ದ ಕಂಡೊಂಡು ಕುಸಲ್ದ ಗೊಬ್ಬುಲು ಕಾರ್ಯಕ್ರಮದ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಬಿಲ್ಲರೋಡಿ, ಕಾರ್ಯದರ್ಶಿ ಅಶೋಕ್ ಗೌಡ ಸಂಧ್ಯಾ ಆಟೋ ಉಜಿರೆ, ಹಿರಿಯ ಕಾರ್ಯಕರ್ತ ಉಮೇಶ್ ಅತ್ತಾಜೆ, ಉದ್ಯಮಿ ಬಿಜೋಯಿ ಬಿ, ಕಿಶೋರ್, ಸೋಮಪ್ಪ ಪೂಜಾರಿ ಕುಂಜರ್ಪ, ಕೃಷ್ಣಪ್ಪ ಅಂಚನ್, ಮುಕೇಶ್ ಶೆಟ್ಟಿ ಉಪಸ್ಥಿತರಿದ್ದರು.ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಕಾರ್ಯದರ್ಶಿ ಸಂದೀಪ್ ಶೆಟ್ಟಿ ಮಂದರ್ಸ ಸ್ವಾಗತಿಸಿದರು. ಗೌರವಾಧ್ಯಕ್ಷಹರೀಶ್ ಬರಮೇಲು ವಂದಿಸಿದರು.

ಸ್ಪರ್ಧೆಗಳು: ಮಕ್ಕಳಿಗೆ : 1ರಿಂದ 5ನೇ ತರಗತಿ : 100ಮೀ ಓಟ, ಲಿಂಬೆ ಚಮಚ, ಬಾಲ್ ಪಾಸಿಂಗ್, ಹಿಂದೆ ಓಟ. ಮಕ್ಕಳಿಗೆ : 6ರಿಂದ 10ನೇ ತರಗತಿ : 100ಮೀ ಓಟ, ಗಿರ್‌ಗಿಟ್‌ಲೇ, ಲಿಂಬೆ ಚಮಚ, ಅಡಿಕೆ ಹಾಳೆ ಓಟ, ಹಿಂದೆ ಓಟ. ಪುರುಷರಿಗೆ : 100ಮೀ ಓಟ, ಕಂಬಳ ಓಟ, 3 ಕಾಲಿನ ಓಟ, ಹಿಂದೆ ಓಟ, ಕಬಡ್ಡಿ, ವಾಲಿಬಾಲ್, ಹಗ್ಗಜಗ್ಗಾಟ. ಮಹಿಳೆಯರಿಗೆ : 100ಮೀ ಓಟ, ಹಿಂದೆ ಓಟ, ಗಿರ್‌ಗಿಟ್‌ಲೇ, 3 ಕಾಲಿನ ಓಟ, ಬಾಲ್ ಪಾಸಿಂಗ್, ತ್ರೋಬಾಲ್‌, ಹಗ್ಗಜಗ್ಗಾಟ ನಡೆಯಲಿದೆ.

ವಿಶೇಷ ಸೂಚನೆ : ಮೇಲಿನ ಎಲ್ಲಾ ಆಟಗಳಿಗೆ ತಂಡಗಳನ್ನು ಸ್ಥಳದಲ್ಲಿಯೇ ರಚಿಸಲಾಗುವುದು. ವಿಜೇತರಿಗೆ ‘ಸೌಜನ್ಯ ಟ್ರೋಫಿ’. ಪುರುಷರ ಹಾಗೂ ಮಹಿಳೆಯರ ಮುಕ್ತ ಹಗ್ಗಜಗ್ಗಾಟ. ತೀರ್ಪುಗಾರರ ಮತ್ತು ಸಂಘಟಕರ ತೀರ್ಮಾನವೆ ಅಂತಿಮ. ಅಶಿಸ್ತು ತೋರಿದ ತಂಡವನ್ನು ಕೂಟದಿಂದ ಹೊರಹಾಕಲಾಗುವುದು. ಮಧ್ಯಾಹ್ನ 12.00 ಗಂಟೆಗೆ ಪುರುಷರ ದೇಹ ತೂಕ ಪ್ರಾರಂಭಗೊಳ್ಳುತ್ತದೆ. 2.00 ಗಂಟೆಗೆ ಹಗ್ಗಜಗ್ಗಾಟ ಪ್ರಾರಂಭ.

Related posts

ಕೊಕ್ಕಡ: ಮುಂಡೂರುಪಳಿಕೆ ಯುವಶಕ್ತಿ ಫ್ರೆಂಡ್ಸ್ ವತಿಯಿಂದ ಕೆಸರ್ ದ ಕಂಡೊಡು ಒಂಜಿ‌ದಿನ

Suddi Udaya

ವೇಶ್ಯಾವಟಿಕೆ ಶಂಕೆ ಮೇರೆಗೆ ಲಾಡ್ಜ್ ಗಳಿಗೆ ಪೊಲೀಸರಿಂದ ದಾಳಿ

Suddi Udaya

ಬೆಳಾಲು: ವ್ಯಕ್ತಿಯೋರ್ವರಿಗೆ ದ್ವಿಚಕ್ರ ವಾಹನ ಡಿಕ್ಕಿ

Suddi Udaya

ಉಜಿರೆ: ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

Suddi Udaya

ಕುತ್ಲೂರು ಯುವ ಬಿಲ್ಲವ ವೇದಿಕೆಯ ಅಧ್ಯಕ್ಷರಾಗಿ ಪ್ರಜ್ಞೇಶ್ ಆಯ್ಕೆ

Suddi Udaya

ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ನಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬಂದಂತಹ ಗ್ರಾಹಕರಿಗೆ ಗಿಡಗಳನ್ನು ನೀಡುವ ಮೂಲಕ ವಿಶ್ವ ಪರಿಸರ ದಿನ ಆಚರಣೆ

Suddi Udaya
error: Content is protected !!