37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಜಿಲ್ಲಾ ಸುದ್ದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ತಾಲೂಕು 19ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

ಕೊಯ್ಯೂರು: ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕ ಸಮ್ಮೇಳನ ಸಂಯೋಜನ ಸಮಿತಿ ಸರಕಾರಿ ಪ್ರೌಢಶಾಲೆ ಮತ್ತು ಸರಕಾರಿ ಪದವಿಪೂರ್ವ ಕಾಲೇಜು, ಕೊಯ್ಯೂರು ಇದರ ಸಂಯುಕ್ತ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕು 19ನೇ ಕನ್ನಡ ಸಾಹಿತ್ಯ ಸಮ್ಮೇಳ ಡಿ.28ರಂದು ಸರಕಾರಿ ಪ್ರೌಢ ಶಾಲೆ, ಕೊಯ್ಯೂರುನಲ್ಲಿ ಆರಂಭಗೊಂಡಿತು.

ಬೆಳಗ್ಗೆ ಕನ್ನಡ ಭುವನೇಶ್ವರಿಯ ಮೆರವಣಿಗೆ ಸ. ಹಿ. ಪ್ರಾ. ಶಾಲೆ, ಕೊಯ್ಯೂರು – ಅಮೃತಕೊಯ್ಲು ಸಭಾಂಗಣದಿಂದ ಸಮ್ಮೇಳನದ ಸಭಾಂಗಣದವರೆಗೆ ಅದ್ದೂರಿಯಾಗಿ ನಡೆಯಿತು. ಮೆರವಣಿಗೆಗೆ ಚಾಲನೆಯನ್ನು ಕೆ. ಮೋಹನ್ ಕುಮಾರ್, ಸಂಚಾಲಕರು, ‘ಬದುಕು ಕಟ್ಟೋಣ ಬನ್ನಿ, ಸೇವಾ ಟ್ರಸ್ಟ್ ಉಜಿರೆ ನೆರವೇರಿಸಿದರು.

ಬೆಳಗ್ಗೆ ರಾಷ್ಟ್ರ ಧ್ವಜರೋಹಣವನ್ನು ಶಿವಶಂಕರ್ ನಾಯಕ್, ರೈತಬಂಧು, ಮಾರುತಿಪುರ, ಕಣಿಯೂರು,ಪರಿಷತ್ತು ಧ್ವಜಾರೋಹಣವನ್ನು ಡಾ. ಎಂ. ಪಿ. ಶ್ರೀನಾಥ, ಅಧ್ಯಕ್ಷರು, ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸಮ್ಮೇಳನ ಧ್ವಜಾರೋಹಣವನ್ನು ಡಿ. ಯದುಪತಿ ಗೌಡ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಬೆಳ್ತಂಗಡಿ ತಾಲೂಕು ಘಟಕ ನೆರವೇರಿಸಿದರು.

ಬೆಳ್ತಂಗಡಿ ತಾಲೂಕು ಯ19ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದೀಪ ಬೆಳಗಿಸಿ, ಹಿಂಗಾರ ಅರಳಿಸಿ‌ ಕೆ. ಚಿನ್ನಪ್ಪ ಗೌಡ, ವಿಶ್ರಾಂತ ಕುಲಪತಿಗಳು ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ, ಹಾವೇರಿ ಉದ್ಘಾಟಿಸಿ,ದಿಕ್ಕೂಚಿ ಭಾಷಣ ಮಾಡಿದರು ಸಮ್ಮೇಳನಾಧ್ಯಕ್ಷತೆಯನ್ನು ಬಿ. ಭುಜಬಲಿ, ಧರ್ಮಸ್ಥಳ ವಹಿಸಿದ್ದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ. ಎ. ಕೃಷ್ಣಪ್ಪ ಪೂಜಾರಿ ಬಯ ಅವರು ರೇಣುಕಾ ಸುಧೀರ್ ಅರಸಿನಮಕ್ಕಿ ಇವರ ಕವನ ಸಂಕಲನ ‘ಹೃದಯಾಂತರಾಳದ ಮಾತು’ ಕೃತಿಯನ್ನು ಬಿಡುಗಡೆಗೊಳಿಸಿದರು.

ಮುಖ್ಯ ಅಭ್ಯಾಗತರಾಗಿ ಶ್ರೀಮತಿ ದಯಾಮಣಿ, ಅಧ್ಯಕ್ಷರು, ಗ್ರಾ. ಪಂ., ಕೊಯ್ಯೂರು, ಶ್ರೀಮತಿ ತಾರಕೇಸರಿ, ಕ್ಷೇ. ಶಿ., ಶಾಲಾ ಶಿಕ್ಷಣ ಇಲಾಖೆ ಬೆಳ್ತಂಗಡಿ ಭಾಗವಹಿಸಿದ್ದರು. ಧರ್ಣಪ್ಪ ಗೌಡ ಹಲೆಕ್ಕಿ, ಗೌರವಾಧ್ಯಕ್ಷರು, ಸ. ಸಂ. ಸಮಿತಿ, ಬಿ. ಬಾಲಕೃಷ್ಣ ಪೂಜಾರಿ ಬಜೆ, ಗೌರವಾಧ್ಯಕ್ಷರು, ಸ. ಸಂ. ಸಮಿತಿ, ಪಿ. ಪ್ರಚಂಡಭಾನು ಭಟ್ ಪಾಂಬೇಲು, ಗೌರವಾಧ್ಯಕ್ಷರು, ಸ. ಸಂ. ಸಮಿತಿ ಗೌರವ ಉಪಸ್ಥಿತರಿದ್ದರು. ಡಾ. ಎಂ. ಪಿ. ಶ್ರೀನಾಥ, ಅಧ್ಯಕ್ಷರು, ದ. ಕ. ಜಿ. ಕ. ಸಾ. ಪ. ಆಶಯ ನುಡಿಗಳನ್ನಾಡಿದರು. ಯದುಪತಿ ಗೌಡ, ಅಧ್ಯಕ್ಷರು, ಕ. ಸಾ. ಪ. ಬೆಳ್ತಂಗಡಿ ತಾಲೂಕು ಘಟಕ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ಸ.ಸಂ.ಸಮಿತಿ ಕಾಯಾ೯ಧ್ಯಕ್ಷರಾದ ಮೋಹನ್ ಗೌಡ, ರಾಧಾಕೃಷ್ಣ ತಚ್ಚಮೆ, ಪ್ರಧಾನ ಸಂಚಾಲಕ ದಾಮೋದರ ಗೌಡ ಬೆಕೆ೯,ಪ್ರಧಾನ ಕಾರ್ಯದರ್ಶಿ ಲೋಕೇಶ್ ಗೌಡ ಪಾಂಬೇಲು, ಸಂಘಟನಾ ಕಾರ್ಯದರ್ಶಿ ಕೇಶವ ಗೌಡ ಕೋಂಗುಜೆ, ಕಾಯ೯ದಶಿ೯ ಗೀತಾ ರಾಮಣ್ಣ ಗೌಡ, ಗೌರವ ಕಾರ್ಯದರ್ಶಿಗಳಾದ ರಾಮಕೃಷ್ಣ ಭಟ್, ಶ್ರೀಮತಿ ಪ್ರಮೀಳಾ ಉಪಸ್ಥಿತರಿದ್ದರು. ಅಶೋಕ್ ಭಟ್ ಅಗ್ರಸಾಲೆ, ಅಧ್ಯಕ್ಷರು, ಸ. ಸಂ. ಸಮಿತಿ, ಕೊಯ್ಯರು ಸ್ವಾಗತಿಸಿದರು. ರಾಮಚಂದ್ರ ದೊಡಮನಿ ಮತ್ತು ಶ್ರೀಮತಿ ದೀಪ್ತಿ ಹೆಗ್ಡೆಕಾರ್ಯಕ್ರಮ ನಿರ್ವಹಣೆ ಮಾಡಿದರು.

Related posts

ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಿದ ಖ್ಯಾತ ವಕೀಲ ರಾಜಶೇಖರ್ ಹಿಲಿಯಾರ್

Suddi Udaya

ಬಂದಾರು: ಮನೆ ಮೇಲೆ ಕುಸಿದು ಬಿದ್ದ ಧರೆ

Suddi Udaya

ಬೆಳಾಲು ಶ್ರೀ ಧ.ಮಂ. ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಸಾಧಕರಿಗೆ ಸನ್ಮಾನ

Suddi Udaya

ಅಳದಂಗಡಿ: ಪಾದಚಾರಿಗೆ ಕಾರು ಡಿಕ್ಕಿ:

Suddi Udaya

ಅರಸಿನಮಕ್ಕಿ: ಬರಮೇಲು ನಿವಾಸಿ ನಾಗಮ್ಮ ನಿಧನ

Suddi Udaya

ಎಸ್.ಡಿ.ಎಂ ಸ್ವಾಯತ್ತ ಕಾಲೇಜು : ವಾರ್ಷಿಕ ಕ್ರೀಡಾಕೂಟ

Suddi Udaya
error: Content is protected !!