March 7, 2026
ಅಪರಾಧ ಸುದ್ದಿ

ಅಂಡಿಂಜೆ ಶ್ರೀವಿನಾಯಕ ಶ್ರೀರಾಮ ಭಜನಾ ಮಂದಿರದ ಬಳಿ ಸ್ಕಿಡ್ ಆಗಿ ಮಗುಚಿ ಬಿದ್ದ ದ್ವಿಚಕ್ರ ವಾಹನ : ಸವಾರ ಕೊಕ್ರಾಡಿ ಗ್ರಾಮದ ಸುಂದರ ಶೆಟ್ಟಿ ಮೃತ್ಯು

ಅಂಡಿಂಜೆ: ಅಂಡಿಂಜೆ ಗ್ರಾಮದ ಶ್ರೀವಿನಾಯಕ ಶ್ರೀರಾಮ ಭಜನಾ ಮಂದಿರದ ಬಳಿ ದ್ವಿಚಕ್ರ ಸ್ಕಿಡ್ ಆಗಿ ಮಗುಚಿ ಬಿದ್ದು ಸವಾರ ಸಾವನ್ನಪ್ಪಿದ ಘಟನೆ ಡಿ.28 ರಂದು ವರದಿಯಾಗಿದೆ.

ಕೊಕ್ರಾಡಿ ಗ್ರಾಮದಆದರ್ಶ ನಗರ ನಿವಾಸಿ ಸುಂದರ ಶೆಟ್ಟಿ, (66 ವರ್ಷ) ಈ ದುಘ೯ಟನೆಯಲ್ಲಿ ಮೃತಪಟ್ಟವರು.

ಘಟನೆ ಹಿನ್ನೆಲೆ:
ಡಿ. 28ರಂದು ಸಂಜೆ ಸುಮಾರು 5:45ಕ್ಕೆ ಅಂಡಿಂಜೆ ಗ್ರಾಮದ ಶ್ರೀವಿನಾಯಕ ಶ್ರೀರಾಮ ಭಜನಾ ಮಂದಿರದ ಬಳಿ ವೇಣೂರು- ನಾರಾವಿ ಸಾರ್ವಜನಿಕ ಡಾಮಾರು ರಸ್ತೆಯ ಸ್ವಲ್ಪ ಇಳಿಜಾರು ರಸ್ತೆಯಲ್ಲಿ ದ್ವಿಚಕ್ರ ವಾಹನವನ್ನು ಅದರ ಸವಾರ ಸುಂದರ ಶೆಟ್ಟಿ ಎಂಬವರು ವೇಣೂರು ಕಡೆಯಿಂದ ನಾರಾವಿ ಕಡೆಗೆ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿದ ಪರಿಣಾಮ ಚಾಲಕನ ಹತೋಟಿ ತಪ್ಪಿ ದ್ವಿಚಕ್ರ ವಾಹನ ಸ್ಕಿಡ್ ಆಗಿ ಸವಾರ ಸುಂದರ ಶೆಟ್ಟಿ ವಾಹನದೊಂದಿಗೆ ರಸ್ತೆಗೆ ಎಸೆಯಲ್ಪಟ್ಟು ತಲೆಗೆ ತೀವ್ರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವರನ್ನು ರೋಶನ್ ಮತ್ತಿತರರು ಸೇರಿ ಚಿಕಿತ್ಸೆಯ ಬಗ್ಗೆ ಮೂಡಬಿದ್ರೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅವರು ದಾರಿ ಮಧ್ಯೆ ಮೃತ ಪಟ್ಟರೆನ್ನಲಾಗಿದೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಗೇರುಕಟ್ಟೆ: ಸುಣ್ಣಲಡ್ಡದಲ್ಲಿ ತಡರಾತ್ರಿ ಮನೆಗೆ ನುಗ್ಗಿ ನಗದು ಕಳ್ಳತನ: ಬೆಳ್ತಂಗಡಿ ಪೊಲೀಸರು, ಶ್ವಾನದಳ ಮತ್ತು ಬೆರಳಚ್ಚು ತಜ್ಞರಿಂದ ತನಿಖೆ

Suddi Udaya

ಜೈನ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಹಾಗೂ ಜೈನ ಜಾತಿ ಮತ್ತು ಧರ್ಮಕ್ಕೆ ಅಪಮಾನ ಆರೋಪ ಮಹೇಶ್ ಶೆಟ್ಟಿ ತಿಮರೋಡಿ ಹಾಗೂರಾಜು ಶೆಟ್ಟಿ ಎಂಬವರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು

Suddi Udaya

ಪುದುವೆಟ್ಟು: ಅಕ್ರಮ ಮರಳು ಅಡ್ಡೆ‌ಗೆ ಧರ್ಮಸ್ಥಳ ಪೊಲೀಸ್ ದಾಳಿ

Suddi Udaya

ಸಂಬೋಳ್ಯದ ಸುಮಂತ್ ಸಾವಿನ ಬಗ್ಗೆ ವದಂತಿಗಳಿಗೆ ಕಿವಿಗೊಡಬೇಡಿ: ದ.ಕ. ಜಿಲ್ಲಾ ಎಸ್ಪಿ ಡಾ.ಅರುಣ್ ಕೆ ಪತ್ರಿಕಾ ಹೇಳಿಕೆ

Suddi Udaya

ಸರಕಾರಿ ಬಸ್ಸಿನ ಗ್ಲಾಸಿಗೆ ಕಲ್ಲು ಎಸೆತ: ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಬೆಳಾಲು: ಸೊಸೈಟಿ ವಂಚನೆ ಪ್ರಕರಣ ಆರೋಪಿ ಸದಾಶಿವ ಬಂಧನ- ಕೋರ್ಟ್ ಗೆ ಹಾಜರು ಪಡಿಸಿದ ಪೊಲೀಸರು

Suddi Udaya
error: Content is protected !!