24.1 C
ಪುತ್ತೂರು, ಬೆಳ್ತಂಗಡಿ
September 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಗೇರುಕಟ್ಟೆ: ಸುಣ್ಣಲಡ್ಡದಲ್ಲಿ ತಡರಾತ್ರಿ ಮನೆಗೆ ನುಗ್ಗಿ ನಗದು ಕಳ್ಳತನ: ಬೆಳ್ತಂಗಡಿ ಪೊಲೀಸರು, ಶ್ವಾನದಳ ಮತ್ತು ಬೆರಳಚ್ಚು ತಜ್ಞರಿಂದ ತನಿಖೆ

ಕಳಿಯ : ಇಲ್ಲಿಯ ಸುಣ್ಣಲಡ್ಡ ಎಂಬಲ್ಲಿ ಆಸಿಫ್ ಎಂಬವರ ಮನೆಗೆ ಜೂ.09 ರಂದು ತಡರಾತ್ರಿ ಯಾರೋ ಕಳ್ಳರು ನುಗ್ಗಿ ಮಲಗಿದ್ದ ಕೋಣೆಯಲ್ಲಿದ್ದ ಗೋದ್ರೆಜ್ ನಲ್ಲಿಟ್ಟಿದ್ದ ದಾಖಲೆ ಪತ್ರ, ಬಟ್ಟೆ ಬರೆಗಳನ್ನು ಚೆಲ್ಲಾಪಿಲ್ಲಿ ಗೊಳಿಸಿ ನಗದು ಕಳ್ಳತನ ನಡೆಸಿದ್ದಾರೆ.

ಗೋದ್ರೇಜ್ ನ ಬಾಗಿಲು ತೆರೆಯುವ ಶಬ್ದ ಕೇಳಿ ಅಲ್ಲೇ ಮಲಗಿದ್ದ ಆಸಿಫ್ ಗೆ ಎಚ್ಚರವಾದಾಗ ಕಳ್ಳನು ಹಿಂದಿನ ಬಾಗಿಲಿನಿಂದ ಓಡಿ ಪರಾರಿಯಾಗಿದ್ದಾನೆ. ತಕ್ಷಣ ಮನೆ ಮಾಲಿಕರು ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಕರೀಮ್ ಮತ್ತು ಅರ್ಶದ್ ರವರಿಗೆ ಮಾಹಿತಿ ನೀಡಿ ಅವರು ರಾತ್ರಿಯೇ ಬಂದು ಪೋಲಿಸರಿಗೆ ಮಾಹಿತಿ ನೀಡಿದರು. ಬೆಳ್ತಂಗಡಿ ಪೋಲಿಸರು ರಾತ್ರಿಯೇ ಬಂದು ಪರಿಶೀಲನೆ ನಡೆಸಿದರು. ಬೆಳಿಗ್ಗೆ ದೂರು ನೀಡಿ ಪ್ರಕರಣ ದಾಖಲಿಸಿದರು.ಇನ್ಸ್ ಪೆಕ್ಟರ್ ಸುಬ್ಬಾಪುರಮಠ ಬೇಟಿ ನೀಡಿ ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸಿದರು. ತನಿಖೆ ಮುಂದುವರೆಯುತ್ತಿದೆ.

Related posts

ಕ್ರೀಡಾ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್‌ಗೆ ‘ಬಸವಶ್ರೀ’ ರಾಜ್ಯ ಪ್ರಶಸ್ತಿ ಪ್ರದಾನ

Suddi Udaya

ಬಿಜೆಪಿ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ನೆರಿಯ ಗ್ರಾ.ಪಂ. ನ ಬಿಜೆಪಿ ಬೆಂಬಲಿತ ಸದಸ್ಯೆ ಮರಿಯಮ್ಮರವರು ಶಾಸಕ ಹರೀಶ್ ಪೂಂಜರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಮರು ಸೇರ್ಪಡೆ

Suddi Udaya

ಪುಂಜಾಲಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಸಮ್ಮೇಳನ 2025

Suddi Udaya

ವಿಶ್ವ ಹಿಂದೂ ಪರಿಷತ್ ಇಂದಬೆಟ್ಟು-ನಾವೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳ ಆಯ್ಕೆ

Suddi Udaya

‘ಗುರುಪೂರ್ಣಿಮೆ’ಯ ಮಹತ್ವ ಹಾಗೂ ಇತಿಹಾಸ

Suddi Udaya

ಡಿ.ಕೆ.ಆರ್. ಡಿ.ಎಸ್ ಬೆಳ್ತಂಗಡಿ ನೇತೃತ್ವದಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆ, ಕ್ಯಾನ್ಸರ್ ಜನಜಾಗೃತಿ ಅಭಿಯಾನ ಹಾಗೂ ಕ್ಯಾನ್ಸರ್ ರೋಗಿಗಳಿಗಾಗಿ ಧನ ಸಹಾಯ ಸಂಗ್ರಹಣಾ ಅಭಿಯಾನ

Suddi Udaya
error: Content is protected !!