ಬೆಳಾಲು ಗೌಡರ ಯಾನೆ ಒಕ್ಕಲಿಗರ ಗ್ರಾಮ ಸಮಿತಿ, ಯುವ ವೇದಿಕೆ ಮತ್ತು ಮಹಿಳಾ ವೇದಿಕೆಯ ವಾರ್ಷಿಕೋತ್ಸವವೂ ಡಿ.28 ರಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆ ಬೆಳಾಲಿನಲ್ಲಿ ನಡೆಯಿತು.

ವಾರ್ಷಿಕೋತ್ಸವದ ಉದ್ಘಾಟನೆಯನ್ನು ಸರಕಾರಿ ಪ್ರೌಢಶಾಲೆ ಪೆರ್ಲ ಬೈಪಾಡಿಯ ಮುಖ್ಯೋಪಾಧ್ಯಾಯರಾದ ಬಾಲಕೃಷ್ಣ ಗೌಡ ಕೊರಮೇರು ನೆರವೇರಿಸಿದರು.
ಮುಖ್ಯ ಅಭ್ಯಾಗತರಾಗಿ ವಿವೇಕಾನಂದ ಕಾಲೇಜು ಪುತ್ತೂರು ಇಲ್ಲಿಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯ . ಪಿ . ಆರ್. ನಿಡ್ಪಳ್ಳಿ ಯವರು ಮಾತನಾಡುತ್ತಾ ಗೌಡ ಸಮುದಾಯದ, ಸಂಸ್ಕೃತಿ, ಸಂಸ್ಕಾರದ ಬಗ್ಗೆ ಮನದಟ್ಟಾಗುವ ಹಾಗೆ ಮಾತನಾಡಿದರು.

ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಗೌರವಾಧ್ಯಕ್ಷ ಹೆಚ್. ಪದ್ಮ ಗೌಡ, ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಯುವ ವೇದಿಕೆಯ ಕಾರ್ಯದರ್ಶಿ ಸುರೇಶ್ ಗೌಡ ಕೌಡoಗೆ, ತಾಲೂಕು ಮಹಿಳಾ ವೇದಿಕೆಯ ಕಾರ್ಯದರ್ಶಿ ಲೀಲಾ ವೀರಣ್ಣ ಗೌಡ ಬೆಳಾಲು ಇವರು ಗೌಡ ಸಮುದಾಯದ ಜಾಗೃತಿಯ ಬಗ್ಗೆ ಮಾತನಾಡಿದರು. ಸಮಾರಂಭದ ಅಧ್ಯಕ್ಷ ಸ್ಥಾನವನ್ನು ಗ್ರಾಮ ಸಮಿತಿಯ ಅಧ್ಯಕ್ಷ ಧರ್ಮೇಂದ್ರ ಗೌಡ ಫುಚ್ಛೆಹಿತ್ತಿಲು ನಿರ್ವಹಿಸಿದರು ಹಾಗೂ ವೇದಿಕೆಯಲ್ಲಿ ನಿರ್ದೇಶಕರಾದ ಶ್ರೀಮತಿ ಉಷಾ, ಕಿನ್ಯಾಜೆ , ಗ್ರಾಮ ಸಮಿತಿಯ ಗೌರವಾಧ್ಯಕ್ಷ ವಿಜಯ ಗೌಡ ಸೌತೆ ಗದ್ದೆ,ಮಹಿಳಾ ವೇದಿಕೆಯ ಅಧ್ಯಕ್ಷೆ ಲತಾ ಕೇಶವ ಗೌಡ, ಗೌರವಧ್ಯಕ್ಷೆ ಕನ್ನಿಕಾ ಪದ್ಮಗೌಡ, ಹಾಗೂ ಊರ ಗೌಡರು ಮತ್ತು ಒತ್ತು ಗೌಡರುಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಅರಿಕೋಡಿಯ ಧರ್ಮದರ್ಶಿ ಹರೀಶ್ ಆರಿಕೋಡಿ ಇವರನ್ನು ಹಾಗೂ ಗ್ರಾಮದ ಎಂಟು ಜನ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಪ್ರತಿಭೆಗಳನ್ನು ಹಾಗೂ ಐದು ಜೊತೆ 80 ವರ್ಷ ಮೇಲ್ಪಟ್ಟ ದಂಪತಿಗಳನ್ನು ಸನ್ಮಾನಿಸಲಾಯಿತು ಮತ್ತು 19 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು ಹಾಗೂ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು ಮತ್ತು ದಾನಿಗಳನ್ನು ಗುರುತಿಸಲಾಯಿತು. ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಗೌಡ ಯುವ ವೇದಿಕೆ ಅಧ್ಯಕ್ಷ ಚಂದ್ರಕಾಂತ್ ನಿಡ್ದಾಜೆ, ತಾಲೂಕಿನ ನಿರ್ದೇಶಕರಾದ ಆನಂದ ಗೌಡ ಉಜಿರೆ, ಉಜಿರೆ ಗ್ರಾಮ ಸಮಿತಿಯ ಅಧ್ಯಕ್ಷ ಶೇಖರ ಗೌಡ ಉಜಿರೆ ಉಪಸ್ಥಿತರಿದ್ದರು.
ಪ್ರಾರ್ಥನೆಯನ್ನು ಮಹಿಳಾ ವೇದಿಕೆ ಗೌರವ ಅಧ್ಯಕ್ಷರಾದ ಕನ್ನಿಕಾ ಪದ್ಮ ಗೌಡ ಮತ್ತು ಬಳಗದವರು ಯುವ ವೇದಿಕೆಯ, ಗೌರವಾಧ್ಯಕ್ಷ ಉಮೇಶ್ ಗೌಡ,.ಜಿ. ಯಂ.ಸ್ವಾಗತಿಸಿ, ವಾರ್ಷಿಕ ವರದಿಯನ್ನು ಮಹಿಳಾ ವೇದಿಕೆಯ ಕಾರ್ಯದರ್ಶಿ ಜಯಶ್ರೀ ಕಾಡoಡ, ಸನ್ಮಾನಿತರ ಪಟ್ಟಿಯನ್ನು ವಿವಿಧ ಪದಾಧಿಕಾರಿಗಳು, ಅಂಗನವಾಡಿ ಪುಟಾಣಿ ಮಕ್ಕಳಿಗೆ ರಸಪ್ರಶ್ನೆ ಹಾಗೂ ಕೌತುಕ ಪ್ರಶ್ನೆಯನ್ನು ಯುವ ವೇದಿಕೆ ಉಪಾಧ್ಯಕ್ಷ ದಿನೇಶ್ ಉರೆಜ್ಜ, ಬಹುಮಾನದ ಪಟ್ಟಿಯನ್ನು ಮಹಿಳಾ ವೇದಿಕೆಯ ಸದಸ್ಯರಾದ ಡಾ. ಶೀಲಾವತಿ ಧರ್ಮೇಂದ್ರ ಕುಮಾರ್, ಸಾಂಸ್ಕೃತಿಕ ಕಾರ್ಯಕ್ರಮವನ್ನು ಅಂಗನವಾಡಿ ಶಿಕ್ಷಕಿ ಲೋಕಮ್ಮ, ಯುವ ವೇದಿಕೆಯ ಅಧ್ಯಕ್ಷ ಸಂಜೀವ ಕಾಡಂಡ ಧನ್ಯವಾದವಿತ್ತರು. ವಾಣಿ ಕಾಲೇಜಿನ ಉಪನ್ಯಾಸಕ ಬೆಳ್ಳಿಯಪ್ಪ ಗೌಡ ಮತ್ತು ಕುಮಾರಿ ಶ್ರೇಯ ಕಾರ್ಯಕ್ರಮ ನಿರೂಪಿಸಿದರು.











