26.5 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಎಸ್ ಡಿ ಎಂ ಕಾಲೇಜಿನ ಸ್ಥಾಪಕ ಪ್ರಾಚಾರ್ಯ ಪ್ರೊ.ಎಸ್.ಪ್ರಭಾಕರ್ ಅವರಿಗೆ ನುಡಿನಮನ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆಯ ಸ್ಥಾಪಕ ಪ್ರಾಚಾರ್ಯರು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ, ಪ್ರೊ. ಎಸ್. ಪ್ರಭಾಕರ್ ಅವರಿಗೆ ನುಡಿ ನಮನ ಕಾರ್ಯಕ್ರಮ
ಜ.1ರಂದು ಶ್ರೀ ಸಿದ್ಧವನ ಗುರುಕುಲ ಉಜಿರೆಯಲ್ಲಿ ಜರುಗಿತು.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಅವರು ಮಾತನಾಡಿ, ಸರ್ಕಾರಿ ಉದ್ಯೋಗದಲ್ಲಿ ಇದ್ದ ಪ್ರಭಾಕರ್ ಅವರು ಉಜಿರೆ ಕಾಲೇಜು ಆರಂಭಿಸುವಾಗ ಸ್ಥಾಪಕ ಪ್ರಾಚಾರ್ಯರಾಗಿ ಕಾಲೇಜಿನ ಬೆಳವಣಿಗೆಗೆ ಶ್ರಮಿಸಿದ್ದರು. ವಜ್ರ ಕುಮಾರ್ ಮತ್ತು ಪ್ರೊ. ಪ್ರಭಾಕರ್ ನನ್ನ ಎರಡು ಕಣ್ಣುಗಳು ಇದ್ದಂತೆ. ಯಾವುದೇ ಯೋಜನೆ ಆರಂಭಿಸಿದರೂ ಅದನ್ನು ಬೇಡ ಎಂದವರಲ್ಲ ಎಂದರು. ಧಮ೯ಸ್ಥಳ ಲಕ್ಷದೀಪೋತ್ಸವ ಕಾಯ೯ಕ್ರಮದಲ್ಲಿ 2022ರವರೆಗೆ ಕಾಯ೯ದಶಿ೯ಯಾಗಿ ಸಮ್ಮೇಳನದ ಯಶಸ್ಸಿಗೆ ಸಹಕರಿಸಿದರು. ಅವರಲ್ಲಿ ಆತ್ಮವಿಶ್ವಾಸ ಮತ್ತು ಧೈರ್ಯ ಇತ್ತು. ಅವರು ಅತ್ಯಂತ ಶಿಸ್ತಿನ ವ್ಯಕ್ತಿ, ಆಹಾರದ ಬಗ್ಗೆ ಹೆಚ್ಚಿನ ಜಾಗೃತಿ ಹೊಂದಿದ್ದರು ಎಂದರು.


ಶ್ರೀಮತಿ ಹೇಮಾವತಿ ವೀ.ಹೆಗ್ಗಡೆ, ಡಿ.ಹಷೇಂದ್ರ ಕುಮಾರ್, ಡಿ. ಸುರೇಂದ್ರ ಕುಮಾರ್, ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಕಾಯ೯ದಶಿ೯ ಸತೀಶ್ಚಂದ್ರ ಸುಯ೯ಗುತ್ತು, ಉಜಿರೆ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶರತ್ ಕೃಷ್ಣ ಪಡ್ವೆಟ್ನಾಯ, ಸುಪ್ರೀಯ ಹರ್ಷೇಂದ್ರ ಕುಮಾರ್, ಶ್ರದ್ಧಾ ಅಮಿತ್ ಅವರು ಪ್ರೊ. ಪ್ರಭಾಕರ್ ಅವರಿಗೆ ನುಡಿನಮನ ಸಲ್ಲಿಸಿದರು. ಎಸ್ ಡಿ ಎಂ ಕಾಲೇಜಿನ ಉಪನ್ಯಾಸಕ ದಿವಾ ಕೊಕ್ಕಡ ಕಾಯ೯ಕ್ರಮ ನಿರೂಪಿಸಿದರು.

Related posts

ಮಡಂತ್ಯಾರು ಸಾಲಿಯಾನ್ ಚಿಕನ್ ಸೆಂಟರ್ ಮಾಲಕ ಅರುಣ್ ಸಾಲಿಯಾನ್ ನಿಧನ

Suddi Udaya

ಬೆಳ್ತಂಗಡಿ ಮಿಷ್‌ಮಷ್ ಫ್ಯಾನ್ಸಿ & ಗಿಫ್ಟ್ ಸೆಂಟರ್‌ನಲ್ಲಿ ಗ್ರಾಹಕರಿಗೆ ಹೊಸ ವರುಷದ ಪ್ರಯುಕ್ತ ಲಕ್ಕಿ ಡ್ರಾ ಕಾರ್ಯಕ್ರಮ

Suddi Udaya

ಬೋಂಟ್ರೊಟ್ಟುಗುತ್ತು, ಶ್ರೀ ಧರ್ಮರಸು ದೈವ ಕೊಡಮಣಿತ್ತಾಯ ಮತ್ತು ಸಪರಿವಾರ ದೈವಗಳ ಸೇವಾ ಟ್ರಸ್ಟ್ ಮತ್ತು ಕಲಶಾಭಿಷೇಕ ಸಮಿತಿ ಮಹಾ ಚಂಡಿಕಾಯಾಗ ಮತ್ತು ದೈವಗಳ ಪುನರ್ ಪ್ರತಿಷ್ಠ ಕಲಶಾಭಿಷೇಕ ಮತ್ತು ನೇಮೋತ್ಸವ ಅಂಗವಾಗಿ ಕ್ಷೇತ್ರದಲ್ಲಿ ಚಪ್ಪರ ಮುಹೂರ್ತ

Suddi Udaya

ಟ್ರಯಥ್ಲಾನ್ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ ಶಿಪ್‌: ಪಡಂಗಡಿಯ ಕುವರಿ ಅದ್ವಿಕಾ ಕೆಪಿ ಯವರಿಗೆ ಕಂಚಿನ ಪ್ರಶಸ್ತಿ

Suddi Udaya

ನಾಲ್ಕೂರು : ಕಾಂಗ್ರೆಸ್ ಕಾರ್ಯಕರ್ತರು ಹಲವು ಮಂದಿ ಬಿಜೆಪಿ ಸೇರ್ಪಡೆ

Suddi Udaya

ಆರಂಬೋಡಿ: ಎಲ್ಲಾ ಸರಕಾರಿ ಹಿರಿಯ, ಕಿರಿಯ, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಮನೋಜ್ ಶೆಟ್ಟಿ ಐತ್ತೇರಿ ರವರಿಂದ ಉಚಿತ ನೋಟ್‌ಪುಸ್ತಕ ವಿತರಣೆ

Suddi Udaya
error: Content is protected !!