28.3 C
ಪುತ್ತೂರು, ಬೆಳ್ತಂಗಡಿ
September 21, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ನಿಡ್ಲೆ ಶೀರೂರು ಪರ್ಯಾಯ ಸ್ವಾಗತ ಸಮಿತಿಯಿಂದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಗೆ ಹುಟ್ಟೂರ ಗೌರವಾರ್ಪಣೆ

ನಿಡ್ಲೆ : ಉಡುಪಿ ಅನ್ನಬ್ರಹ್ಮ ಶ್ರೀ ಕೃಷ್ಣದೇವರ ಸನ್ನಿಧಿಯಲ್ಲಿ ಮತ್ತೆ ಪರ್ಯಾಯ ಮಹೋತ್ಸವ ಸಂಭ್ರಮ. ಶೀರೂರು ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಪ್ರಥಮ ಬಾರಿಗೆ ಸರ್ವಜ್ಞ ಪೀಠಾರೋಹಣ ಮಾಡಲಿದ್ದು, ಮುಂದಿನ ಎರಡು ವರ್ಷಗಳ ಕಾಲ ಶ್ರೀ ಕೃಷ್ಣ ದೇವರ ಪೂಜಾ ದೀಕ್ಷೆಯನ್ನು ಸ್ವೀಕರಿಸಲಿದ್ದಾರೆ. ಆ ಪ್ರಯುಕ್ತ ಶ್ರೀಪಾದರು ದೇಶ – ಗ್ರಾಮ ಪರ್ಯಟನೆಯನ್ನು ಕೈಗೊಂಡಿರುತ್ತಾರೆ.

ಶ್ರೀಪಾದರ ಪೂರ್ವಾಶ್ರಮ ನಿಡ್ಲೆ ಗ್ರಾಮದ ಮಚ್ಚಳೆ ಮನೆತನದವರಾಗಿದ್ದು, ಇವರು ಸರ್ವಜ್ಞ ಪೀಠವನ್ನು ಅಲಂಕರಿಸಲಿರುವುದರಿಂದ ದೇಶ-ಗ್ರಾಮ ಪರ್ಯಟನೆ ನಿಮಿತ್ತ ನಿಡ್ಲೆ ಗ್ರಾಮಕ್ಕೆ ಜ. 1ರಂದು ಆಗಮಿಸಿದ್ದು, ಪೂಜ್ಯ ಶ್ರೀಪಾದರನ್ನು ನಿಡ್ಲೆ ಎಸ್‌ಎಲ್ ವಿ ಪೆಟ್ರೋಲ್ ಪಂಪಿನ ಹತ್ತಿರದಿಂದ ಚೆಂಡೆ, ಪೂರ್ಣಕುಂಭ ಕಲಶದೊಂದಿಗೆ ಭವ್ಯ ಮೆರವಣಿಗೆಯೊಂದಿಗೆ ಕುದ್ರಾಯ ಆದಿತ್ಯ ವ್ಯೂ ಹೋಟೆಲ್ ಪಂಚವಟಿ ಸಭಾಂಗಣಕ್ಕೆ ಬರಮಾಡಿಕೊಳ್ಳಲಾಯಿತು.

ಶ್ರೀಪಾದರಿಗೆ ಸಭಾಂಗಣದಲ್ಲಿ ಶೀರೂರು ಪರ್ಯಾಯ ಸ್ವಾಗತ ಸಮಿತಿ, ವಿವಿಧ ಸಂಘಟನೆಗಳಿಂದ ಹುಟ್ಟೂರ ಗೌರವಾರ್ಪಣೆ, ಪಾದಪೂಜೆ, ಪಾದಕಾಣಿಕೆ, ಶ್ರೀಪಾದರಿಂದ ದೇವರಿಗೆ ಪೂಜೆ ನಡೆಯಿತು.

ಶ್ರೀಗಳಿಂದ ಆಶೀರ್ವಚನ ನಡೆಯಿತು. ದಿವಾನ ಉದಯ ಕುಮಾರ್ ಪರ್ಯಾಯದ ಬಗ್ಗೆ ಮಾಹಿತಿ ನೀಡಿದರು. ವೇ. ಮೂ. ರಾಘವೇಂದ್ರ ಉಪಾಧ್ಯಾಯರು, ಪ್ರವೀಣ್ ಹೆಬ್ಬಾರ್ ಸಹಕರಿಸಿದರು.

ಮೆರವಣಿಗೆಯಲ್ಲಿ ವಿಧಾನ ಪರಿಷತ್ ಶಾಸಕರಾದ ಪ್ರತಾಪ್ ಸಿಂಹ ನಾಯಕ್ ಪಾಲ್ಗೊಂಡಿದ್ದರು. ಡೀಕಯ್ಯ ಬರೆಂಗಾಯರ ಕೋಣಗಳು ಪಾಲ್ಗೊಂಡಿತ್ತು.

ಕಾರ್ಯಕ್ರಮದಲ್ಲಿ ಶೀರೂರು ಪರ್ಯಾಯ ಸ್ವಾಗತ ಸಮಿತಿ ನಿಡ್ಲೆ ಯ ಅಧ್ಯಕ್ಷರು, ಸದಸ್ಯರು ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಗ್ರಾಮಸ್ಥರು, ಮಚ್ಚಳೆ ಮನೆಯವರು ಉಪಸ್ಥಿತರಿದ್ದರು.

ಚಂದ್ರಶೇಖರ್ ಕಜೆ ಕಾರ್ಯಕ್ರಮ ನಿರೂಪಿಸಿದರು.

Related posts

ಮೂಡುಕೋಡಿಯಲ್ಲಿ ವನಮಹೋತ್ಸವ ಆಚರಣೆ ಹಾಗೂ ಪ. ಜಾತಿ ಪ. ಪಂಗಡಗಳ ಮನೆಯವರಿಗೆ ಗೃಹೋಪಯೋಗಿ ವಸ್ತುಗಳ ವಿತರಣೆ

Suddi Udaya

ಮಚ್ಚಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ: ರೂ.59 ಲಕ್ಷ ಲಾಭ, ಶೇ.15 ಡಿವಿಡೆಂಟ್ ಘೋಷಣೆ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ-ದುರ್ಗಾದೇವಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಉಜ್ವಲ ಮತ್ತು ಭವಿಷ್ಯ ಮಕ್ಕಳ ಸಮಿತಿ ರಚನೆ

Suddi Udaya

ಕಳೆoಜ: ನಾಟಿ ವೈದ್ಯೆ ಕಮಲ ನಿಧನ

Suddi Udaya

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ: ಅಂಗನವಾಡಿ ಕೇಂದ್ರಗಳ ಕಟ್ಟಡಗಳು ಶಿಥಿಲಾವ್ಯಸ್ಥೆಯಲ್ಲಿ ಇರುವುದರಿಂದ ನೂತನ ಕಟ್ಟಡ ರಚನೆಗೆ ಮನವಿ

Suddi Udaya

ಡಿ.2: ಎಕ್ಸೆಲ್ ವಿದ್ಯಾಸಂಸ್ಥೆಯಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ

Suddi Udaya
error: Content is protected !!