March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಾಳ ವರ್ಷಾವಧಿ ಜಾತ್ರಾ ಮಹೋತ್ಸವಕ್ಕೆ ಚಪ್ಪರ ಮುಹೂರ್ತ

ಕಳಿಯ : ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವದ ಪೂರ್ವಭಾವಿಯಾಗಿ ಚಪ್ಪರ ಮುಹೂರ್ತ ಕಾರ್ಯಕ್ರಮ ಜ.2 ರಂದು ಪ್ರಾತ:ಕಾಲದಲ್ಲಿ ಧನು ಪೂಜೆ ಬಳಿಕ ನೆರವೇರಿತು.

ದೇವಸ್ಥಾನದ ಪ್ರಧಾನ ಅರ್ಚಕರಾದ ವೇ.ಮೂ.ರಾಘವೇಂದ್ರ ಅಸ್ರಣ್ಣರ ವೈದಿಕ, ವಿಧಿ ವಿಧಾನಗಳೊಂದಿಗೆ ನೆರವೇರಿತು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್, ಸದಸ್ಯರಾದ ಶರತ್ ಕುಮಾರ್, ಹರೀಶ್ ಗೌಡ ಕೆ, ನೀನಾ ಕುಮಾರ್, ಅರುಣ್ ಶೆಟ್ಟಿ, ರೀತಾ, ಮೋಹಿನಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ, ಕಾರ್ಯದರ್ಶಿ ರಾಜೇಶ್ ಪೆಂರ್ಬುಡ, ಭಜನಾ ಮಂಡಳಿ ಅಧ್ಯಕ್ಷ ಗಣೇಶ ನಾಳ, ಶ್ರೀ ದುರ್ಗಾ ಮಾತೃ ಮಂಡಳಿ ಅಧ್ಯಕ್ಷರಾದ ಮಮತ ವಿ. ಅಳ್ವ, ಕಾರ್ಯದರ್ಶಿ ವಿನೋದ, ಚಪ್ಪರ ಸಮಿತಿ ಸದಸ್ಯರಾದ ಪೂವಪ್ಪ ಶೆಟ್ಟಿ, ಉಮಾನಾಥ ಶೆಟ್ಟಿ,ವಿಜಯ ಗೌಡ ಕೆ, ಸುಧಾಕರ ಮಜಲು, ಜಾತ್ರಾ ಮಹೋತ್ಸವದ ವಿವಿಧ ಸಮಿತಿ ಸದಸ್ಯರು, ವ್ಯವಸ್ಥಾಪನ ಸಮಿತಿಯ ಮಾಜಿ ಸದಸ್ಯರು, ಪದಾಧಿಕಾರಿಗಳು ದೇವಸ್ಥಾನದ ಸಿಬ್ಬಂದಿಗಳು, ವಿವಿಧ ಸಂಘ ಸಂಸ್ಥೆಯ ಸದಸ್ಯರು, ಊರ ಪರವೂರ ಭಕ್ತಾಭಿಮಾನಿಗಳು ದೇವತಾ ಕಾರ್ಯದಲ್ಲಿ ಕೈಜೋಡಿಸಿದರು.


ಭಕ್ತರ ಸಂಪೂರ್ಣ ಸಹಕಾರ: ಶ್ರೀ ಕ್ಷೇತ್ರದಲ್ಲಿ ನಡೆಯುವಂತಹ ಜಾತ್ರಾ ಮಹೋತ್ಸವದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತರು ಸಂಪೂರ್ಣ ಸಹಕಾರವನ್ನು ನೀಡುವಂತೆ ನಾಳ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ
ಬಿ.ಹರೀಶ್ ಕುಮಾರ್ ವಿನಂತಿಸಿದ್ದಾರೆ.

Related posts

ಮಾ.30 ರಂದು ವೇಣೂರು-ಪೆರ್ಮುಡ ಸೂರ್ಯ- ಚಂದ್ರ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ

Suddi Udaya

ಪೆರ್ಲ-ಬೈಪಾಡಿ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಸಮಿತಿಯ ಸಮಾಲೋಚನಾ ಸಭೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಿಜೆಪಿ ಯುವಮೋರ್ಚಾ ರಾಜ್ಯಾಧ್ಯಕ್ಷ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜ್ ಭೇಟಿ

Suddi Udaya

ಕಳೆಂಜ: ಶಿಬರಾಜೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ, ಪರಪ್ಪು ಸಮೀಪ ಗುಡ್ಡ ಕುಸಿತ

Suddi Udaya

ಕೊಯ್ಯೂರು- ಗೇರುಕಟ್ಟೆ ಮೂಲಕ ಬೆಳ್ತಂಗಡಿಗೆ ಬಸ್ಸು ಸೌಕರ್ಯಕ್ಕೆ ಮನವಿ

Suddi Udaya

ಬೆದ್ರಬೆಟ್ಟು ಅರಿಫಾಯ್ಯಾ ಜುಮಾ ಮಸೀದಿಯಲ್ಲಿ ಸಂಭ್ರಮದ ಈದುಲ್‌ ಅಝಾ ಆಚರಣೆ

Suddi Udaya
error: Content is protected !!