38.6 C
ಪುತ್ತೂರು, ಬೆಳ್ತಂಗಡಿ
March 6, 2026
ಅಭಿನಂದನೆಗ್ರಾಮಾಂತರ ಸುದ್ದಿಜಿಲ್ಲಾ ಸುದ್ದಿತಾಲೂಕು ಸುದ್ದಿಧಾರ್ಮಿಕಪ್ರಮುಖ ಸುದ್ದಿಬೆಳ್ತಂಗಡಿವರದಿ

ಶ್ರೀ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಗೆ ಉಜಿರೆಯಲ್ಲಿ ಭವ್ಯ ಸ್ವಾಗತ: ಶ್ರೀಗಳಿಂದ ಜನಾರ್ದನ ದೇವರ ದರ್ಶನ,ಸ್ವಾಮೀಜಿಯವರಿಗೆ ಪೌರ ಸನ್ಮಾನ: ಕೇರಳ ಶೈಲಿಯ ಚಂಡೆ ವಾದನ, ವಯೊಲಿನ್, 22 ತಂಡಗಳಿಂದ ಭಜನೆ, ಸ್ಯಾಕ್ಸೋಫೋನ್ ವಾದನದೊಂದಿಗೆ ಮೆರವಣಿಗೆ

ಉಜಿರೆ:ಉಡುಪಿಯಲ್ಲಿ ಸರ್ವಜ್ಞ ಪೀಠಾರೋಹಣ ಮಾಡಲಿರುವ ಮೂಲತಃ ಪೂರ್ವಾಶ್ರಮದಲ್ಲಿ ನಿಡ್ಲೆ ನಿವಾಸಿಯಾದ ಶೀರೂರು ಮಠದ ಶ್ರೀ ವೇದವರ್ಧನತೀರ್ಥ ಶ್ರೀಪಾದ ಜ.2ರಂದು ಉಜಿರೆಗೆ ಆಗಮಿಸಿದಾಗ ಅವರನ್ನು ಬೆಳಾಲು ಕ್ರಾಸ್ ಬಳಿ ಸ್ವಾಗತಿಸಲಾಯಿತು.

ಬೆಳಾಲು ಕ್ರಾಸ್ ನಿಂದ ಸ್ವಾಮೀಜಿಯವರನ್ನು ಉಜಿರೆ ಶ್ರೀ ಜನಾರ್ದನ ದೇವಸ್ಥಾನದತನಕ ಮೆರವಣಿಗೆಯಲ್ಲಿ ಕರೆತರಲಾಯಿತು.ವಸಂತ ಮಂಜಿತ್ತಾಯ,ಈಶ್ವರ ಪೆರ್ಲತ್ತಾಯ,ಸುಬ್ರಹ್ಮಣ್ಯ ಕಲ್ಲೂರಾಯ ಮತ್ತು ತಂಡದವರಿಂದ ವೇದ ಘೋಷ ನೆರವೇರಿಸಿದರು.

ಶಾಸಕ ಹರೀಶ್ ಪೂಂಜ,ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್,ಎಸ್ ಸಿ ಡಿ ಸಿಸಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ,ವಿಹಿಂಪ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ,ಪೂರನ್ ವರ್ಮ,ಅವಿನಾಶ್ ಅಗ್ರಿಲೀಫ್,ಉದ್ಯಮಿಗಳಾದ ಮೋಹನ್ ಕುಮಾರ್, ರಾಜೇಶ್ ಪೈ,ಉಜಿರೆ ಗ್ರಾಪಂ ಅಧ್ಯಕ್ಷೆ ಉಷಾ ಕಿರಣ್ ಕಾರಂತ್,ಉಪಾಧ್ಯಕ್ಷ ರವಿ ಬರೆಮೇಲು,ತಾಲೂಕು ಶಿವಳ್ಳಿ ಬ್ರಾಹ್ಮಣ ಸಭಾ ಅಧ್ಯಕ್ಷ ರಾಜಪ್ರಸಾದ್ ಪೋಳ್ನಾಯ,ವಾಗ್ಮಿ ಡಾ.ಪ್ರದೀಪ್ ನಾವೂರು,ಬಿಜೆಪಿ ಮಂಡಲ‌ ಅಧ್ಯಕ್ಷ ಶ್ರೀನಿವಾಸ್ ರಾವ್,ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ,ಪ್ರಶಾಂತ್ ಪಾರೆಂಕಿ,ಪ್ರಮುಖರಾದ ಪದ್ಮನಾಭ ಶೆಟ್ಟಿಗಾರ್ ಪದ್ಮಶ್ರೀ, ಅರವಿಂದ ಕಾರಂತ,ರವಿ ಚಕ್ಕಿತ್ತಾಯ,ರವಿಕುಮಾರ್ ಭಟ್,ವಿದ್ಯಾ ಕುಮಾರ್ ಕಾಂಚೋಡು,ರವೀಂದ್ರ ಶೆಟ್ಟಿ,ಕೆ.ವಿ.ಶ್ರೀಧರ,ಜಯಪ್ರಕಾಶ್ ಶೆಟ್ಟಿ,ಪ್ರಶಾಂತ್ ಜೈನ್,ರಾಘವೇಂದ್ರ ಬೈಪಾಡಿತ್ತಾಯ,ಹುಕಂರಾಮ್ ಪಟೇಲ್,ಲಕ್ಷ್ಮಣ ಸಫಲ್ಯ,ಪಾಂಡುರಂಗ ಬಾಳಿಗ,ಅರುಣ್ ಕುಮಾರ್ ದಿಶಾ,ಸೀತರಾಮ ಬೆಳಾಲ್,ಶಶಿಕಲಾ ಡಿ, ಹಾಗೂಮತ್ತಿತರರು ಉಪಸ್ಥಿತರಿದ್ದರು.

ಕೇರಳ ಶೈಲಿಯ ಚಂಡೆ ವಾದನ, ವಯೊಲಿನ್, 22 ತಂಡಗಳಿಂದ ಭಜನೆ, ಸ್ಯಾಕ್ಸೋಫೋನ್ ವಾದನದೊಂದಿಗೆ ಮೆರವಣಿಗೆ ಸಾಗಿ ಬಂತು.ದೇವಸ್ಥಾನದ ದ್ವಾರದ ಬಳಿ ಸ್ವಾಮೀಜಿಯವರನ್ನು ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಅವರ ನೇತೃತ್ವದಲ್ಲಿ ಸ್ವಾಗತಿಸಲಾಯಿತು.ಬಳಿಕ ಅವರು ಶ್ರೀ ಜನಾರ್ದನ ದೇವರ ದರ್ಶನ ಪಡೆದರು. ನಂತರ ಸ್ವಾಮೀಜಿಯವರಿಗೆ ಪೌರ ಸನ್ಮಾನ ನಡೆಯಿತು.

Related posts

ಬಾರ್ಯ ಪ್ರಾ.ಕೃ.ಪ. ಸಹಕಾರಿ ಸಂಘದ ನಿರ್ದೇಶಕರ ಚುನಾವಣೆಗೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

Suddi Udaya

ಎಕ್ಸೆಲ್ ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

Suddi Udaya

ಪದ್ಮುಂಜ: ನೀಲಯ ನಲ್ಕೆ ನಿಧನ

Suddi Udaya

ಚಾರ್ಮಾಡಿ ಘಾಟಿ ಅರಣ್ಯದಲ್ಲಿ ಬೆಂಕಿ

Suddi Udaya

ಬೆಳ್ತಂಗಡಿ: ತೋಟಗಾರಿಕಾ ಇಲಾಖೆಯಲ್ಲಿ ಜೇನು ಕೃಷಿ ತರಬೇತಿ-ಜೇನು ಪೆಟ್ಟಿಗೆ ವಿತರಣೆ

Suddi Udaya

ಕಳೆಂಜ ಲೋಲಾಕ್ಷರ ಮನೆಯನ್ನು ಅರಣ್ಯ ಇಲಾಖೆಯವರು ಕೆಡವಿದ ಪ್ರಕರಣ: ಬೆಂಗಳೂರು ಜನಪ್ರತಿನಿಧಿಗಳ ಕೋರ್ಟ್ ನಲ್ಲಿ ಹರೀಶ್ ಪೂಂಜ, ಪ್ರತಾಪಸಿಂಹ ನಾಯಕ್ ವಿರುದ್ಧ ದೋಷರೋಪ ಪಟ್ಟಿಸಲ್ಲಿಕೆ

Suddi Udaya
error: Content is protected !!