September 6, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಜ.6: ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪಲ್ಲವಿ ಜಿ. ಬೆಳ್ತಂಗಡಿಗೆ

ಬೆಳ್ತಂಗಡಿ: ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪಲ್ಲವಿ ಜಿ. ರವರು ಜ.5 ರಿಂದ 8ರವರೆಗೆ ದ.ಕ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಬೆಳ್ತಂಗಡಿಗೆ ಜನವರಿ 6 ರಂದು ಆಗಮಿಸಲಿದ್ದಾರೆ.

ಜನವರಿ 5 ರಂದು ರಾತ್ರಿ ಧರ್ಮಸ್ಥಳಕ್ಕೆ ಆಗಮಿಸಲಿರುವ ಅವರು ಜನವರಿ 6 ರಂದು ಬೆಳಗ್ಗೆ 10 ಘಂಟೆಗೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಸವಣಾಲು ಗ್ರಾಮದ ಹಿತ್ತಿಲಪೇಲ ಮಲೆಕುಡಿಯ ಸಮುದಾಯದ ಕಾಲನಿಗೆ ಭೇಟಿ ನೀಡಿ ಅಲ್ಲಿ ಜನರ ಕುಂದುಕೊರತೆಗಳನ್ನು ಆಲಿಸುತ್ತಾರೆ. 11 ಘಂಟೆಗೆ ಬೆಳ್ತಂಗಡಿ ನಗರದ ಮಂಜುನಾಥ ಕಲಾ ಭವನದ ಪಿನಾಕಿ ಸಭಾಂಗಣದಲ್ಲಿ ಪ.ಜಾತಿ/ಪಂಗಡಗಳ ಅಲೆಮಾರಿ ಬೈರ , ನಲಿಕೆ , ಪಂಬದ , ಮಲೆಕುಡಿಯ ಸಮುದಾಯಗಳ ಜನಸ್ಪಂದನ ಮತ್ತು ಕುಂದುಕೊರತೆಗಳ ಬಗ್ಗೆ ಸಭೆ ನಡೆಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ತಾಲೂಕಿನ ಬೈರ, ನಲಿಕೆ, ಪಂಬದ, ಮಲೆಕುಡಿಯ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಧನಂಜಯ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಉಜಿರೆ ಎಸ್‌.ಡಿ.ಎಂ ಪಾಲಿಟೆಕ್ನಿಕ್‌ ನಲ್ಲಿ ಮಹಿಳೆಯರ ಆರೋಗ್ಯ ಮತ್ತು ನೈರ್ಮಲ್ಯ ಜಾಗೃತಿ ಕಾರ್ಯಕ್ರಮ

Suddi Udaya

ಮುಂಡಾಜೆ ಬಂಟರ ಗ್ರಾಮ ಸಮಿತಿ ಮಹಾಸಭೆ

Suddi Udaya

ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ ಯಕ್ಷಗಾನ ಕೇಂದ್ರದ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ

Suddi Udaya

ಕುರಾಯ ಶ್ರೀ ಸದಾಶಿವ ದೇವರ ವಾರ್ಷಿಕ ಜಾತ್ರೋತ್ಸವ ಕಾರ್ಯಕ್ರಮ ಶಾಸಕ ಹರೀಶ್ ಪೂಂಜ ಭೇಟಿ

Suddi Udaya

ಶಾಸಕ ಹರೀಶ್ ಪೂಂಜಾ ರವರ ಇಂದಬೆಟ್ಟು ಜನಸ್ಪಂದನ ಕಾರ್ಯಕ್ರಮದ ಫಲಶೃತಿ: ಇಂದಬೆಟ್ಟು-ಗುರಿಪಳ್ಳ ರಸ್ತೆಯ ಬದಿಯ ಗಿಡಗಂಟಿಗಳ ತೆರವು ಕಾರ್ಯ

Suddi Udaya

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ 

Suddi Udaya
error: Content is protected !!