ಬೆಳ್ತಂಗಡಿ: ಧರ್ಮಸ್ಥಳ ವಿಭಾಗದ ಕೆ.ಎಸ್.ಆರ್.ಟಿ.ಸಿ ಬಸ್‌ಗಳ ಪ್ರಯಾಣ ದರವನ್ನು ಜನವರಿ 5 ರಿಂದ ಜಾರಿಗೆ ಬರುವಂತೆ ಶೇಕಡಾ 10 ರಿಂದ 15ರಷ್ಟು ಕಡಿತಗೊಳಿಸಲಾಗಿದೆ. ಧರ್ಮಸ್ಥಳ ಹಾಗೂ ಬೆಳ್ತಂಗಡಿಯಿಂದ ಸಂಚರಿಸುವ ನಾನ್ ಎಸಿ ಸ್ಲೀಪರ್, ಪಲ್ಲಕ್ಕಿ ಮತ್ತು ರಾಜಹಂಸ ಬಸ್‌ಗಳ ಹೊಸ ದರಗಳು ಇಲ್ಲಿವೆ. ಪ್ರಯಾಣಿಕರು ಇದರ ಸದುಪಯೋಗ ಪಡೆಯಲು ಕೋರಲಾಗಿದೆ.

ಪಲ್ಲಕ್ಕಿ: ಬೆಳ್ತಂಗಡಿ-ಬೆಂಗಳೂರು ದಿನ ದರ 928, ಆದಿತ್ಯವಾರ 961 ರೂ ಹಾಗೂ ಧರ್ಮಸ್ಥಳ-ಬೆಂಗಳೂರು ದಿನ ದರ 850, ಆದಿತ್ಯವಾರ 880 ರೂ.
ನಾನ್/ಎಸಿ ಸ್ಲೀಪರ್: ಧರ್ಮಸ್ಥಳ-ಬೆಂಗಳೂರು ದಿನ ದರ 600 ರೂ., ಆದಿತ್ಯವಾರ 654 ರೂ.
ರಾಜಹಂಸ: ಧರ್ಮಸ್ಥಳ–ಬೆಂಗಳೂರು, ಕುಕ್ಕೆಸುಬ್ರಹ್ಮಣ್ಯ-ಬೆಂಗಳೂರು ದಿನ ದರ 600 ರೂ, ಆದಿತ್ಯವಾರ 654 ರೂ. ದರಕ್ಕೆ ಇಳಿಸಲಾಗಿದೆ.
ಈ ಎಲ್ಲಾ ಬಸ್ಸುಗಳ ಸೇವೆಯಲ್ಲಿ ಮೊದಲ ದರಕ್ಕಿಂತ 180-300 ರೂ.ವರೆಗೆ ದರವನ್ನು ಕಡಿತಗೊಳಿಸಲಾಗಿದೆ.











