37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಪಿ ಎಂ ಶ್ರೀ ಮಾದರಿ ಶಾಲೆಗೆ ನಾರಾಯಣ ಬೇಗೂರು ಭೇಟಿ, ಶಾಲೆಯ ಅಭಿವೃದ್ಧಿಗೆ ನೆರವು ನೀಡುವ ಭರವಸೆ

ಬೆಳ್ತಂಗಡಿ: ಶಿಕ್ಷಣ ಪ್ರೇಮಿ, ಕೊಡುಗೈ ದಾನಿ ಬೆಂಗಳೂರಿನ ಶ್ರೀ ಚೆನ್ನಕೇಶವ ಸ್ವಾಮಿ ದೇವಸ್ಥಾನ ಬೇಗೂರು ಇದರ ಧರ್ಮದರ್ಶಿಗಳಾದ ಡಾ. ನಾರಾಯಣ ಬೇಗೂರು ಶಾಲೆಗೆ ಭೇಟಿ ನಿಡಿ ಶಾಲಾ ಪೋಷಕರು ಮತ್ತು ಶಾಲೆಯ ವಿದ್ಯಾರ್ಥಿಗಳೊಂದಿಗೆ ಶೈಕ್ಷಣಿಕ ಸಂವಾದ ನಡೆಸಿದರು.

ಶಾಲೆಯ ಮೂಲಭೂತ ತುರ್ತು ಅಗತ್ಯತೆಗಳನ್ನು ವಿವರಿಸಿದ ಶಾಲಾಭಿವೃದ್ಧಿ ಸಮಿತಿಯ ಸದಸ್ಯರಿಗೆ ಮುಂದಿನ ದಿನಗಳಲ್ಲಿ ಶಾಲೆಯ ಭೌತಿಕ ಅಭಿವೃದ್ಧಿಗೆ ನೆರವು ನೀಡುವ ಭರವಸೆಯನ್ನು ನೀಡಿದರು. ಇವರು ಶಾಲೆಗೆ ಭೇಟಿ ನೀಡುವಲ್ಲಿ ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ಲಕ್ಷ್ಮೀಶ ದೇವಾಡಿಗ, ವಿಘ್ನೇಶ್ ಆಚಾರ್ಯ ಹಾಗೂ ಶಾಲೆಯ ಹಿರಿಯ ವಿದ್ಯಾರ್ಥಿನಿ, ನಿವೃತ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸುಶೀಲಾ ಹೆಗ್ಗಡೆ ನಿರಂತರ ಸಂಪರ್ಕ ಹಾಗೂ ಪ್ರಯತ್ನ ನಡೆಸಿರುತ್ತಾರೆ.

ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಝಮೀರುದ್ದೀನ್, ಉಪಾಧ್ಯಕ್ಷೆ ಶ್ರೀಮತಿ ಆರತಿ ಯರ್ಡೂರು, ಶಾಲಾ ಮುಖ್ಯೋಪಾಧ್ಯಾಯರಾದ ಸೂರ್ಯನಾರಾಯಣ ಪುತ್ತೂರಾಯ ಮತ್ತು ಸಮಿತಿಯ ಸದಸ್ಯರು ಹಾಗೂ ಪೋಷಕರು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ಪಟ್ಟಣ ಪಂಚಾಯತ್ 8 ಮಂದಿ ಪೌರ ಕಾರ್ಮಿಕರ ನೇರ ನೇಮಕಾತಿ

Suddi Udaya

ಉಜಿರೆ: ಎಸ್.ಡಿ.ಎಂ ಪ ಪೂ ಕಾಲೇಜಿನಲ್ಲಿ ಆಟಿದ ಗೌಜಿ ಕಾರ್ಯಕ್ರಮ

Suddi Udaya

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ಕಾರ್ಯದ ಮನೆಮನೆ ಸಂಪರ್ಕದ ಪ್ರಯುಕ್ತ ಶ್ರೀರಾಮ ಕ್ಷೇತ್ರದ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಭೇಟಿ

Suddi Udaya

ಚಂದ್ರಯಾನ-3 ಯಶಸ್ವಿಯಾಗಿದ್ದಕ್ಕೆ ಶುಭ ಹಾರೈಸಿದ ಡಾ. ಡಿ ವೀರೇಂದ್ರ ಹೆಗ್ಗಡೆ

Suddi Udaya

ಬೆಳ್ತಂಗಡಿ : ನಾಳೆ(ಜ.4) ವಿದ್ಯುತ್ ನಿಲುಗಡೆ

Suddi Udaya

ಕುಂಟಿನಿ ಸ.ಕಿ.ಪ್ರಾ. ಶಾಲೆಯ ಎಸ್.ಡಿ.ಎಮ್.ಸಿ. ಸಮಿತಿಯ ಅಧ್ಯಕ್ಷರಾಗಿ ಶ್ರೀಮತಿ ಪವಿತ್ರ, ಉಪಾಧ್ಯಕ್ಷರಾಗಿ ಇಲ್ಯಾಸ್ ಆಯ್ಕೆ

Suddi Udaya
error: Content is protected !!