September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬಳಂಜ ಶಾಲೆಯಲ್ಲಿ ಶಿಕ್ಷಣ ಟ್ರಸ್ಟ್ ನೇತೃತ್ವದಲ್ಲಿ ಚಿಣ್ಣರ ಅಂಗಳಕ್ಕೆ ಶಿಲಾನ್ಯಾಸ

ಬಳಂಜ: ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಮತ್ತು ಪ್ರೌಢಶಾಲೆ ಬಳಂಜಿ ಇಲ್ಲಿ ಶಿಕ್ಷಣ ಟ್ರಸ್ಟ್ ನೇತೃತ್ವದಲ್ಲಿ, ಉದ್ಯಮಿ ಶೇಖರ್ ದೇವಾಡಿಗ ಇವರ ಸಹಕಸರದೊಂದಿಗೆ ಎಲ್.ಕೆ.ಜಿ ಮತ್ತು ಯು‌‌.ಕೆ.ಜಿ ಮಕ್ಕಳಿಗೊಸ್ಕರ ಚಿಣ್ಣರ ಅಂಗಳಕ್ಕೆ ಶಿಲಾನ್ಯಾಸವನ್ನು ದೀಪ್ತಿ ಶೇಖರ್ ದೇವಾಡಿಗ ಪಾಲಬೆ ಜ 5ರಂದು ನೇರವೇರಿಸಿ ಶುಭಕೋರಿದರು.

ಬಳಂಜ‌ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಮನೋಹರ್ ಬಳಂಜ‌ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮೀಣ ಭಾಗದ ಮಕ್ಕಳಿಗೆ ಉತ್ಕೃಷ್ಟ ಮಟ್ಟದ ಶಿಕ್ಷಣ ಸಿಗಬೇಕೆಂಬುದು ಶಿಕ್ಷಣ ಟ್ರಸ್ಟ್ ನ‌ ಉದ್ದೆಶವಾಗಿದೆ. ಈಗಾಗಲೇ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸಲಾಗಿದೆ.‌ ಮುಂದೆ ಇನ್ನಷ್ಟು ಕಾಮಗಾರಿಯು ಪೂರ್ಣಗೊಳ್ಳಲಿದೆ ಎಂದರು.

ಬಳಂಜ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆರ್ಚಕ ಮಂಜುನಾಥ ಭಟ್ ವೈದಿಕ ವಿಧಿ ವಿಧಾನ ನೇರವೇರಿಸಿದರು.

ಈ ಸಂದರ್ಭದಲ್ಲಿ ಬಳಂಜ ಗ್ರಾ.ಪಂ‌ ಅಧ್ಯಕ್ಷೆ ಶೋಭಾ ಕುಲಾಲ್, ಪಿಡಿಓ ಶಶಿಕಲಾ, ಬಳಂಜ‌ ಶಾಲಾ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರತ್ನಾಕರ ಪೂಜಾರಿ, ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ಸುಲೋಚನಾ, ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ರತ್ನರಾಜ್ ಜೈನ್, ಟ್ರಸ್ಟಿಗಳಾದ ಸಂತೋಷ್ ಕುಮಾರ್ ಕಾಪಿನಡ್ಕ,ವಿನು ಬಳಂಜ, ರಾಕೇಶ್ ಹೆಗ್ಡೆ,ಪ್ರವೀಣ್ ಕುಮಾರ್ ಹೆಚ್.ಎಸ್, ಪ್ರಮೋದ್ ಕುಮಾರ್ ಹೊಸಮನೆ , ಬಳಂಜ ಗ್ರಾ.ಪಂ‌ ಸದಸ್ಯರಾದ ಯಕ್ಷಿತಾ ದೇವಾಡಿಗ, ಲೀಲಾವತಿ, ಬೇಬಿ ನಾರಾಯಣ, ರವೀಂದ್ರ ಬಿ ಅಮೀನ್, ಜ್ಯೋತಿ ಮಹಿಳಾ ಮಂಡಲದ ಅಧ್ಯಕ್ಷೆ ಚೇತನಾ ಜೈನ್, ಉಮಾಮಹೇಶ್ವರ ಯುವಕ ಮಂಡಳ ಅಧ್ಯಕ್ಷ ಸುಕೇಶ್ ಜೈನ್, ರಮಾನಾಥ ಶೆಟ್ಟಿ, ಪುರಂದರ ಪೂಜಾರಿ, ಪ್ರವೀಣ್ ಪೂಜಾರಿ, ಗಣೇಶ್ ದೇವಾಡಿಗ, ಶಿಕ್ಷಕಿಯರಾದ ಹೇಮಾ, ಕೀರ್ತಿ, ಶ್ರಿಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೇಲ್ವಿಚಾರಕಿ ಪದ್ಮಾವತಿ, ಸೇವಾನಿರತರಾದ ಪ್ರಮಿಳಾ, ಉಮಾವತಿ ಹಾಗೂ ಇತರರು ಉಪಸ್ಥಿತರಿದ್ದರು.

ಬಳಂಜ ಶಾಲಾ ಹಳೆ ವಿದ್ಯಾರ್ಥಿ ಸಂಘದ ನಿಕಟಪೂರ್ವಾಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಸ್ವಾಗತಿಸಿ, ವಂದಿಸಿದರು.

Related posts

ಟೀಂ ಅಭಯಹಸ್ತ ವತಿಯಿಂದ ಅಳದಂಗಡಿ ಸತ್ಯಸಾರಮುಪ್ಪಣ್ಯ ದೈವಸ್ಥಾನದ ಗುಳಿಗ ಸಾನಿಧ್ಯ ಅಭಿವೃದ್ಧಿ ಕಾರ್ಯಕ್ಕೆ ಸಹಕಾರ

Suddi Udaya

ಉಜಿರೆ ಶ್ರೀ ಧ. ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ

Suddi Udaya

ಚಿಬಿದ್ರೆ ಮತ್ತು ನೆರಿಯ ಗ್ರಾಮಗಳಲ್ಲಿ ಹಾನಿಗೊಳಗಾದ ಸದಸ್ಯರ ತೋಟಗಳಿಗೆ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಂಘದ ಪದಾಧಿಕಾರಿಗಳ ಭೇಟಿ

Suddi Udaya

ಪಜಿರಡ್ಕ ಶ್ರೀ ಸದಾಶೀವೇಶ್ವರ ದೇವಸ್ಥಾನದಲ್ಲಿ ಶ್ರೀ ರಾಮಚಂದ್ರ ನ ಪ್ರಾಣಪ್ರತಿಷ್ಠೆಯ ಅಂಗವಾಗಿ ವಿವಿಧ ಕಾರ್ಯಕ್ರಮ ಹಾಗೂ ಕರಸೇವಕರಿಗೆ ಗೌರವಾರ್ಪಣೆ

Suddi Udaya

ಮನ್ ಶರ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಗೆ ನೂತನ ಪ್ರಾಂಶುಪಾಲರಾಗಿ ಝೀನತ್ ಬಾನು ಅಧಿಕಾರ ಸ್ವೀಕಾರ

Suddi Udaya

ಲಾಯಿಲ: ಆಟೋಚಾಲಕ ನಾಗೇಶ್ ನಿಧನ

Suddi Udaya
error: Content is protected !!